ವಿಷಯಕ್ಕೆ ಹೋಗಿ

ಇನ್ನೆಷ್ಟು ಅಮಾಯಕಿಯರು ಬಲಿಯಾಗಬೇಕು-ಕೋಟೆ ಕಾಲಂ

ವಿಮರ್ಶಾ -vimarsha

ಕೋಟೆ ಕಾಲಂ
ಲೇಖಕರು-ಹರೀಶ್ ಹೆಚ್ ಆರ್ (ಕೋಟೆ )

ದೇಶವನ್ನು ಮಾತೆಗೆ ಹೋಲಿಸುವ ಸಂಸ್ಕ್ರತಿ ಒಂದೆಡೆ ಮತ್ತೊಂದೆಡೆ ಜೀವನದಿಗಳನ್ನು ಹುಟ್ಟಿದ ಮಣ್ಣನ್ನು ತಾಯಿಯೆಂದು ಪೂಜಿಸುವ ಸಂಸ್ಕ್ರತಿ ಅದೂ ಇದೂ ಎಂದು ಹೆಣ್ಣನ್ನು ಪೂಜನೀಯ ವಾಗಿ ಕಾಣುತ್ತೇವೆ ಎಂದು ಎದೆಉಬ್ಬಿಸಿಕೊಂಡು ಹೇಳುವ ನಮ್ಮ ದೇಶದಲ್ಲಿ ನಡೆಯುವ ಅತ್ಯಾಚಾರ ಪ್ರಕರಣಗಳು ಇಡೀ ಜಗತ್ತನ್ನೆ ಆಗಾಗ್ಗೆ ಬೆಚ್ಚಿಬೀಳಿಸುತ್ತಿರುತ್ತವೆ
ಒಂದುಪ್ರಕರಣ ಮಾಸುವ ಮುನ್ನವೇ ಮತ್ತೊಂದು ಎಂಬಂತೆ ಪೈಶಾಚಿಕ ಅತ್ಯಾಚಾರ ಪ್ರಕರಣಗಳು ನಿಲ್ಲುವ ಲಕ್ಷಣ ಕಾಣದೆ ನಡೆಯುತ್ತಿರುವುದು ಇಡೀ ಸಮಾಜ ತಲೆತಗ್ಗಿಸುವಂತೆ ಮಾಡಿದೆ
ಉತ್ತರಪ್ರದೇಶದ ಹಾಥರಸ್ ನಲ್ಲಿ ದಲಿತ ಸಮುದಾಯಕ್ಕೆ ಸೇರಿದ ಯುವತಿ ಮನಿಷಾ ವಾಲ್ಮೀಕಿ ಯ ಮೇಲೆ ನಾಲ್ವರು ದುರುಳರು ಅತ್ಯಾಚಾರ ನಡೆಸಿ ಬರ್ಬರವಾಗಿ ಹತ್ಯೆಮಾಡಿದ ಪ್ರಕರಣ ಅತ್ಯಂತ ಖಂಡನೀಯ
ಇಂತಹ ಸಮಯದಲ್ಲಿಯೂ ಸಹ ದಲಿತ ಯುವತಿಯ ಸಾವಿನಲ್ಲಿಯೂ ಸತ್ಯವನ್ನು ಅದುಮಿಡುವ ಉತ್ತರ ಪ್ರದೇಶ ಸರಕಾರದ ಧೋರಣೆ ಹಾಗೂ ಅದರ ಹೆಸರಿನಲ್ಲಿ ನಡೆಯುತ್ತಿರುವ ರಾಜಕೀಯ ಲೆಕ್ಕಾಚಾರಗಳು ನೋವುತರುತ್ತವೆ
ತರಾತುರಿಯಲ್ಲಿ ರಾತ್ರಿಯೆ ಮನಿಷಾಳ ಶವವನ್ನು ಸುಟ್ಟಿದ್ದು ಉದ್ದೇಶಪೂರ್ವಕವಾಗಿ ಆಕೆಯ ಕುಟುಂಬಸ್ಥರನ್ನು ದೂರ ಇಟ್ಟಿದ್ದು ಆಕೆಯ ತಂದೆಯ ಮೇಲೆ ಪೊಲೀಸರು ಈಗಾಗಲೇ ನೀಡಿರುವ ಹೇಳಿಕೆಬದಲಿಸುವಂತೆ ಒತ್ತಡ ಹೇರುತ್ತಿರುವುದು ಪೊಲೀಸರು ಸರಕಾರವನ್ನು