ವಿಷಯಕ್ಕೆ ಹೋಗಿ

ಅಫಿಡೆವಿಟ್ ಸಲ್ಲಿಸಿದ ಬೆಳೆಗೆರೆ-ಕೋಟೆ ಕಾಲಂ.


ಅಫಿಡೆವಿಟ್ ಸಲ್ಲಿಸಿದ ಬೆಳೆಗೆರೆ
ಕೋಟೆ ಕಾಲಂ 


ಬೆಳ್ಳಂಬೆಳಿಗ್ಗೆ ಮೊಬೈಲ್ ತೆಗೆದು ಫೇಸ್ಬುಕ್ ನೋಡಿದರೆ ಅಚ್ಚರಿ ಖ್ಯಾತಪತ್ರಕರ್ತ ರವಿಬೆಳಗೆರೆ ನಿಧನ ಎಂಬ ಸ್ಟೇಟಸ್ ಇತ್ತು 
ಕಾಮೆಂಟ್ ಬಾಕ್ಸ್ನಲ್ಲಿ ರಿಪ್ ಗಳ ಸುರಿಮಳೆ ಅಲ್ಲಿಗೆ ಕನ್ನಡ ಪತ್ರಿಕೋದ್ಯಮದ ವರ್ಣರಂಜಿತ ವ್ಯಕ್ತಿ ಇನ್ನಿಲ ಎಂಬುದು ಖಚಿತವಾಯಿತು
ದಶಕಗಳ ಕಾಲ ಸುಟ್ಟ ಅಸಂಖ್ಯಾತ ಸಿಗರೇಟ್ಗಳು ಆ ದಿನಗಳಲ್ಲಿ ಹೀರಿದ ಲೀಟರ್ ಗಟ್ಟಲೆ ಮದ್ಯದ ಹೊಡೆತ ಶುಗರ್ ಕಾಲುನೋವು ತೊದಲುವ ನಾಲಿಗೆ ಕತ್ತುಕೆಳಗೆ ಹಾಕಿ ಮಾತನಾಡಲು ಆಯಾಸಪಡುವುದನ್ನು ಕಂಡವರಿಗೆ ಸಾವು ಅಷ್ಟಾಗಿ ಅಚ್ಚರಿ ತರಲಿಲ್ಲವಾದರೂ ಆತನ ಜೀವಂತಿಕೆಗೆ 62ರ ವಯೋಮಾನಕ್ಕೆ ಸಾವು ಆಘಾತವೇ ಸರಿ

