ವಿಷಯಕ್ಕೆ ಹೋಗಿ

ಹೋದೋರೆಲ್ಲಾ ಒಳ್ಳೆಯವರು-ಕೋಟೆ ಕಾಲಂ

  
    ಸಂಪಾದಕರು ಹಾಗೂ ಲೇಖಕರು 
             ಹರೀಶ್ ಹೆಚ್ ಆರ್ 
                   ಕೋಟೆ. 

            
           ಬೇಲೂರು ಕೃಷ್ಣಮೂರ್ತಿ 


                ಆರ್. ಕೆ .ಸ್ವರೂಪ್

ಹೋದೋರೆಲ್ಲಾ ಒಳ್ಳೆಯವರು....
 
          ಹರೀಶ್ ಹೆಚ್ ಆರ್ 
                 ಕೋಟೆ 

ಇಬ್ಬರ ಸಾವು ಅದರಲ್ಲಿಯೂ ಒಂದುದಿನದ ಅಂತರದಲ್ಲಿ ನಡೆದ ಮರಣಗಳು ವೈಯಕ್ತಿಕ ವಾಗಿ ನನ್ನನ್ನು ಘಾಸಿಗೊಳಿಸಿದ್ದು ಸುಳ್ಳಲ್ಲಾ
ಒಂದು ಸಮಾಜಸೇವಕ ನಿರೂಪಕ ಆರ್.ಕೆ.ಸ್ವರೂಪ್ ಅವರದ್ದಾದರೆ ಮತ್ತೊಂದು ಅವರ ಸಾವಿನ ಮಾರನೆಯ ದಿವಸವೇ ಇಹಲೋಕ ತ್ಯಜಿಸಿದ ಶತನಾಟಕಗಳ ಸರದಾರ ಬೇಲೂರು ಕ್ರೃಷ್ಣ ಮೂರ್ತಿ ಅವರದ್ದು
ಇಬ್ಬರ ಕಾರ್ಯಕ್ಷೇತ್ರವಾಗಲಿ ಸ್ವಭಾವ ಗುಣವಾಗಲೀ ಯಾವುದು ಹೋಲಿಕೆ ಇಲ್ಲವಾದರೂ ಮಾನವೀಯ ಗುಣ ಹಾಗೂ ಯಾರಿಗೂ ಕೆಡುಕು ಬಯಸದ ಅವರ ಬದುಕು ನಿಜಕ್ಕೂ ಸ್ಮರಣೀಯ,
ಮಿತ್ರ ಡಾ.ಉದಯರವಿ ಹಾಸನ ಜಿಲ್ಲಾ ಕನ್ನಡಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ದ್ದಾಗ ಬೇಲೂರು ಕ್ರೃಷ್ಣ ಮೂರ್ತಿ ಅವರೊಂದಿಗೆ ಸಾಕಷ್ಡು ಸಮಯ ಕಳೆಯುವ ಹಾಗೂ ಹಲವು ವಿಚಾರಗಳ ಬಗ್ಗೆ ಅವರೊಂದಿಗೆ ಚರ್ಚಿಸುವ ಅವಕಾಶ ಲಭ್ಯ ವಾಗಿತ್ತು,
ಅದು ಹಾಗೆಯೇ ಬಹಳ ವರ್ಷ ಮುಂದುವರೆಯಿತು