ಮುಜುಗರಕ್ಕೊಳಗಾಗದಂತೆ ಕಾಪಾಡುವ ಹಾಗೂ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸುಗಮವಾಗಿದೆ ಹಾಗು ಯೋಗಿ ಅಡಳಿತದಲ್ಲಿ ಇಂತಹ ಘಟನೆ ನಡೆಯದು ಎಂಬುದನ್ನು ತೋರ್ಪಡಿಸಲು ಹರಸಾಹಸ ಮಾಡಲಾಗುತ್ತಿದೆ
ಯುವತಿಯ ಮೇಲೆ ಅತ್ಯಾಚಾರವಾಗಿದೆ ಎಂದು ಶವಪರೀಕ್ಷೆ ಯಿಂದ ಸಾಬೀತಾಗಿಲ್ಲಾ ಅತ್ಯಾಚಾರದಿಂದಾದ ಗಾಯಗಳಿಂದ ಅಕೆ ಸಾವನ್ನಪ್ಪಿಲ್ಲ ಆಕೆ ಬೆನ್ನುಮೂಳೆ ಮುರಿದಿತ್ತು ಹಾಗೂ ಹ್ರದಯಾಘಾತವಾಗಿದೆ ಎಂದು ಜೊತೆಗೆ ರಕ್ತದ ಸೋಂಕು ಸಹ ಇತ್ತು ಎಂದು ಹೇಳುತ್ತಿರುವ ಉತ್ತರ ಪ್ರದೇಶದ ಪೊಲೀಸರು ತಡರಾತ್ರಿ ತಾವೇ ಅಕೆಯ ಶವವನ್ನು  ಸಂಸ್ಕಾರದ ಹೆಸರಿನಲ್ಲಿ ಸುಟ್ಟು ಮರು ಶವಪರೀಕ್ಷೆ ನಡೆಸಲು ಅವಕಾಶವೇ ಇಲ್ಲದಂತೆ ಮಾಡಿರುವುದಕ್ಕೆ ಉತ್ತರಿಸುವುದಿಲ್ಲ
ಜಾತಿ ,ರಾಜಕೀಯ ,ಧರ್ಮ ,ಪಕ್ಷ ಈ ವಿಚಾರಗಳೇನೇ ಇರಲಿ ಅದರೆ ಅಮಾಯಕ ಹೆಣ್ಣುಮಗಳ ಮೇಲೆ ನಡೆದ ಹೇಯ ಕ್ರತ್ಯವನ್ನು ಈ ರೀತಿಯಾಗಿ ಮುಚ್ಚಿಹಾಕಲು ಹೊರಟರೆ ಅದು ಮುಂದಿನದಿನಗಳಲ್ಲಿ ಯಾವರೀತಿ ಪರಿಣಾಮ ಬೀರಬಹುದು ಎಂಬುದನ್ನು ನೆನಪಿಸಿಕೊಂಡರೆ ಭಯವಾಗುತ್ತದೆ
ಬಿಜೆಪಿ ಯಲ್ಲಿರುವ ಮಹಿಳಾನಾಯಕಿಯರು ಇಂತಹ ಸನ್ನಿವೇಶದಲ್ಲಿಯೂ ಮಾನವೀಯ ಸಂವೇದನೆ ಬದಿಗಿರಿಸಿ ಮೌನವಾಗಿರುವುದು ಸರಿಯಾದುದಲ್ಲಾ
ಈ ಪ್ರಕರಣವನ್ನು ರಾಜಕೀಯ ಪಕ್ಷಗಳು ಹಾಗು ಸಂಘಟನೆಗಳು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳದೆ ಸಂತ್ರಸ್ತೆಯ ಕುಟುಂಬಕ್ಕೆ ನ್ಯಾಯದೊರಕಿಸಿಕೊಡುವ ಹಾಗೂ ಮುಂದೆ ಇಂತಹ ಅಮಾನುಷ ಘಟನೆಗಳು ನಡೆಯದಂತೆ ತಡೆಯುವ ನಿಟ್ಟಿನಲ್ಲಿ ಹೋರಾಟನಡೆಸಬೇಕಿದೆ