ಬಳ್ಳಾರಿಯ ಸತ್ಯನಾರಾಯಣ ಪೇಟೆಯಲ್ಲಿ 1958 ರ ಮಾ.15 ರಂದು ತಂದೆಯ ನೆರಳೇ ಇಲ್ಲದೆ ತಾಯಿಯ ಅಸರೆಯಲ್ಲಿ ಬೆಳೆದ ಬೇಜವಾಬ್ದಾರಿ ಹುಡುಗ ರವಿಬೆಳೆಗೆರೆ 
ಮುಂದೆ ದೊಡ್ಡದೊಡ್ಡವರಿಗೆ ಜವಾಬ್ದಾರಿಯ ಪಾಠ ಹೇಳಿದ್ದು ಇತಿಹಾಸ
ಪಿ.ಲಂಕೇಶ್ ವೈಕುಂಠ ರಾಜು ನಂತರ ಜಾಹೀರಾತಿನ ಹಂಗಿಲ್ಲದೆ ಪತ್ರಿಕೆಯನ್ನು ಯಶಸ್ವಿಯಾಗಿ ನಡೆಸಿದ ಹೆಗ್ಗಳಿಕೆ ಬೆಳೆಗೆರೆ ಅವರದ್ದು
ಕಪ್ಪುಬಿಳುಪಿನ ಸುಂದರಿ ಹಾಯ್ ಬೆಂಗಳೂರನ್ನು 1995 ರಲ್ಲಿ ರವಿ ಹೊರ ತಂದಾಗ ಅದರ ಹೆಸರು ಕೇಳಿ ನಕ್ಕವರೇ ಹೆಚ್ಚು ಅದರೆ ಅ ನಂತರದಲ್ಲಿ ಅದು ಕಂಡ ಯಶಸ್ಸು ಬಹುಶ ಬೆಳೆಗೆರೆಯೆ ಊಹಿಸಿರಲಿಲ್ಲ ಎನಿಸುತ್ತದೆ
ಜಾಣಜಾಣೆಯರ ಪತ್ರಿಕೆ ಲಂಕೇಶ್ ಇಳಿಜಾರಿನಲ್ಲಿದ್ದಾಗ ಬಂದ ಹಾಯ್ ಬೆಂಗಳೂರು ರವಿಬೆಳೆಗೆರೆಯ ಖಾಸ್ಬಾತ್ ಬಾಟಂ ಐಟಮ್ ಅಫಿಡೆವಿಟ್ ಕಾಲಂ ಒದುಗರಿಗೆ ಹೊಸತನ ನೀಡಿತು
ಹಸಿ ಕ್ರೈಂ ರಕ್ತ ಸಿಕ್ತ ಬರಹ ತೊಂಬತ್ತರ ದಶಕದ ಓದುಗರಿಗೆ ಪತ್ರಿಕೆ ಖರೀದಿಸಲು ಪ್ರೇರೇಪಿಸಿತು
ಬೆಳೆಗೆರೆಯ ವಿಶಿಷ್ಟ  ಶೈಲಿ ದಂಧೆ ಮಾಂಸದ ಅಡ್ಡ ಮೂಗುಬೊಟ್ಟು ಪಿಂಪ್ ಇತ್ಯಾದಿ ಪದಪುಂಜಗಳ ಬಳಕೆ ಹೊಸ ಓದುಗರ ವರ್ಗವನ್ನೇ ಸೃಷ್ಟಿಸಿತು,
ಹಾಯ್ ಬೆಂಗಳೂರು ಪತ್ರಿಕೆ ಯಥಾವತ್ತು ಪತ್ರಿಕೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟವು ಆ ಶೈಲಿ ಅನುಸರಿಸುವ ಪತ್ರಕರ್ತರು ಹುಟ್ಟಿಕೊಂಡರು
ಸತ್ಯದ ತಲೆಯ ಮೇಲೆ  ಹೊಡೆದಂತೆ ಸುಳ್ಳ ನ್ನು ಬರೆಯುವುದರಲ್ಲಿ ನಿಸ್ಸೀಮರಾದ ಬೆಳೆಗೆರೆ ಖ್ಯಾತ ಬರಹಗಾರರ ಕಾದಂಬರಿ ತರ್ಜುಮೆಯನ್ನು ತಮ್ಮದೆಂದರೂ ಸಹ ಓದುಗರು ಒಪ್ಪಿದರು ,
ಕಪ್ಪುಬಿಳುಪಿನ ಸುಂದರಿಯ ಒಡಲಲ್ಲಿ ಜನರ ಜಾತಕವನ್ನೇ ಇಟ್ಟುಕೊಂಡು ಆಟವಾಡಿಸಿದ ಬೆಳೆಗೆರೆ ಹಣದ ಹಪಾ ಹಪಿತನಕ್ಕಾಗಿ ಸಿನಿಮಾ ನಟಿಯರು ರಾಜಕಾರಣಿಗಳು ನಂಬರ್ ದೋ ದಂಧೆ ಕುಳಗಳನ್ನು ಉರಿದುಮುಕ್ಕಿ ಶಾಪ ಹಾಕಿಸಿಕೊಂಡಿದ್ದು ಸುಳ್ಳಲ್ಲಾ