ವಯಸ್ಸಿನ ಅಂತರ ಬದಿಗಿಟ್ಟು ಅವರು ಹಾರಿಸುತ್ತಿದ್ದಾ ಹಾಸ್ಯಚಟಾಕಿಗಳು ಎಲ್ಲ ವಿಚಾರಗಳ ಬಗ್ಗೆ ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದ ರೀತಿ ಅಚ್ಚರಿ ಮೂಡಿಸುತ್ತಿತ್ತಲ್ಲದೆ ನಗು ತಿಳಿಹಾಸ್ಯ ಸ್ವಲ್ಪ ಪೋಲಿತನದೊಂದಿಗೆ ತಮ್ಮಲ್ಲಿರುವ ಜೀವನಪ್ರೀತಿಯನ್ನು ಮಾತಿನಲ್ಲಿಯೇ ತೋರಿಸುತ್ತಿದ್ದರು
ಮೂಲತ ಅರಸೀಕೆರೆಯವರಾದರೂ ಬೇಲೂರಿನಲ್ಲಿ ದೈಹಿಕ ಶಿಕ್ಷಕರಾಗಿ ಕಾರ್ಯನಿರ್ವಹಿಸಿ ಸಾಹಿತ್ಯ ಲೋಕದಲ್ಲಿ ಬೇಲೂರನ್ನು ತಮ್ಮ ಹೆಸರಿನೊಂದಿಗೆ ಸೇರಿಸಿಕೊಂಡರು
ತೊಂಬತ್ತು ವರ್ಷದ ತುಂಬು ಬದುಕನ್ನು ಕಂಡು ಸದಾಚಟುವಟಿಕೆಯಲ್ಲಿದ್ದ ಅವರು ಇತ್ತೀಚೆಗೆ ವಯೊಸಹಜವಾದ ಖಾಯಿಲೆಯಿಂದ ಬಳಲಿದ್ದರು
ಸಾವಿನಲ್ಲೂ ಸಾರ್ಥಕ ತೆ ಕಂಡುಕೊಂಡರು ತಮ್ಮ ದೇಹವನ್ನು ಎಸ್ ಡಿ ಮ್  ಕಾಲೇಜಿಗೆ ದಾನವಾಗಿ ನೀಡಿದರು
ನೂರಕ್ಕೂ ಹೆಚ್ಚು ನಾಟಕ ಹಾಗೂ ಮೂವತ್ತಕ್ಕೂ ಹೆಚ್ಚು ಕಾದಂಬರಿ ಹಾಗೂ ಇತರೆ ಕ್ರತಿಗಳನ್ನು ರಚಿಸಿದ್ದಾರೆ
ತಮ್ಮ ಕಂಬನಿ ಎಂಬ ನಾಟಕವನ್ನು ತೀರದ ಬಯಕೆ ಹೆಸರಿನಲ್ಲಿ ಚಲನಚಿತ್ರ ವನ್ನಾಗಿಸುವ ಪ್ರಯತ್ನ ನಡೆಸಿ ಆರ್ಥಿಕವಾಗಿ ಕೈ ಸುಟ್ಟಿಕೊಂಡರೂ ಸಹ ಯಾರಿಂದಲೂ ಬಾಕಿ ಉಳಿಸಿಕೊಳ್ಳಲಿಲ್ಲ
ತುಂಬುಜೀವನವನ್ನು ತುಳುಕದಂತೆ ಕಾಪಾಡಿಕೊಂಡು ಸಾಹಿತ್ಯ ಲೋಕಕ್ಕೆ ತಮ್ಮದೇ ಕೊಡುಗೆ ನೀಡಿದ ಬೇಲೂರು ಕ್ರಷ್ಣಮೂರ್ತಿ ಸದಾ ಸ್ಮರಣೀಯರು.

