ಮೀಸಲು ರಾಜಕೀಯ - ಕೋಟೆ ಕಾಲಂ
ಹರೀಶ್ ಹೆಚ್ ಆರ್
ಕೋಟೆ
ರಾಜಕಾರಣಿಗಳು ತಮ್ಮಸ್ವಾರ್ಥಕ್ಕಾಗಿ ವ್ಯವಸ್ಥೆಯನ್ನು
ಬಳಸಿಕೊಂಡರೆ ಅದು ಅಭಿವೃದ್ಧಿ ಗೆ ಮಾರಕ ಹಾಗೂ ಪ್ರಜಾಪ್ರಭುತ್ವವನ್ನು ಅಸ್ಥಿರ ಗೊಳಿಸುವ
ಪ್ರಕ್ರಿಯೆ ಎಂದು ಗೊತ್ತಿದ್ದರೂ ಪದೇಪದೇ ಅದೇ ಪ್ರಹಸನ ಮುಂದುವರೆಯುತ್ತಿದೆ ರಾಜಕಾರಣ ಕ್ಕೆ
ಮೀಸಲಾತಿಯನ್ನು ಮನಬಂದಂತೆ ಬದಲಾಯಿಸುವ ಪ್ರಕ್ರಿಯೆಯು ನಡೆಯುತ್ತಿದೆ ಸ್ಥಳಿಯ ಸಂಸ್ಥೆ ಗಳ ಅಧ್ಯಕ್ಷ
ಉಪಾಧ್ಯಕ್ಷ ಸ್ಥಾನ ಮೀಸಲಾತಿ ನಿಗದಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ ತಮ್ಮ ಪಕ್ಚ ಸ್ಥಳೀಯ
ಸಂಸ್ಥೆ ಗಳ ಚುನಾವಣೆಯಲ್ಲಿ ಅಧಿಕಾರ ಹಿಡಿಯಲು ವಿಫಲವಾದಾಗ ಆಡಳಿತಾರೂಡ ಪಕ್ಷಗಳು ವಿಪಕ್ಷ ಬಹುಮತ
ಹೊಂದಿದ್ದರೂ ಅಧಿಕಾರದಿಂದ ದೂರ ಇಡುವ ಸಲುವಾಗಿ ವಿಪಕ್ಷದಲ್ಲಿ ಇಲ್ಲದ ಹಾಗೂ ತಮ್ಮಲ್ಲಿ ಮಾತ್ರ
ಗೆಲುವು ಸಾಧಿಸಿರುವ ಕೆಟಗರಿಗೆ ಮೀಸಲು ನಿಗದಿಪಡಿಸಿ ಎದುರಾಳಿಗಳಿಗೆ ಬಹುಮತವಿದ್ದರೂ ಅಧಿಕಾರ
ಸಿಗದಂತೆ ಮಾಡುವುದು ಆನಂತರ ಅವರು ಪ್ರತಿಯೊಂದು ಕೆಲಸಕ್ಜೂ ಅಡ್ಡಗಾಲು ಹಾಕಿ ಅಭಿವ್ರದ್ದಿ
ಕಾರ್ಯಕ್ರಮ ನಡೆಯದಂತೆ ತಡೆಯುವುದು ಮಾಮೂಲಾಗಿದ್ದು ರಾಜಕೀಯ ಚದುರಂಗಕೆ ಜನರು ಬೆಲೆತೆರಬೇಕಾಗಿದೆ
ಹಾಸನ ಜಿಲ್ಲಾಪಂಚಾಯತಿಯಲ್ಲಿ ಜೆಡಿಎಸ್ ಬಹುಮತಹೊಂದಿದ್ದರೂ ಅದನ್ನು ಅಧಿಕಾರದಿಂದ ದೂರ ಇಡುವ
ಸಲುವಾಗಿ ಅಧ್ಯಕ್ಷಸ್ಥಾನವನ್ನು ಎಸ್ಟಿ ಗೆ ಮೀಸಲು ಮಾಡುವ ಮೂಲಕ ರಾಜಕೀಯ ದಾಳ ಉರುಳಿಸಿ