#ಹಾಥ್ರಸ್

#ಮನೀಷಾ ವಾಲ್ಮೀಕಿ 

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Vimarsha.info

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಆರೋಗ್ಯ ಮತ್ತು ಸಂತ್ರೃಪ್ತ ಜೀವನ

ಬಂಧುಗಳೇ, ಪ್ರತಿಯೊಂದು ಜನರು ನೆಮ್ಮದಿಯಿಂದ ಬದುಕಲು ಇಷ್ಟಪಡುತ್ತಾರೆ, ಆದರೂ ಹಲವಾರು ಸಮಸ್ಯೆಗಳಿಂದ ಬಳಲುತ್ತಿದ್ದಾರೆ, ಅದರಲ್ಲಿ  ಮುಖ್ಯ ಸಮಸ್ಯೆಗಳು ಅಂದರೆ ಆರೋಗ್ಯ ಮತ್ತು ಹಣಕಾಸು ಮತ್ತು  ಉದ್ಯೋಗ ಭದ್ರತೆ. ನಮ್ಮಲ್ಲಿ ಮೇಲ್ಕಂಡ  ಸಮಸ್ಯೆಗಳಿಗೆ ಸಮಂಜಸವಾದ ಪರಿಹಾರವಿದೆ , ನೀವು ಆತಂಕ ಪಡುವ ಅಗತ್ಯವಿಲ್ಲ, ಬನ್ನಿ ನಮ್ಮೂಡನೆ ಸೇರಿರಿ, ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳರಿ.   ನಾವು ಸಂವಹನ ಮಾಡಲು ಅಂತರ್ಜಾಲ ಮತ್ತು ನೇರ ಭೇಟಿ ಕಾರ್ಯಕ್ರಮ ಮೂಲಕ  ಕೆಲವೊಂದು ಮಾರ್ಗದರ್ಶನಗಳನ್ನು ನೀಡುತ್ತೇವೆ, ಅದಕ್ಕಾಗಿ ನೀವು ನಿಮ್ಮ ವಾಟ್ಸಾಪ್ ಸಂಖ್ಯೆಯನ್ನು ನಮಗೆ ಕಳುಹಿಸಿದರೆ, ಮಾರ್ಗದರ್ಶನ ಅವಕಾಶ ನಿಮಗೆ ಲಭಿಸುತ್ತದೆ.

ಹಾಸನ ಜಿಲ್ಲೆಯಲ್ಲಿ ಸ್ವಯಂ ಉದ್ಯೋಗಾವಕಾಶಗಳು.

ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯಲ್ಲಿ ನೆಲೆಸಿರುವ ಗೃಹಿಣಿಯರು, ನಿವೃತ್ತ ಅಧಿಕಾರಿಗಳು /ನೌಕರರು ಮತ್ತು ನಿರುದ್ಯೋಗಿಗಳಿಗೆ ಆರ್ಥಿಕ ವಲಯದಲ್ಲಿ ಹೂಡಿಕೆ ಇಲ್ಲದೆ ವೃತ್ತಿ ಅವಕಾಶಗಳು / ವ್ಯಾಪಾರ ಅವಕಾಶಗಳು  ಪುರುಷ ಮತ್ತು  ಮಹಿಳೆಯರಿಗೆ   ವಯಸ್ಸಿನ ಮಿತಿ: - 25 ರಿಂದ 65 ವರ್ಷಗಳು.  ದಯವಿಟ್ಟು ನಿಮ್ಮ ವಿವರಗಳನ್ನು ಕೆಳಗಿನ ಇಮೇಲ್ ಐಡಿಗೆ ಕಳುಹಿಸಿ.  freelanceadvertisingthassan@gmail.com  ಅಥವಾ  ಸಂಪರ್ಕಿಸಿ  ವಾಟ್ಸಾಪ್ ಸಂದೇಶಗಳು ಮಾತ್ರ  7090899728  Career opportunities /business opportunities with out an investments in financial sector for housewives ,retired officials /employees and unemployed persons residing in Hassan district, Karnataka state India For both male and female. Age limit:- 25 to 65 years. Please send your details to below email id. freelanceadvertisingathassan@gmail.com Or  Contact  WhatsApp messages only 070908 99728