ಮನುಷ್ಯ ತನಗಾಗಿ ಬದುಕುವುದು ಸಾಮಾನ್ಯ ಪ್ರತಿಯೊಂದರಲ್ಲಿಯೂ ಲಾಭದ ಬಗ್ಗೆಯೇ ಚಿಂತನೆ ಮಾಡುವವರೇ ಇರುವಾಗ ಅದಕ್ಕೆ ಅಪವಾದವಾಗಿ ಬದುಕಿದ ವ್ಯಕ್ತಿ ಹಾಸನದ ಆರ್. ಕೆ. ಸ್ವರೂಪ್
ಹಾಸನದಲ್ಲಿ ಸರಕಾರದ ಇಲ್ಲವೇ ಖಾಸಗಿ ಕಾರ್ಯಕ್ರಮ ಇರಲಿ ಗಣಪತಿ ಉತ್ಸವ ಇರಲಿ ಹಾಸನಾಂಬ ದೇವಾಲಯ ಕಡೆಗೆ ಬೆಳಿಗ್ಗೆ ಕಸ ಸಂಗ್ರಹಿಸುವ ವಾಹನದ ಅನೌನ್ಸ್ಮೆಂಟ್ ನಲ್ಲಿಯೂ ಸ್ವರೂಪ್ ಅವರ ಧ್ವನಿಮುದ್ರಣ ಇರುತ್ತಿತ್ತು
ನಿರೂಪಣೆಯನ್ನು ಹವ್ಯಾಸವಾಗಿ ಮಾಡಿಕೊಂಡಿದ್ದ ಸ್ವರೂಪ್ ಅದಕ್ಕಾಗಿ ಹಣ ಪಡೆದಿದ್ದನ್ನು  ಕಂಡಿಲ್ಲ
ಕೆನರಾ ಬ್ಯಾಂಕ್ ಉದ್ಯೋಗಿಯಾಗಿ ನೆಮ್ಮದಿಯಾಗಿದ್ದ ಸ್ವರೂಪ್ ಇನ್ನೊಬ್ಬರಿಗೆ ಸಹಾಯ ಮಾಡುವ ಗೀಳಿಗೆ ಬಿದ್ದುಇನ್ನಿಲ್ಲದ ನೋವು ಅನುಭವಿಸಿದರು
ಅವಮಾನ ತಾಳದೆ ಸ್ವಯಂ ನಿವ್ರತ್ತಿ ಪಡೆದು ಬದುಕಿನಲ್ಲಿ ನೋವುಂಡರು
ಅದರು ಸಹ ಯಾರಿಗೂ ಕೇಡು ಬಯಸದೆ ಪ್ರತಿಫಲಾಪೇಕ್ಷೆ ಇಲ್ಲದೆ ನಾನಾ ರೀತಿಯ ಸೇವೆಗಳನ್ನು ಮಾಡಿಕೊಂಡು ಸಾರ್ವಜನಿಕ ಸೇವೆಯಲ್ಲಿ ನೆಮ್ಮದಿ ಕಂಡುಕೊಂಡಿದ್ದರು
ತೀರಾ ಇತ್ತೀಚೆಗೆ ಕರೋನಾ ಪೀಡಿತರಾಗಿ ಆಸ್ಪತ್ರೆಗೆ ದಾಖಲಾದಾಗ ನೋವಿನಲ್ಲಿಯೇ ಇದ್ದರು ದೂರವಾಣಿಯಲ್ಲಿ ಮಾತನಾಡಿಸಿದಾಗಲೂ ಅವರು ನಿರಾಶಾದಾಯಕ ಮಾತುಗಳನ್ನೆ ಆಡುತ್ತಿದ್ದರು
ತಮ್ಮ ಅರವತ್ತೇಳನೆ ವಯಸ್ಸಿಗೆ ಭೂಮಿಯ ಋಣ ಕಡಿದುಕೊಂಡ ಸ್ವರೂಪ್ ಅವರ ನೆನಪು ನಿಜವಾಗಿಯೂ ಕಾಡುತ್ತದೆ.