ಅಧಿಕಾರದಿಂದ ವಂಚಿಸಲಾಗಿತ್ತು ಕಾಂಗ್ರೆಸ್ ಅಂದು ಮಾಡಿದ ಲೋಪದಿಂದಾಗಿ ಜಿಲ್ಲಾಪಂಚಾಯತ್ನಲ್ಲಿ
ಅಧ್ಯಕ್ಷ ರಿಗೆ ಯಾವುದೇ ತಿರ್ಮಾನ ಕೈ ಗೊಳ್ಳಲು ಸಾಧ್ಯವಾಗುತ್ತಿಲ್ಲಾ ಅದರ ಪರಿಣಾಮ ಜಿಲ್ಲೆಯ
ಗ್ರಾಮಾಂತರ ಪ್ರದೇಶಗಳ ಅಭಿವ್ರದ್ದಿಯ ಮೇಲೆ ಉಂಟಾಗುತ್ತಿದೆ ಈಗ ಅದೇ ತಪ್ಪು ಮುಂದುವರೆಸಿರುವ
ಬಿಜೆಪಿ ಹಾಸನ ಹಾಗೂ ಅರಸೀಕೆರೆ ಸ್ಥಳೀಯ ಸಂಸ್ಥೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಮೀಸಲಾತಿ
ನಿಗದಿಯಲ್ಲಿ ರಾಜಕೀಯ ತಂತ್ರಗಾರಿಕೆ ಮಾಡಿದೆ ಮೀಸಲಾತಿ ಪ್ರಕಟವಾಗದ ಹಿನ್ನಲೆಯಲ್ಲಿ ಎರಡು ವರ್ಷಗಳ
ಅವಧಿಯಿಂದ ಸ್ಥಳಿಯ ಸಂಸ್ಥೆ ಗಳು ಕಾರ್ಯನಿರ್ವಹಿಸಲು ಸಾದ್ಯವಾಗಿರಲಿಲ್ಲಾ ಈಗ ನಿಗದಿಯಾಗಿದ್ದರೂ
ಮತ್ತೆ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರುವ ಸಾದ್ಯತೆ ಇರುವ ಕಾರಣ ಹಾಸನ ಹಾಗೂ ಅರಸೀಕೆರೆ ನಗರಸಭೆ
ಗಳಲ್ಲಿ ಮತ್ತೆ ಅಭಿವ್ರದ್ದಿ ಕಾರ್ಯಗಳಿಗೆ ತೊಡಕಾಗಲಿದೆ ರಾಜ್ಯದಲ್ಲಿ ಹರಿಹರ ಹಾಗೂ ಕೊಪ್ಪಳಕ್ಕೆ
ಮಾತ್ರ ಈ ಅವಧಿಯಲ್ಲಿ ಎಸ್ಟಿ ಗೆ ಅಧ್ಯಕ್ಷಸ್ತಾನ ಮೀಸಲಿರಿಸಲು ಅವಕಾಶವಿದೆ ಆದರೆ ಅದನ್ನು ಏಕಾಏಕಿ
ಜೆಡಿಎಸ್ ಅನ್ನು ಅಧಿಕಾರದಿಂದ ದೂರ ಇಡುವ ಸಲುವಾಗಿಯೇ ಹಾಸನ ಹಾಗೂ ಅರಸೀಕೆರೆಗೆ ನಿಗದಿಪಡಿಸಿ
ಅನ್ಯಾಯ ಎಸಗಲಾಗಿದ್ದು ನ್ಯಾಯಾಲಯದ ಮೊರೆ ಹೋಗುವುದಾಗಿ ಜೆಡಿಎಸ್ ಮುಖಂಡರು ಎಚ್ಚರಿಸಿದ್ದಾರೆ
