ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

#ಹಳೇಬೀಡು-ಬೇಲೂರು- ಸೋಮನಾಥಪುರ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಪ್ರಧಾನಮಂತ್ರಿ ಮೋದಿ ಹಾಗೂ ಕಲೆ ಮತ್ತು ಪರಂಪರೆ ಅಭಿಮಾನಿಗಳಿಗೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರಿಂದ ಧನ್ಯವಾದಗಳ ಅರ್ಪಣೆ.

ಫೋಟೋ ಕೃಪೆ-ಎಎನ್ಐ(ANI) ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಕರ್ನಾಟಕದ ಹಳೇಬೀಡು ಬೇಲೂರು ಮತ್ತು ಸೋಮನಾಥಪುರ ದೇಗುಲಗಳನ್ನು ಸೇರಿಸುವ ಕಲೆ ಮತ್ತು ಪರಂಪರೆ ಸಂರಕ್ಷಣೆ ಅಭಿಮಾನಿಗಳ ಸಲಹೆಯನ್ನು ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರವರು ಮನವಿ ಮಾಡಿದ್ದ ತತ್ಸಂಭಿತವಾಗಿ ಈಗ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಬೇಲೂರು, ಹಳೇಬೀಡು, ಸೋಮನಾಥಪುರ ದೇವಾಲಯ ನಾಮನಿರ್ದೇಶನವನ್ನು ಕೇಂದ್ರ ಸರ್ಕಾರ ಯುನೆಸ್ಕೊಗೆ ಶಿಫಾರಸು ಮಾಡಿರುವ ಅಂತಿಮ ಪಟ್ಟಿಯಲ್ಲಿ ಬೇಲೂರಿನ ಚನ್ನಕೇಶವ, ಹಳೇಬೀಡಿನಲ್ಲಿರುವ ಹೊಯ್ಸಳೇಶ್ವರ ಹಾಗೂ ಸೋಮನಾಥಪುರದಲ್ಲಿರುವ ಕೇಶವ ದೇಗುಲಗಳನ್ನು ಸೇರಿಸಿದೆ. ದೇವೇಗೌಡ ಅವರು ಕಳೆದ ತಿಂಗಳು, ಹೊಯ್ಸಳ ದೇವಾಲಯಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಯುನೆಸ್ಕೋಗೆ ಸಲ್ಲಿಸುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ನಿರ್ದೇಶನ ನೀಡುವಂತೆ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದರು ಸ್ಮರಿಸಿದ  ಮಾಜಿ ಪ್ರಧಾನಿ ದೇವೇಗೌಡರು 'ಬೇಲೂರು, ಹಳೇಬೀಡು ಮತ್ತು ಸೋಮನಾಥಪುರದಲ್ಲಿರುವ ಹೊಯ್ಸಳರ ಕಾಲದ ವಾಸ್ತುಶಿಲ್ಪ ದೇವಾಲಯಗಳು ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಗೆ ಭಾರತದಿಂದ ಅಧಿಕೃತ ನಾಮನಿರ್ದೇಶನ ಆಗಿರುವುದು ಸಂತೋಷ, ಹೆಮ್ಮೆ. ನನ್ನ ಸಲಹೆಯನ್ನು ಸ್ವೀಕರಿಸಿದ್ದಕ್ಕಾಗಿ ಪ್ರಧಾನಿ ಮೋದಿ ಅವರಿಗೆ ಧನ್ಯವಾದಗಳು ಮತ್ತು ಕರ್ನಾಟಕದ ಎಲ್ಲಾ ಕಲೆ ಮತ್ತು ಪರಂಪರೆಯ ಪ್ರೇಮಿಗಳಿಗೆ ಕೃತಜ್ಞತ