ಸಂಬಂಧಗಳ ಅನುಬಂಧ
ಮಕ್ಕಳು ಯಾರಾದ್ರು ನೆಂಟರು ಅದರಲ್ಲಿಯೂ ಹತ್ತಿರದವರು ಅತ್ತೆ ಮಾವ ಚಿಕ್ಕಪ್ಪ ಚಿಕ್ಕಮ್ಮ ಅವರ ಮಕ್ಕಳು ಅಜ್ಜಿ ತಾತ ಹೀಗೆ ಹತ್ತಿರದವರು ಹಬ್ಬ ಹುಣ್ಣಿಮೆ ಇಲ್ಲವೆ ರಜೆ ಸಮಯದಲ್ಲಿ ನಾಕು ದಿನ ಇದ್ದು ಹೊರಟಾಗಿನ ಪ್ರಸಂಗ ಪ್ರಹಸನ ನೆನಪಿಸಿಕೊಂಡರೆ ಸಾಕು ಮನುಷ್ಯ ಸಂಬಂಧ ಅಗ ಮತ್ತು ಈಗ ಎಂಬ ವ್ಯತ್ಯಾಸ ಅರ್ಥ ವಾಗುತ್ತದೆ
ನೆಂಟರ ಬ್ಯಾಗ್ ಭರ್ತಿಮಾಡುತ್ತಿದ್ದುದರಿಂದ ಹಿಡಿದು ಅವರನ್ನು ಬಸ್ಸಿನಲ್ಲಿ ಕಿಟಕಿ ಪಕ್ಕದ ಸೀಟ್ ಹಿಡಿದು ಅವರ ಲಗೆಜ್ ಅನ್ನು ಜೋಪಾನವಾಗಿ ಜೋಡಿಸಿ ಬರ್ತೀಯಾ ಕಾಗದ ಬರಿ ಅನ್ನೋವರೆಗೂ ನಡೆಯುತ್ತಿದ್ದ ಸೀನ್ಗಳೇ ಅದ್ಬುತ
ಇನ್ನು ಮಕ್ಕಳು ಕರೆದುಕೊಂಡು ಹೋಗುವುದಿಲ್ಲ ಎಂದು ಖಚಿತವಾದರು ಕಡೆಯದಾಗಿ ನಾನು ಬತ್ತೀನಿ ಎಂದು ಅಳುತ್ತಿದ್ದುದು ಅಳುವಿನ ನಡುವೆಯೆ ಚಡ್ಡಿ ಜೇಬು ತಡವಿ ನೆಂಟರು ಕೊಟ್ಟ ಚಿಲ್ಲರೆ ನಾಣ್ಯ ಸ್ಪರ್ಷಿಸಿ ಖುಷಿಪಡುತ್ತಿದ್ದುದು ಮರೆಯಲಸಾಧ್ಯ
ಇನ್ನು ಹೆಣ್ಣುಮಕ್ಕಳಿಗೆ ಕುಂಕುಮ ಕೊಡುತ್ತಿದ್ದುದನ್ನೇ ಒಂದು ಕತೆಯಾಗಿಸಬಹುದು
ಸಣ್ಣ ವಿಚಾರ ಎನಿಸಿದರೂ ಇವುಗಳಲ್ಲಿ ಅಡಗಿರುವ ಪ್ರೀತಿ ಅಗಾಧ ಇದೆಲ್ಲದರಿಂದ ಇಂದಿನ ಮಕ್ಕಳು ವಂಚಿತರಾದರಲ್ಲಾ ಎಂದು ಒಮ್ಮೊಮ್ಮೆ ನೋವಾಗುತ್ತದೆ
ಇನ್ನು ಮದುವೆಗಳಂತೂ ಒಂದು ವಾರ ಠಿಕಾಣಿ ಹೊಡೆಯುವ ಕಾರ್ಯಕ್ರಮ ಮನೆಬಾಗಿಲಿನಲ್ಲಿ ಧಾರೆ ಎರೆಯುತ್ತಿದ್ದ ಮದುವೆಗಳ ಸಂಭ್ರಮ ಒಂದುರೀತಿಯಾದರೆ ಇದ್ದ ಒಂದೆರೆಡು ಛತ್ರಗಳಲ್ಲಿ ನಡೆಯುತ್ತಿದ್ದ ಮದುವೆಗಳ ಸಂಭ್ರಮ ಮತ್ತೊಂದು ರೀತಿಯದ್ದು
ಅಲ್ಲಿ ಅಪರೂಪಕ್ಕೆ ಸಿಗುತ್ತಿದ್ದ ನೆಂಟರಿಷ್ಟರು ಮಕ್ಕಳಿಗೆ ಯಾರ ಮಗ ನೀನು ಎಂದು ಕೇಳುತ್ತಿದ್ದುದು ಪರಿಚಯಿಸಿಕೊಳ್ಳುತ್ತಾ ಸುತ್ತಮುತ್ತಲಿನವರಿಗೆ ಸಂಬಂದ ವರ್ಣಿಸುತ್ತಿದ್ದುದೇ ಅದ್ಬುತ
ಅಗ ಅಪರಿಚಿತರೂ ಸ್ವಂತದವರಾಗುತ್ತಿದ್ದರು ಈಗ ಸ್ವಂತದವರು ಅಪರಿಚಿತರಾಗುತ್ತಿದ್ದಾರೆ
- ಸಂಪಾದಕರು ಮತ್ತು ಲೇಖಕರು
ಹರೀಶ್ ಹೆಚ್ ಆರ್
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ
Vimarsha.info