ಲೇಖಕರು ಮತ್ತು ಸಂಪಾದಕರು ಹರೀಶ್ .ಹೆಚ್ ಆರ್ ಕೋಟೆ. ....ಜ್ಯೋತಿಷ್ಯ......ಭವಿಷ್ಯ ಕರೋನಾ ಈ ಮೂರಕ್ಷರ ಈ ವರ್ಷ ಮಾಡಿದಷ್ಟು ಅನಾಹುತ ಯಾವ ಮಹಾಯುದ್ದಕ್ಜೇನು ಕಡಿಮೆ ಇಲ್ಲಾ ಒಂದೆಡೆ ಅತಿಯಾದ ತಂತ್ರಜ್ಞಾನ ದ ಆವಿಷ್ಕಾರ ವಿಜ್ಞಾನದ ಊಹೆಗೂ ನಿಲುಕದ ನಾಗಾಲೋಟಾ ಮನುಷ್ಯ ನಿಗೆ ಸಾವಿನ ಸುಳಿವು ಸಿಗದಂತೆ ಮಾಡುವ ಚಾಲೆಂಜ್ ಹಾಕುತ್ತಿದ್ದ ವೈದ್ಯಕೀಯ ವಿಜ್ಞಾನ ದ ದುರಹಂಕಾರ ಸೂಪರ್ ಪವರ್ ಆಗುವ ಮುಂದುವರೆದ ದೇಶಗಳ ದುರಾಸೆ ಎಲ್ಲವನ್ನು ಹಣದಲ್ಲಿಯೇ ಅಳೆಯುವ ಮನುಷ್ಯನ ಮೆಟೀರಿಯಲಿಸ್ಟಿಕ್ ಮನೋಭಾವ ಎಲ್ಲದಕ್ಕೂ ತಿಲಾಂಜಲಿ ನೀಡುವಂತೆ ಮಾಡಿದ ಕೊರೋನಾ ಮನುಷ್ಯನನ್ನು ವಾಪಾಸು ಭ್ರಮಾಲೋಕದಿಂದ ಹೊರತಂದು ನೀನು ಇಷ್ಟೇ ಎಂಬ ವಾಸ್ತವದ ಮಸಣಕ್ಕೆ ಎಳೆತಂದು ಅನಾಥ ವಾಗಿ ಬಿಸಾಡಿ ಹೋಯಿತು ಕರೋನಾ ದಲ್ಲಿಯೂ ಬಿಡದೆ ದುಂಡಾಗಿ ಮೇಯ್ದ ನಮ್ಮ ರಾಜಕಾರಣಿಗಳು ಅಧಿಕಾರಿಗಳು ಪ್ರಥಮ ಬಾರಿಗೆ ಸಾವಿನ ಭಯದಿಂದ ನಲುಗಿಹೋದರಲ್ಲದೆ ಹಲವರು ಇಹಲೋಕ ತ್ಯಜಿಸಿದರು ರಾಜಕಾರಣಿಗಳ ಹೆಣವನ್ನು ಅನಾಥ ಶವದಂತೆ ಸಂಸ್ಕಾರ ಮಾಡಿದ್ದು ಅಮಾನವೀಯ ಎನಿಸಿದರೂ ಸಾವಿನಲ್ಲು ಪ್ರಥಮ ಬಾರಿಗೆ ಸಮಾನತೆ ಕಾಪಾಡಿದ್ದಾರೆ ಎನಿಸಿತು ಕೊರೋನಾ ಚಿಕಿತ್ಸೆಗಾಗಿ ಖರ್ಚಾದ ಕೋಟ್ಯಾಂತರ ರೂಪಾಯಿ ಹಣ ಯಾರ್ಯಾರ ಪಾಲಾಯಿತೋ ತಿಳಿಯದು ಪ್ರತಿ ಜಿಲ್ಲೆಯಲ್ಲಿಯೂ ನಿತ್ಯ ಸರ್ಕಾರಿ ಲೆಕ್ಕದಲ್ಲಿ ನೂರಾರು ಜನ ಕೊರೋನಾ ಸೋಂಕಿತರು ಪತ್ತೆಯಾದರು ಅವರ ಹೆಸರಲ್ಲಿ ಹಣ ಖರ್ಚಾಯಿತು ಹಲವಾರು ಜನರು ದಿಡೀರ್ ಶ...
News/information/advertising/entertainment