ಎರಡೆರೆಡು ವಿಷಯಗಳಲ್ಲಿ ಎಂಎ ಪದವೀಧರರಾದ ಆರ್ಬಿ ಕೆಲಕಾಲ ಹಾಸನದ ಎನ್ಡಿಆರ್ಕೆ ಕಾಲೇಜಿನಲ್ಲಿ
ಉಪನ್ಯಾಸಕರಾಗಿದ್ದರು
ಸಕಲೇಶಪುರ ತಾಲೂಕಿನ ಬ್ಯಾಕರವಳ್ಳಿ ಹೆತ್ತೂರು ಸಮೀಪದ ಶೂಟಿಂಗ್ ಸ್ಪಾಟ್ಗಳು ಇವರ ನೆಚ್ಚಿನ ತಾಣ ಸಿಪಾಯಿ ಚಿತ್ರ ಚಿತ್ರಿಕರಣವಾದ ಜಾಗದಲ್ಲಿ ಬೆಳಗ್ಗಿನ ಜಾವದವರೆಗೂ ಕುಡಿದು ಚಿತ್ತಾಗಿ ಹಿಂದಿನ ಸೀಟಿನಲ್ಲಿ ಮಲಗಿಕೊಂಡೇ ವಾಪಾಸಾಗುತ್ತಿದ್ದುದು ಮಾಮೂಲು
ಪತ್ರಕರ್ತನಿಗಿಂತ ಕಾದಂಬರಿಕಾರನಾಗಿ ಬೆಳೆಗೆರೆ ಸದಾ ನೆನಪಿನಲ್ಲುಳಿಯುತ್ತಾರೆ ಇವರ ಎಲ್ಲಾಪುಸ್ತಕಗಳು ಪುಸ್ತಕ ಪ್ರಿಯರ ಫೇವರಿಟ್ ಈಗಲೂ ಮಾರಾಟದಲ್ಲಿ ಬೆಳೆಗೆರೆ ಬುಕ್ಕುಗಳೆ ನಂಬರ್ ವನ್
ಅದರಲ್ಲಿಯೂ ಹಿಮಾಲಯನ್ ಬ್ಲಂಡರ್ ಡಯಾನ ರೇಷ್ಮೆ ರುಮಾಲು ಮಾಂಡವಿ ಮಾಟಗಾತಿ ಪಾಪಿಗಳಲೋಕದಲ್ಲಿ ಇಂದಿರೆಯ ಮಗ ಸಂಜಯ ಭೀಮಾತೀರದ ಹಂತಕರು ಅದ್ಬುತ ಪುಸ್ತಕಗಳು
ಪತ್ರಕರ್ತ ಬರಹಗಾರ ನಟ ನಿರೂಪಕ ಹೀಗೆ ಹತ್ತು ಹಲವು ರೂಪಗಳಲ್ಲಿ ಕಾಣಿಸಿಕೊಂಡ ಬೆಳೆಗೆರೆ ಎಲ್ಲದರಲ್ಲಿಯೂ ಯಶ ಕಂಡವರು
ಅತ್ಯಂತ ಶ್ರೀಮಂತ ಪತ್ರಕರ್ತ ಬೆಳೆಗೆರೆ ತಮ್ಮ ಕುಟುಂಬಕ್ಕೆ ಕಾದಂಬರಿಗಳ ಎಟಿಎಂ ಅನ್ನೇ ಬಿಟ್ಟುಹೋಗಿದ್ದಾರೆ ಅದೇರೀತಿ ಪತ್ರಿಕೋದ್ಯಮ ಬಳಸಿಕೊಂಡು ದುಡ್ಡುಮಾಡಬಹುದು ಎಂಬುದನ್ನು ಹಲವರಿಗೆ ಹೇಳಿಕೊಟ್ಟು ಹೋಗಿದ್ದು ಆ ಸಂತಾನ ಸಮಾಜವನ್ನು ಕಾಡುತ್ತಿದೆ
ಕ್ರಿಮಿನಲ್ ಗಳ ವೈಭವೀಕರಣ ಹಂತಕರ ಮಾರ್ಕೆಟಿಂಗ್ ಭೂಗತ ಜಗತ್ತನ್ನು ಬಳಸಿಕೊಳ್ಳುವ ಕಲೆ ಇದೆಲ್ಲದರ ನಡುವೆಯೂ ಬೆಳೆಗೆರೆ ಉತ್ತಮ ಬರಹಗಾರರಾಗಿ ಸದಾ ನೆನಪಿನಲ್ಲಿರುತ್ತಾರೆ
ಇವರ ಗುರು ಖುಷ್ವಂತ್ ಸಿಂಗ್ ರಂತೆ ತಮ್ನ ವೀಕ್ನೆಸ್ ಗಳನ್ನು ಓದುಗರೆದುರು ಅನಾವರಣ ಗೊಳಿಸಿದರೂ ಬೆಳೆಗೆರೆ ಅವರಂತೆ ಧೀರ್ಘಕಾಲ ಬದುಕುವ ಲಕ್ಕಿಫೆಲೊ ಆಗಲಿಲ್ಲ.


