ಗ್ರಾ.ಪಂ ಚುನಾವಣೆ ಮತ ಎಣಿಕೆಗೆ ಸಿದ್ದತೆ :- ಮದ್ಯ ಮಾರಾಟ ನಿಷೇಧ ಹಾಗೂ ನಿಷೇಧ್ಜ್ಞಾನೆ ಜಾರಿ (ಕರ್ನಾಟಕ ವಾರ್ತೆ) : ಗ್ರಾಮ ಪಂಚಾಯಿತಿ ಚುನಾವಣೆಯ ಮತ ಎಣಿಕೆ ಕಾರ್ಯ ಡಿ.30 ರಂದು ನಡೆಯಲಿದ್ದು ಆಯಾ ತಾಲ್ಲೂಕಿನಲ್ಲಿ ಮತ ಎಣಿಕೆ ಕೇಂದ್ರಗಳನ್ನು ಈಗಾಗಲೇ ಗುರುತಿಸಿ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ ಚುನಾವಣೆ ನಡೆದ ಕ್ಷೇತ್ರಗಳಿಗೆ ಅನುಗಣವಾಗಿ ಟೇಬಲ್‍ಗಳನ್ನು ಅಳವಡಿಸಿಕೊಂಡು ಎಣಿಕೆ ಕಾರ್ಯ ನಡೆಸಲಾಗುವುದು ಮತ ಎಣಿಕೆ ಕೇಂದ್ರಗಳ ವಿವರ :- ಹಾಸನ-ಸರ್ಕಾರಿ ಕಲಾ ಕಾಲೇಜು ಒಟ್ಟು 65 ಟೇಬಲ್‍ಗಳು 195 ಸಿಬ್ಬಂದಿಗಳು, ಅರಸೀಕೆರೆ-ಸೆಂಟ್ ಮೇರಿಸ್ ಪ್ರೌಢ ಶಾಲೆಯಲ್ಲಿ ಒಟ್ಟು 88 ಟೇಬಲ್‍ಗಳು 264 ಸಿಬ್ಬಂದಿಗಳು, ಚನ್ನರಾಯಪಟ್ಟಣ - ನವೋದಯ ಪದವಿ ಪೂರ್ವ ಕಾಲೇಜಿನಲ್ಲಿ ಒಟ್ಟು 88 ಟೇಬಲ್‍ಗಳು 264 ಸಿಬ್ಬಂದಿಗಳು, ಹೊಳೆನರಸೀಪುರ - ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಒಟ್ಟು 50 ಟೇಬಲ್‍ಗಳು 150 ಸಿಬ್ಬಂದಿಗಳು, ಆಲೂರು-ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಒಟ್ಟು 30 ಟೇಬಲ್‍ಗಳು 90 ಸಿಬ್ಬಂದಿಗಳು, ಅರಕಲಗೂಡು-ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಒಟ್ಟು 93 ಟೇಬಲ್‍ಗಳು 279 ಸಿಬ್ಬಂದಿಗಳು, ಬೇಲೂರು-ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಒಟ್ಟು 74 ಟೇಬಲ್‍ಗಳು 222 ಸಿಬ್ಬಂದಿಗಳು, ಸಕಲೇಶಪುರ-ಸಂತ ಜೋಸೆಫ್ ಶಾಲೆಯಲ್ಲಿ ಒಟ್ಟು 33 ಟೇಬಲ್ 99 ಸಿಬ್ಬಂದಿಗಳು. ಒಟ್...
News/information/advertising/entertainment