ಕೋಟೆ ಕಾಲಂ:- ಗ್ರಾಮ ಪಂಚಾಯತಿ ಕದನ. -ಹರೀಶ್ ಹೆಚ್ ಆರ್ ಕೋಟೆ. ನೋಡು ಸಂಸಾರದಲ್ಲಿ ರಾಜಕೀಯ ನಿನ್ನ ಮನೆ ಯಲ್ಲಿ ನೀನೆ ಪರಕೀಯ..... ಸಿ.ಅಶ್ವತ್ ಅವರ ಕಂಚಿನ ಕಂಠದಲ್ಲಿ ಬರುತ್ತಿದ್ದ ಹಾಡು ಕೇಳಿದವನಿಗೆ ಒಂದು ಕ್ಷಣ ಗ್ರಾಮಪಂಚಾಯತಿ ಚುನಾವಣೆ ದ್ರಶ್ಯಾವಳಿಗಳು ಕಣ್ಣ ಮುಂದೆಯೇ ಹಾದು ಹೋದವು ಡಿಸೆಂಬರ್ ತಿಂಗಳಿನಲ್ಲಿ ಎರಡು ಹಂತದಲ್ಲಿ ನಡೆಯಲಿರುವ ಗ್ರಾಮ ಪಂಚಾಯತಿ ಚುನಾವಣೆ ಮುಗಿಯುವಷ್ಟರಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ಅದೆಷ್ಟು ಕುರುಕ್ಷೇತ್ರ ರಾಮಾಯಣ ನಡೆಯುತ್ತವೆಯೋ ಅದೆಷ್ಟು ತಲೆಗಳು ಉರುಳುತ್ತವೋ ದ್ವೇಶದ ದಳ್ಳುರಿಗೆ ಅದೆಷ್ಟು ಮನೆಗಳು ಆಹುತಿಯಾಗುತ್ತವೋ ಬಲ್ಲವರ್ಯಾರು ಪ್ರಶಾಂತತೆ ಹಾಗೂ ಲವಲವಿಕೆಯಿಂದ ಕೂಡಿದ ಗ್ರಾಮಾಂತರ ಪ್ರದೇಶದ ಜನರ ಮನಸ್ಸು ಬುದ್ದಿಗೆ ಲಕ್ವಾಹೊಡೆಯುವುದೇ ಗ್ರಾಮಪಂಚಾಯತಿ ಚುನಾವಣೆಗಳಲ್ಲಿ ಈ ಸಂದರ್ಭದಲ್ಲಿ ಅಣ್ಣತಮ್ಮಂದಿರೇ ಶತ್ರುಳಾಗುತ್ತಾರೆ ಕಷ್ಟಕ್ಕಾಗುವ ಬಂಧುವೇ ಕತ್ತಿಮಸೆಯುತ್ತಾನೆ ಹೆಂಡತಿ ಮಕ್ಕಳೆ ಮನೆ ಯಜಮಾನನ ಮಾತನ್ನು ಕಾಲ ಕಸವಾಗಿ ಕಾಣುತ್ತಾರೆ ದಾಯಾದಿ ದ್ವೇಷತಾರಕಕ್ಕೇರುತ್ತದೆ ಊರೇ ಇಬ್ಬಾಗವಾದರೆ ಜಾತಿ ಉಪ ಜಾತಿಯ ಪ್ರಜ್ಞೆ ಹೆಚ್ಚಾಗಿ ಯಾರನ್ನೂ ಯಾರೂ ನಂಬದಂತಾಗುತ್ತದೆ, ಕಳೆದ ಚುನಾವಣೆಯ ಸಂದರ್ಭದಲ್ಲಿ ಒಡೆದ ಮನಸ್ಸುಗಳೆ ಇನ್ನೂ ಒಂದಾಗಿಲ್ಲಾ ಅಷ್ಟರಲ್ಲಿ ಮತ್ತೆ ಚುನಾವಣೆ ಬಂದಿದ್ದು ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚಿನ ಬಿರುಸು ಕಂಡು ಬರಲಿದೆ ಈ ಬಾರೀ ಕರೋನಾ ಪಿಡುಗಿನಿಂದ ತತ್...
News/information/advertising/entertainment