ಸಂಬಂಧಗಳ ಅನುಬಂಧ-ಕೋಟೆ ಕಾಲಂ

ಸಂಬಂಧಗಳ ಅನುಬಂಧ ಮಕ್ಕಳು ಯಾರಾದ್ರು ನೆಂಟರು ಅದರಲ್ಲಿಯೂ ಹತ್ತಿರದವರು ಅತ್ತೆ ಮಾವ ಚಿಕ್ಕಪ್ಪ ಚಿಕ್ಕಮ್ಮ ಅವರ ಮಕ್ಕಳು ಅಜ್ಜಿ ತಾತ ಹೀಗೆ ಹತ್ತಿರದವರು ಹಬ್ಬ ಹುಣ್ಣಿಮೆ ಇಲ್ಲವೆ ರಜೆ ಸಮಯದಲ್ಲಿ ನಾಕು ದಿನ ಇದ್ದು ಹೊರಟಾಗಿನ ಪ್ರಸಂಗ ಪ್ರಹಸನ ನೆನಪಿಸಿಕೊಂಡರೆ ಸಾಕು ಮನುಷ್ಯ ಸಂಬಂಧ ಅಗ ಮತ್ತು ಈಗ ಎಂಬ ವ್ಯತ್ಯಾಸ ಅರ್ಥ ವಾಗುತ್ತದೆ ನೆಂಟರ ಬ್ಯಾಗ್ ಭರ್ತಿಮಾಡುತ್ತಿದ್ದುದರಿಂದ ಹಿಡಿದು ಅವರನ್ನು ಬಸ್ಸಿನಲ್ಲಿ ಕಿಟಕಿ ಪಕ್ಕದ ಸೀಟ್ ಹಿಡಿದು ಅವರ ಲಗೆಜ್ ಅನ್ನು ಜೋಪಾನವಾಗಿ ಜೋಡಿಸಿ ಬರ್ತೀಯಾ ಕಾಗದ ಬರಿ ಅನ್ನೋವರೆಗೂ ನಡೆಯುತ್ತಿದ್ದ ಸೀನ್ಗಳೇ ಅದ್ಬುತ ಇನ್ನು ಮಕ್ಕಳು ಕರೆದುಕೊಂಡು ಹೋಗುವುದಿಲ್ಲ ಎಂದು ಖಚಿತವಾದರು ಕಡೆಯದಾಗಿ ನಾನು ಬತ್ತೀನಿ ಎಂದು ಅಳುತ್ತಿದ್ದುದು ಅಳುವಿನ ನಡುವೆಯೆ ಚಡ್ಡಿ ಜೇಬು ತಡವಿ ನೆಂಟರು ಕೊಟ್ಟ ಚಿಲ್ಲರೆ ನಾಣ್ಯ ಸ್ಪರ್ಷಿಸಿ ಖುಷಿಪಡುತ್ತಿದ್ದುದು ಮರೆಯಲಸಾಧ್ಯ ಇನ್ನು ಹೆಣ್ಣುಮಕ್ಕಳಿಗೆ ಕುಂಕುಮ ಕೊಡುತ್ತಿದ್ದುದನ್ನೇ ಒಂದು ಕತೆಯಾಗಿಸಬಹುದು ಸಣ್ಣ ವಿಚಾರ ಎನಿಸಿದರೂ ಇವುಗಳಲ್ಲಿ ಅಡಗಿರುವ ಪ್ರೀತಿ ಅಗಾಧ ಇದೆಲ್ಲದರಿಂದ ಇಂದಿನ ಮಕ್ಕಳು ವಂಚಿತರಾದರಲ್ಲಾ ಎಂದು ಒಮ್ಮೊಮ್ಮೆ ನೋವಾಗುತ್ತದೆ ಇನ್ನು ಮದುವೆಗಳಂತೂ ಒಂದು ವಾರ ಠಿಕಾಣಿ ಹೊಡೆಯುವ ಕಾರ್ಯಕ್ರಮ ಮನೆಬಾಗಿಲಿನಲ್ಲಿ ಧಾರೆ ಎರೆಯುತ್ತಿದ್ದ ಮದುವೆಗಳ ಸಂಭ್ರಮ ಒಂದುರೀತಿಯಾದರೆ ಇದ್ದ ಒಂದೆರೆಡು ಛತ್ರಗಳಲ್ಲಿ ನಡೆಯುತ್ತಿದ್ದ ಮದುವೆಗಳ ಸಂಭ್ರಮ ಮತ್ತೊಂದು ರೀತಿಯದ್ದು ಅಲ...