   ಲೇಖಕರು  ಮತ್ತು  ಸಂಪಾದಕರು

         ಹರೀಶ್ ಹೆಚ್ ಆರ್ ಕೋಟೆ 



ಕಾಮೆಂಟ್‌ಗಳು

  1. ಫ್ರವಿ ಬೆಳಗೆರೆ ಯವಾರ ಆತ್ಮಕ್ಕೆ ಚಿರ ಶಾಂತಿ ಕೊರುತ್ತ ಸರ್ ತಾವು ಅವರನ್ನೇ ಕಿರು ಬರಹದಲ್ಲಿ ಕಟ್ಟಿ ಕೊಟ್ಟಿದ್ದೀರಿ. ನೆಗೆಟೀವ್ ಗುಣಗಳನ್ನು ದಾಟಿ ಉತ್ತಮ ಕೆಲಸಗಳನ್ನು ಮಾಡಿ.ಸಾಹಿತ್ಯ ಲೋಕವನ್ನು ಅರಳಿಸಿ.ಹಗಲು ಕಳ್ಳರಿಗೆ ಸಿಂಹ ಸ್ವಪ್ನರಾಗಿ.ಪತ್ರಿಕೆ ನಡೆಸುವವರಿಗೆ ಮಾದರಿಯಾಗಿ.ಎಂದೂ ಮರೆಯದ ಹಾಡಾಗಿ ಬದುಕಿದ ಮಹನೀಯರಿಗೆ ನಿಮ್ಮಿಂದ ಉತ್ತಮ ಮಾತುಗಳು ಹೊರಹೊಮ್ಮಿವೆ. ಧನ್ಯ ವಾದಗಳು.ಅವರ ಆತ್ಮಕ್ಕೆ ಶಾಂತಿ. ದೊರೆಯಲಿ

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

Vimarsha.info

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರೈತ ದಿನ ಆಚರಣೆ-ಸಾವಯವ ಕೃಷಿ ಪದ್ಧತಿಗೆ ಸಲಹೆ.