ಕಾಮೆಂಟ್‌ಗಳು

  1. Dear sir, hat's off to you for bringing out this breafing about these two jems of Hassan.Iam Mallasetty sree R k Swaroop s close friend, We worked in C B in Hsn for a long time.On the day of admission to hospital he talked to me and I wished him speedy recovery, but fate was negative. We are very much sorry for loosing a wonderful, talented personality.May their soul rest in peace 😭😭😭

    ಪ್ರತ್ಯುತ್ತರಅಳಿಸಿ
  2. Dear sir, hat's off to you for bringing out this breafing abot these two jems of Hassan.Iam Mallasetty sree R k Swaroop s close friend, We worked in C B in Hsn for a long time.On the day of admission to hospital he talked to me and I wished him speedy recovery, but fate was negative. We are very much sorry for loosing a wonderful, talented personality.May their soul rest in peace 😭😭😭

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

Vimarsha.info

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರೈತ ದಿನ ಆಚರಣೆ-ಸಾವಯವ ಕೃಷಿ ಪದ್ಧತಿಗೆ ಸಲಹೆ.

👇👇👇👇👇👇👇👇👇👇👇👇👇 ರೈತ ದಿನಾಚರಣೆ https://youtube.com/shorts/EGX4c_IVzY8?si=erkB19_6MH0KmBG6 ಮೊಸಳೆಹೊಸಹಳ್ಳಿಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ರಾಷ್ಟ್ರೀಯ ರೈತರ ದಿನದ ಅಂಗವಾಗಿ ಸಾವಯವ ಕೃಷಿ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಪುಣ್ಯಭೂಮಿ ಪರಿಸರ ಪ್ರಶಸ್ತಿ ಮತ್ತು ಶ್ರೇಷ್ಠ ಕೃಷಿಕ ಪ್ರಶಸ್ತಿ ಪುರಸ್ಕೃತರಾದ ಕಟ್ಟಾಯ ಹೋಬಳಿಯ ಬ್ಯಾಡರಹಳ್ಳಿಯ ಸಾವಯವ ಕೃಷಿಕರು, ಪ್ರಗತಿಪರ ರೈತರು ಮತ್ತು ಪಾರಂಪರಿಕ ವೈದ್ಯರಾದ ಶ್ರೀಯುತ ರವಿಶಂಕರ್ ಅವರು ಆಗಮಿಸಿದ್ದರು. ಸಂಸ್ಥೆಯಲ್ಲಿ ರೈತರಿಂದ ಗಿಡ ನೆಡುವುದರ ಮೂಲಕ ರೈತರ ದಿನವನ್ನು ಉದ್ಘಾಟಿಸಲಾಯಿತು. ಸಾವಯವ ಕೃಷಿಯನ್ನು ಉದ್ದೇಶಿಸಿ ಮಾತನಾಡಿದ ಇವರು ವಿದ್ಯಾರ್ಥಿಗಳಿಗೆ ಸಾವಯವ ಕೃಷಿಯ ಕ್ರಮಗಳು, ಆರೋಗ್ಯಕರ ಪ್ರಯೋಜನಗಳನ್ನು ವಿವರಿಸುತ್ತಾ, ಬೆಳೆಗೆ ಯಾವುದೇ ರಾಸಾಯನಿಕ ಗೊಬ್ಬರಗಳು, ಕೀಟನಾಶಕಗಳನ್ನು ಬಳಸದೇ ಕೇವಲ ಹಸುವಿನ ಸಗಣಿ ಮತ್ತು ಗಂಜುಳದಿಂದ ರಸಗೊಬ್ಬರ ಮತ್ತು ಸಾವಯವ ಕೀಟನಾಶಕವನ್ನು ತಯಾರಿಸಿ ಮಣ್ಣಿನ ಫಲವತ್ತತೆಯನ್ನು ಹೇಗೆ ಹೆಚ್ಚಿಸುವುದು ಮತ್ತು ಯಾವ ಕಾಲ, ನಕ್ಷತ್ರ, ಹವಾಮಾನ ಮತ್ತು ಮಾಸಕ್ಕನುಗುಣವಾಗಿ ಯಾವ ಬೆಳೆ ಬೆಳೆಯಬೇಕೆಂಬುದನ್ನು ರೈತರು ಸೂಕ್ತವಾಗಿ ಅರಿತಿರಬೇಕು ಮತ್ತು ಪೌಷ್ಟಿಕ ಆಹಾರ ಸೇವನೆಯಿಂದ ಆರೋಗ್ಯ ವೃದ್ಧಗೊಳಿಸಿಕೊಳ್ಳ

ಮೊಸಳೆಹೊಸಳ್ಳಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿಶ್ವ ಏಡ್ಸ್ ದಿನ ಆಚರಣೆ.

