ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

#ರಕ್ತದಾನ ಶಿಬಿರ -ಹಾಸನ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ರಕ್ತದಾನ ಶಿಬಿರ -ಹಾಸನ

ಜಮಾಅತೆ ಇಸ್ಲಾಮೀ ಹಿಂದ್, ಕರ್ನಾಟಕದ ವತಿಯಿಂದ 2020 ಅಕ್ಟೋಬರ್ 23 ರಿಂದ ನವೆಂಬರ್ 5 ರ ತನಕ *ಪ್ರವಾದಿ ಮುಹಮ್ಮದ್(ಸ) ಮಾನವತೆಯ ಮಾರ್ಗದರ್ಶಕ* ಎಂಬ ಧ್ಯೇಯವಾಕ್ಯದಡಿ ನಡೆಸಲಾಗುತ್ತಿರುವ ರಾಜ್ಯವ್ಯಾಪಿ ಅಭಿಯಾನದ ಪ್ರಯುಕ್ತ ಸಾಲಿಡಾರಿಟಿ ಯೂಥ್ ಮೂಮೆಂಟ್, ಹ್ಯುಮ್ಯಾನಿಟೇರಿಯನ್ ರಿಲೀಫ್ ಸೊಸೈಟಿ, ಸಮಾಜ ಸೇವಾ ಘಟಕ. ಜಮಾಅತೆ ಇಸ್ಲಾಮೀ ಹಿಂದ್, ಹಾಸನದ ವತಿಯಿಂದ ದಿನಾಂಕ 3 ನವೆಂಬರ್ 2020, ಸಮಯ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಘಂಟೆಯ ವರೆಗೆ ನಗರದ ಇಸ್ಲಾಮಿಕ್ ಸೆಂಟರ್ ನಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಏರ್ಪಡಿಸಲಾಯಿತು. ಇದರಲ್ಲಿ ಸರ್ವಧರ್ಮೀಯರು ಪಾಲ್ಗೊಂಡು ರಕ್ತದಾನ ಮಾಡಿದರು. *ಹರೀಶ್ ಹೆಚ್ ಆರ್ ಕೋಟೆ * #ರಕ್ತದಾನ ಶಿಬಿರ