👇👇👇👇👇👇👇👇👇👇👇👇👇 ರೈತ ದಿನಾಚರಣೆ https://youtube.com/shorts/EGX4c_IVzY8?si=erkB19_6MH0KmBG6 ಮೊಸಳೆಹೊಸಹಳ್ಳಿಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ರಾಷ್ಟ್ರೀಯ ರೈತರ ದಿನದ ಅಂಗವಾಗಿ ಸಾವಯವ ಕೃಷಿ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಪುಣ್ಯಭೂಮಿ ಪರಿಸರ ಪ್ರಶಸ್ತಿ ಮತ್ತು ಶ್ರೇಷ್ಠ ಕೃಷಿಕ ಪ್ರಶಸ್ತಿ ಪುರಸ್ಕೃತರಾದ ಕಟ್ಟಾಯ ಹೋಬಳಿಯ ಬ್ಯಾಡರಹಳ್ಳಿಯ ಸಾವಯವ ಕೃಷಿಕರು, ಪ್ರಗತಿಪರ ರೈತರು ಮತ್ತು ಪಾರಂಪರಿಕ ವೈದ್ಯರಾದ ಶ್ರೀಯುತ ರವಿಶಂಕರ್ ಅವರು ಆಗಮಿಸಿದ್ದರು. ಸಂಸ್ಥೆಯಲ್ಲಿ ರೈತರಿಂದ ಗಿಡ ನೆಡುವುದರ ಮೂಲಕ ರೈತರ ದಿನವನ್ನು ಉದ್ಘಾಟಿಸಲಾಯಿತು. ಸಾವಯವ ಕೃಷಿಯನ್ನು ಉದ್ದೇಶಿಸಿ ಮಾತನಾಡಿದ ಇವರು ವಿದ್ಯಾರ್ಥಿಗಳಿಗೆ ಸಾವಯವ ಕೃಷಿಯ ಕ್ರಮಗಳು, ಆರೋಗ್ಯಕರ ಪ್ರಯೋಜನಗಳನ್ನು ವಿವರಿಸುತ್ತಾ, ಬೆಳೆಗೆ ಯಾವುದೇ ರಾಸಾಯನಿಕ ಗೊಬ್ಬರಗಳು, ಕೀಟನಾಶಕಗಳನ್ನು ಬಳಸದೇ ಕೇವಲ ಹಸುವಿನ ಸಗಣಿ ಮತ್ತು ಗಂಜುಳದಿಂದ ರಸಗೊಬ್ಬರ ಮತ್ತು ಸಾವಯವ ಕೀಟನಾಶಕವನ್ನು ತಯಾರಿಸಿ ಮಣ್ಣಿನ ಫಲವತ್ತತೆಯನ್ನು ಹೇಗೆ ಹೆಚ್ಚಿಸುವುದು ಮತ್ತು ಯಾವ ಕಾಲ, ನಕ್ಷತ್ರ, ಹವಾಮಾನ ಮತ್ತು ಮಾಸಕ್ಕನುಗುಣವಾಗಿ ಯಾವ ಬೆಳೆ ಬೆಳೆಯಬೇಕೆಂಬುದನ್ನು ರೈತರು ಸೂಕ್ತವಾಗಿ ಅರಿತಿರಬೇಕು ಮತ್ತು ಪೌಷ್ಟಿಕ ಆಹಾರ ಸೇವನೆಯಿಂದ ಆರೋಗ್ಯ ವೃದ್ಧಗೊಳಿಸಿಕೊಳ್ಳ

ಮೊಸಳೆಹೊಸಳ್ಳಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿಶ್ವ ಏಡ್ಸ್ ದಿನ ಆಚರಣೆ.