ಹಾಸನ ತಾಲ್ಲೂಕಿನ ಮೊಸಳೆಹೊಸಹಳ್ಳಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್.) ಘಟಕದ ವತಿಯಿಂದ ರೆಡ್ ರಿಬ್ಬನ್ ಕ್ಲಬ್ ಸಹಯೋಗದೊಂದಿಗೆ, ವಿಶ್ವ ಏಡ್ಸ್ ದಿನದ ಪ್ರಯುಕ್ತ ಸಂಸ್ಥೆಯಲ್ಲಿ ಏಡ್ಸ್ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.. . ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಾಸನ ಜಿಲ್ಲಾ ಏಡ್ಸ್ ಪ್ರಿವೆನ್ಷನ್ ಮತ್ತು ಕಂಟ್ರೋಲ್ ಘಟಕದ ಸೂಪರ್ವೈಸರ್ ಶ್ರೀಯುತ ರವಿಕುಮಾರ್ ವಿ. ಬಲ್ಲೇನಹಳ್ಳಿ ಯವರು ಮತ್ತು ಲಯನ್ಸ್ ಕ್ಲಬ್ ಅಧ್ಯಕ್ಷರಾದ ಶ್ರೀಯುತ ನಾಗೇಶ್ ರವರು ಹೆಚ್.ಐ.ವಿ. ಸೋಂಕಿನ ಬಗ್ಗೆ ವಿದ್ಯಾರ್ಥಿಗಳಿಗೆ ಸಂಕ್ಷಿಪ್ತ ಮಾಹಿತಿ ನೀಡುವ ಮೂಲಕ ಜಾಗೃತಿ ಮೂಡಿಸಿದರು.  ಮುಂದುವರೆದು ಸಂಸ್ಥೆಯಲ್ಲಿ ಏಡ್ಸ್/ಹೆಚ್.ಐ.ವಿ. ಸೋಂಕಿನ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಸವಾಗಿ ಚರ್ಚಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಪೋಸ್ಟರ್ ಡಿಸೈನ್ ಮತ್ತು ರಂಗೋಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು ಮತ್ತು ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು ಸಂಸ್ಥೆಯ ಎನ್.ಎಸ್.ಎಸ್. ಅಧಿಕಾರಿಗಳಾದ ಶ್ರೀಯುತ ವೀರಭದ್ರಸ್ವಾಮಿ ಕೆ.ಎಂ. ರವರು, ಎನ್.ಎಸ್.ಎಸ್. ಚಟುವಟಿಕೆಯ ಅಡಿಯಲ್ಲಿ ವಿದ್ಯಾರ್ಥಿಗಳು ಸುತ್ತಮುತ್ತಲ, ಮೂರು ಗ್ರಾಮಗಳನ್ನು ದತ್ತು ಪಡೆದು ಸ್ವಚ್ಛತೆ, ಆರೋಗ್ಯ, ಉನ್ನತ ಶಿಕ್ಷಣ ಮುಂತಾದ ವಿಷಯಗಳ ಬಗ್ಗೆ ಜಾಗೃತಿ

ಹಾಸನ ಜಿಲ್ಲೆಯಲ್ಲಿ ಸ್ವಯಂ ಉದ್ಯೋಗಾವಕಾಶಗಳು.

ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯಲ್ಲಿ ನೆಲೆಸಿರುವ ಗೃಹಿಣಿಯರು, ನಿವೃತ್ತ ಅಧಿಕಾರಿಗಳು /ನೌಕರರು ಮತ್ತು ನಿರುದ್ಯೋಗಿಗಳಿಗೆ ಆರ್ಥಿಕ ವಲಯದಲ್ಲಿ ಹೂಡಿಕೆ ಇಲ್ಲದೆ ವೃತ್ತಿ ಅವಕಾಶಗಳು / ವ್ಯಾಪಾರ ಅವಕಾಶಗಳು  ಪುರುಷ ಮತ್ತು  ಮಹಿಳೆಯರಿಗೆ   ವಯಸ್ಸಿನ ಮಿತಿ: - 25 ರಿಂದ 65 ವರ್ಷಗಳು.  ದಯವಿಟ್ಟು ನಿಮ್ಮ ವಿವರಗಳನ್ನು ಕೆಳಗಿನ ಇಮೇಲ್ ಐಡಿಗೆ ಕಳುಹಿಸಿ.  freelanceadvertisingthassan@gmail.com  ಅಥವಾ  ಸಂಪರ್ಕಿಸಿ  7090899728 Career opportunities /business opportunities with out an investments in financial sector for housewives ,retired officials /employees and unemployed persons residing in Hassan district, Karnataka state India For both male and female. Age limit:- 25 to 65 years. Please send your details to below email id. freelanceadvertisingathassan@gmail.com Or  Contact  070908 99728