ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

#ವಿಮರ್ಶಾ -ಹಾಸನ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ವಿಮರ್ಶಾ -ಸುದ್ದಿ ನೋಟ

ನ. 20 ರಿಂದ ಬೆಂಬಲ ಬೆಲೆಯೊಂದಿಗೆ ಭತ್ತ ಖರೀದಿ ಪ್ರಕ್ರಿಯೆ ಪ್ರಾರಂಭ -ಹಾಸನ ಜಿಲ್ಲೆಯಲ್ಲಿ ಬೆಂಬಲ ಬೆಲೆಯೊಂದಿಗೆ ಭತ್ತ ಖರೀದಿ ಪ್ರಕ್ರಿಯೆಯು ನ. 20 ರಿಂದ ಪ್ರಾರಂಭವಾಗಲಿದ್ದು 2021 ರ ಮಾ. 21 ರವರೆಗೂ ಇದಕ್ಕೆ ಅವಕಾಶ ಇದ್ದು, ಯಾವುದೇ ಲೋಪ ಇಲ್ಲದೆ ಈ ಪ್ರಕ್ರಿಯೆ ನಡೆಸುವಂತೆ ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಂ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಬೆಂಬಲ ಬೆಲೆಯೊಂದಿಗೆ ಭತ್ತ ಖರೀದಿಗೆ ಸಂಬಂಧೀಸಿದಂತೆ ಟಾಸ್ಕ್ ಫೋರ್ಸ್ ಸಮಿತಿ ಸಭೆ ನಡೆಸಿ ಮಾತನಾಡಿದ ಅವರು ಬೆಂಬಲ ಬೆಲೆ ಯೋಜನೆಯಡಿ ಉತ್ತಮ ಗುಣಮಟ್ಟದ ಭತ್ತಕ್ಕೆ 1,888 ರೂ ಪ್ರತಿ ಕ್ವಿಂಟಾಲ್‍ಗೆ ನಿಗಧಿಯಾಗಿದ್ದು, ಕಡಿಮೆ ಗುಣಮಟ್ಟದ ಭತ್ತಕ್ಕೆ 1,868 ರೂ ನಿಗಧಿಯಾಗಿದೆ. ಭತ್ತವನ್ನು ನೀಡುವ ರೈತರಿಗೆ ಗರಿಷ್ಠ ಮೂರು ದಿನಗಳಲ್ಲಿ ವಿಳಂಬವಾಗದೆ ಅವರ ಖಾತೆಗೆ ಹಣ ವರ್ಗಾವಣೆಯಾಗುವಂತೆ ಕ್ರಮ ವಹಿಸಬೇಕು. ಈ ನಿಟ್ಟಿನಲ್ಲಿ ಅಗತ್ಯ ದಾಖಲಾತಿಗಳನ್ನು ಖರೀದಿಗೆ ಮುನ್ನವೇ ಸರಿಯಾಗಿ ಪರಿಶೀಲಿಸಿ ಪಡೆಯಿರಿ ಎಂದರು. ಬೆಂಬಲ ಬೆಲೆಯೊಂದಿಗೆ ಭತ್ತ ಖರೀದಿಗೆ ಸಾಕಷ್ಟು ದೀರ್ಘ ಸಮಯಾವಕಾಶ ಇದೆ. ರೈತರು ಯಾವುದೇ ಆತುರ ಮಾಡದೆ ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ತಾವು ನೀಡುತ್ತಿರುವ ದಾಖಲಾತಿಗಳು ಸರಿಯಾಗಿವೆಯೇ ಎಂಬುದನ್ನು ಪರಿಶೀಲಿಸಿಕೊಂಡು ಫ್ರೂಟ್ಸ್ ಗುರುತಿನ ಚೀಟಿ ಪಡೆದು ಸರಿಯಾದ ಬ್ಯಾಂಕ್ ದಾಖಲಾತಿಗಳನ್ನು ಸಲ್ಲಿಸುವಂತೆ ಅಪರ ಜಿಲ್ಲಾಧಿಕ