ಹಾಸನ ತಾಲ್ಲೂಕಿನ ಮೊಸಳೆಹೊಸಹಳ್ಳಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್.) ಘಟಕದ ವತಿಯಿಂದ ರೆಡ್ ರಿಬ್ಬನ್ ಕ್ಲಬ್ ಸಹಯೋಗದೊಂದಿಗೆ, ವಿಶ್ವ ಏಡ್ಸ್ ದಿನದ ಪ್ರಯುಕ್ತ ಸಂಸ್ಥೆಯಲ್ಲಿ ಏಡ್ಸ್ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.. . ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಾಸನ ಜಿಲ್ಲಾ ಏಡ್ಸ್ ಪ್ರಿವೆನ್ಷನ್ ಮತ್ತು ಕಂಟ್ರೋಲ್ ಘಟಕದ ಸೂಪರ್ವೈಸರ್ ಶ್ರೀಯುತ ರವಿಕುಮಾರ್ ವಿ. ಬಲ್ಲೇನಹಳ್ಳಿ ಯವರು ಮತ್ತು ಲಯನ್ಸ್ ಕ್ಲಬ್ ಅಧ್ಯಕ್ಷರಾದ ಶ್ರೀಯುತ ನಾಗೇಶ್ ರವರು ಹೆಚ್.ಐ.ವಿ. ಸೋಂಕಿನ ಬಗ್ಗೆ ವಿದ್ಯಾರ್ಥಿಗಳಿಗೆ ಸಂಕ್ಷಿಪ್ತ ಮಾಹಿತಿ ನೀಡುವ ಮೂಲಕ ಜಾಗೃತಿ ಮೂಡಿಸಿದರು.  ಮುಂದುವರೆದು ಸಂಸ್ಥೆಯಲ್ಲಿ ಏಡ್ಸ್/ಹೆಚ್.ಐ.ವಿ. ಸೋಂಕಿನ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಸವಾಗಿ ಚರ್ಚಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಪೋಸ್ಟರ್ ಡಿಸೈನ್ ಮತ್ತು ರಂಗೋಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು ಮತ್ತು ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು ಸಂಸ್ಥೆಯ ಎನ್.ಎಸ್.ಎಸ್. ಅಧಿಕಾರಿಗಳಾದ ಶ್ರೀಯುತ ವೀರಭದ್ರಸ್ವಾಮಿ ಕೆ.ಎಂ. ರವರು, ಎನ್.ಎಸ್.ಎಸ್. ಚಟುವಟಿಕೆಯ ಅಡಿಯಲ್ಲಿ ವಿದ್ಯಾರ್ಥಿಗಳು ಸುತ್ತಮುತ್ತಲ, ಮೂರು ಗ್ರಾಮಗಳನ್ನು ದತ್ತು ಪಡೆದು ಸ್ವಚ್ಛತೆ, ಆರೋಗ್ಯ, ಉನ್ನತ ಶಿಕ್ಷಣ ಮುಂತಾದ ವಿಷಯಗಳ ಬಗ್ಗೆ ಜಾಗೃತಿ

ಹಾಸನ ಜಿಲ್ಲೆಯಲ್ಲಿ ಸ್ವಯಂ ಉದ್ಯೋಗಾವಕಾಶಗಳು.

ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯಲ್ಲಿ ನೆಲೆಸಿರುವ ಗೃಹಿಣಿಯರು, ನಿವೃತ್ತ ಅಧಿಕಾರಿಗಳು /ನೌಕರರು ಮತ್ತು ನಿರುದ್ಯೋಗಿಗಳಿಗೆ ಆರ್ಥಿಕ ವಲಯದಲ್ಲಿ ಹೂಡಿಕೆ ಇಲ್ಲದೆ ವೃತ್ತಿ ಅವಕಾಶಗಳು / ವ್ಯಾಪಾರ ಅವಕಾಶಗಳು  ಪುರುಷ ಮತ್ತು  ಮಹಿಳೆಯರಿಗೆ   ವಯಸ್ಸಿನ ಮಿತಿ: - 25 ರಿಂದ 65 ವರ್ಷಗಳು.  ದಯವಿಟ್ಟು ನಿಮ್ಮ ವಿವರಗಳನ್ನು ಕೆಳಗಿನ ಇಮೇಲ್ ಐಡಿಗೆ ಕಳುಹಿಸಿ.  freelanceadvertisingthassan@gmail.com  ಅಥವಾ  ಸಂಪರ್ಕಿಸಿ  7090899728 Career opportunities /business opportunities with out an investments in financial sector for housewives ,retired officials /employees and unemployed persons residing in Hassan district, Karnataka state India For both male and female. Age limit:- 25 to 65 years. Please send your details to below email id. freelanceadvertisingathassan@gmail.com Or  Contact  070908 99728