ಒಟ್ಟಾರೆ ಈ ಎಲ್ಲಾ ಬೆಳವಣಿಗೆ ಗಮನಿಸಿದರೆ ರಾಜಕೀಯ ಆಟಕ್ಕೆ ಬಲಿಯಾಗಿ ಅಭಿವ್ರದ್ದಿ ನೆನಗುದಿಗೆ
ಬೀಳುವುದು ಖಚಿತ ಎನಿಸುತ್ತದೆ ರಾಜಕೀಯ ಪಕ್ಷಗಳ ಹಾಗು ನಾಯಕರ ಪ್ರತಿಷ್ಠೆಗಾಗಿ ಯಾರೇ ಆಗಲಿ ಬಹುಮತ
ಹೊಂದಿರುವವರನ್ನು ಅಧಿಕಾರದಿಂದ ದೂರ ಇಡುವುದು ಪ್ರಜಾಪ್ರಭುತ್ವ ಕ್ಕೆ ಮಾರಕ ಬಹುಮತಕ್ಕೆ
ಪ್ರಜಾಪ್ರಭುತ್ವದಲ್ಲಿ ಮಾನ್ಯತೆ ಅದನ್ನೆ ತಿರಸ್ಕರಿಸಿದರೆ ಜನರ ತೀರ್ಮಾನಕ್ಕೆ ವಿರುದ್ದವಾಗಿ
ನಡೆದಂತೆ ಎಂಬ ವಿಚಾರವನ್ನು ಎಲ್ಲಾ ರಾಜಕೀಯ ಪಕ್ಷಗಳು ಅರ್ಥಮಾಡಿಕೊಳ್ಳಬೇಕಿದೆ.
ವಿಮರ್ಶಾ-vimarsha
ಬಂಧುಗಳೇ, ಪ್ರತಿಯೊಂದು ಜನರು ನೆಮ್ಮದಿಯಿಂದ ಬದುಕಲು ಇಷ್ಟಪಡುತ್ತಾರೆ, ಆದರೂ ಹಲವಾರು ಸಮಸ್ಯೆಗಳಿಂದ ಬಳಲುತ್ತಿದ್ದಾರೆ, ಅದರಲ್ಲಿ ಮುಖ್ಯ ಸಮಸ್ಯೆಗಳು ಅಂದರೆ ಆರೋಗ್ಯ ಮತ್ತು ಹಣಕಾಸು ಮತ್ತು ಉದ್ಯೋಗ ಭದ್ರತೆ. ನಮ್ಮಲ್ಲಿ ಮೇಲ್ಕಂಡ ಸಮಸ್ಯೆಗಳಿಗೆ ಸಮಂಜಸವಾದ ಪರಿಹಾರವಿದೆ , ನೀವು ಆತಂಕ ಪಡುವ ಅಗತ್ಯವಿಲ್ಲ, ಬನ್ನಿ ನಮ್ಮೂಡನೆ ಸೇರಿರಿ, ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳರಿ. ನಾವು ಸಂವಹನ ಮಾಡಲು ಅಂತರ್ಜಾಲ ಮತ್ತು ನೇರ ಭೇಟಿ ಕಾರ್ಯಕ್ರಮ ಮೂಲಕ ಕೆಲವೊಂದು ಮಾರ್ಗದರ್ಶನಗಳನ್ನು ನೀಡುತ್ತೇವೆ, ಅದಕ್ಕಾಗಿ ನೀವು ನಿಮ್ಮ ವಾಟ್ಸಾಪ್ ಸಂಖ್ಯೆಯನ್ನು ನಮಗೆ ಕಳುಹಿಸಿದರೆ, ಮಾರ್ಗದರ್ಶನ ಅವಕಾಶ ನಿಮಗೆ ಲಭಿಸುತ್ತದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Vimarsha.info