ವಿಮರ್ಶಾ -ಸುದ್ದಿ ನೋಟ 15/11/2೦2೦ ತಜ್ಞರ ಸಲಹೆಯಂತೆ ದ್ವಾರಸಮುದ್ರ ಕೆರೆ ಏರಿ ದುರಸ್ತಿಗೆ ಕ್ರಮ: ಜೆ.ಸಿ ಮಾಧುಸ್ವಾಮಿ ಹಾಸನ.ನ.14. (ಕರ್ನಾಟಕ ವಾರ್ತೆ):- ದ್ವಾರಸಮುದ್ರ ಕೆರೆ ಏರಿ ದುರಸ್ತಿ ಕುರಿತಾಗಿ ಅಧಿಕಾರಿಗಳು ಈಗಾಗಲೇ ತಜ್ಞರ ಸಲಹೆ ಪಡೆದಿದ್ದು, ಅದರಂತೆ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಸಚಿವರಾದ ಜೆ.ಸಿ. ಮಾಧುಸ್ವಾಮಿ ಅವರು ತಿಳಿಸಿದ್ದಾರೆ. ಬೇಲೂರು ತಾಲ್ಲೂಕಿನ ದ್ವಾರಸಮುದ್ರ ಕೆರೆ ಏರಿ ಕುಸಿದಿರುವ ಸ್ಥಳ ವೀಕ್ಷಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಧ್ಯ ಕೆರೆ ಸಂಪೂರ್ಣವಾಗಿ ಭರ್ತಿಯಾಗಿರುವುದರಿಂದ ತಾತ್ಕಾಲಿಕವಾಗಿ ಕೆರೆ ಏರಿ ದುರಸ್ತಿ ಮಾಡಬಹುದಾಗಿದ್ದು, ಕೂಡಲೇ ಕೈಗೊಳ್ಳಬಹುದಾದ ದುರಸ್ತಿ ಕ್ರಮಗಳ ಬಗ್ಗೆ ಅಧಿಕಾರಿಗಳು ಹಾಗೂ ತಜ್ಞರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು. ಸ್ಥಳೀಯ ಶಾಸಕರಾದ ಕೆ.ಎಸ್. ಲಿಂಗೇಶ್, ತಹಶೀಲ್ದಾರ್ ನಟೇಶ್, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಹಾಗೂ ಮತ್ತಿತರ ರೈತ ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು. *********** ...
News/information/advertising/entertainment