ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

#ಹಾಸನ ಜಿಲ್ಲಾಧಿಕಾರಿಗಳ ಮನವಿ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಹಾಸನ ಜಿಲ್ಲೆಯ ನಿವಾಸಿಗಳಿಗೆ ಜಿಲ್ಲಾಧಿಕಾರಿ ಮಾನ್ಯ ಶ್ರೀ ಆರ್ ಗಿರೀಶ್ ರವರ ಕಳವಳ ಮತ್ತು ಮನವಿ.

14/09/2020 ಹಾಸನ ಜಿಲ್ಲಾಧಿಕಾರಿ ಮಾನ್ಯ ಶ್ರೀ  ಆರ್ ಗಿರೀಶ್ ರವರ ಕಳವಳ ಮತ್ತು  ಮನವಿ.   ಜಿಲ್ಲೆಯಲ್ಲಿ ಕೊರೋನಾ ಸೋಂಕು ತೀವ್ರಗತಿಯಲ್ಲಿ ಹೆಚ್ಚುತ್ತಿರುವುದರಿಂದ ಜಿಲ್ಲಾಡಳಿತ ಸಾರ್ವಜನಿಕರಿಗೆ ಈ ಕೆಳಕಂಡಂತೆ ಮನವಿ ಮಾಡಿದೆ. 1. ಜಿಲ್ಲೆಯಲ್ಲಿ ಶೇ 70 ರಷ್ಟು ಸೋಂಕಿತ ಪ್ರಕರಣಗಳು ರೋಗ ಲಕ್ಷಣಗಳನ್ನು ಹೊಂದಿಲ್ಲದ ಪ್ರಕರಣಗಳಾಗಿವೆ, ಈ ಹಿನ್ನಲೆಯಲ್ಲಿ ಆರೋಗ್ಯ ಇಲಾಖಾ ಸಿಬ್ಬಂದಿ ರೋಗ ಲಕ್ಷಣಗಳನ್ನು ಹೊಂದಿಲ್ಲದೇ ಇರುವವರನ್ನು ಸಹ ತಪಾಸಣೆ ನಡೆಸುತ್ತಿದ್ದು ಅವರೊಂದಿಗೆ ಸಹಕರಿಸಲು ಕೋರಿದೆ. 2. ರೋಗ ಲಕ್ಷಣಗಳನ್ನು ಹೊಂದಿಲ್ಲದ ಸೋಂಕಿತರನ್ನು ಗುರುತಿಸಲು ವಿಳಂಭವಾದಲ್ಲಿ ಅವರಿಂದ ಇನ್ನಷ್ಟು ಜನರಿಗೆ ಸೋಂಕು ಹಬ್ಬುವ ಸಾಧ್ಯತೆ ಇದೆ.  3. ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್ ಸಾವು ಸಂಭವಿಸಿದ್ದು ಇದಕ್ಕೆ ತಡವಾಗಿ ಆಸ್ಪತ್ರೆಗೆ ದಾಖಲಾಗುತ್ತಿರುವುದು ಪ್ರಮುಖ ಕಾರಣವಾಗಿದೆ.  ಬಹಳಷ್ಟು ಜನರು ರೋಗ ಲಕ್ಷಣಗಳನ್ನು ನಿರ್ಲಕ್ಷಿಸಿ ಕೊನೆಯ ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿರುವುದರಿಂದ ಚಿಕಿತ್ಸೆ ಫಲಕಾರಿಯಾಗದೆ ಸಾವು ಸಂಭವಿಸುತ್ತಿದೆ. ಆದ್ದರಿಂದ ಯಾವುದೇ ರೋಗ ಲಕ್ಷಣಗಳನ್ನು ನಿರ್ಲಕ್ಷಿಸದೆ ಕೊರೋನಾ ಚಿಕಿತ್ಸೆ ಪಡೆಯಲು ಕೋರಿದೆ. 4. ವಯೋ ವೃದ್ದರು, ರಕ್ತದೊತ್ತಡ, ಮಧುಮೇಹ ಇತ್ಯಾದಿ ರೋಗ ಲಕ್ಷಣಗಳನ್ನು ಹೊಂದಿರುವವರು ಕೊರೋನಾಗೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿದ್ದು ಇಂತಹವರು ರೋಗ ಲಕ್ಷಣ ಇಲ್ಲದಿದ್ದರು ಸಹ ಕೋವಿ