ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

# ನಾಟಕ ಸಾರ್ವಭೌಮ ಬೇಲೂರು ಕೃಷ್ಣಮೂರ್ತಿ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಶತನಾಟಕ ಸಾರ್ವಭೌಮ ಬೇಲೂರು ಕೃಷ್ಣಮೂರ್ತಿ ಇನ್ನಿಲ್ಲ.

ಸಂಪಾದಕರು  ಹರೀಶ್ ಹೆಚ್ ಆರ್  ಕೋಟೆ  *ಶತನಾಟಕ* *ಸಾರ್ವಭೌಮ ,ಕಾದಂಬರಿಕಾರರು* *,ವಿಚಾರವಾದಿಗಳು,ಸಿನಿಮಾ* *ನಿರ್ದೇಶಕರು ,* *ನಿರ್ಮಾಪಕರು,ಕರ್ನಾಟಕ* *ರಾಜ್ಯೋತ್ಸವ ಪ್ರಶಸ್ತಿ* *ಪುರಸ್ಕೃತರು, ಅನೇಕ ರಾಜ್ಯ* *ಮಟ್ಟದ* *ಪ್ರಶಸ್ತಿಗಳು,ಪುರಸ್ಕಾರಗಳು* *ಸಂದಿವೆ.ನೇರ* *ನುಡಿಯ,* *ನೇರ ನಡೆಯ,ಬಿಚ್ಚುಮನಸ್ಸಿನ* *ಹೃದಯವಂತ ಸಾಹಿತಿ* , ತಮ್ಮ ದೇಹವನ್ನೇ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿಗೆ ದಾನ ಮಾಡಿದ ಪರಮಧಾನಿ,ತೊಂಭತ್ತು ವರ್ಷಗಳ ಸಾರ್ಥಕ ಬದುಕು ಬಾಳಿದ ಮಾನವತಾವಾದಿ, ನಮ್ಮ ನಡುವಿನ ಸಾಹಿತ್ಯ ಪರಂಪರೆಯ ಮಹಾ ಕೊಂಡಿ ಇನ್ನಿಲ್ಲ.  ಇಂದು ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಉಸಿರೆಳಿದಿದ್ದಾರೆ. ನಾಟಕ ಸಾರ್ವಭೌಮ - ಬೇಲೂರು ಕೃಷ್ಣಮೂರ್ತಿ ಪರಿಚಯ ಲೇಖನ-ಕೊಟ್ರೇಶ್.ಎಸ್. ಉಪ್ಪಾರ್. ನಾಟಕ ಎಂದಾಕ್ಷಣ ನಮಗೆ ದುತ್ತನೇ ನೆನಪಿಗೆ ಬರುವುದು ಬೇಲೂರು ಕೃಷ್ಣಮೂರ್ತಿಯವರು. ಕನ್ನಡ ಸಾರಸ್ವತ ಲೋಕದಲ್ಲಿ ‘ನಾಟಕ’ ಪ್ರಕಾರಕ್ಕೆ ಭದ್ರ ಅಡಿಪಾಯ ಹಾಕಿದವರಲ್ಲಿ ಬೇಲೂರು ಕೃಷ್ಣಮೂರ್ತಿಯವರು ಮುಂಚೂಣಿಯಲ್ಲಿ ನಿಲ್ಲುತ್ತಾರೆ ಎಂದರೆ ಅತಿಶಯೋಕ್ತಿಯಾಗಲಾರದು. ಇವರು 1931 ಆಗಸ್ಟ್ 08 ರಂದು ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಮಾದನಹಳ್ಳಿ ಗ್ರಾಮದ ಅನಂತರಾಮಯ್ಯ ಮತ್ತು ಲಕ್ಷ್ಮೀದೇವಮ್ಮ ಬ್ರಾಹ್ಮಣ ದಂಪತಿಗಳ ಪುತ್ರರಾಗಿ ಜನಿಸಿದರು. 110 ನಾಟಕಗಳು, 30 ಇತರ ಕೃತಿಗಳನ್ನು ಸೇರಿದಂತೆ ಸುಮಾರು 140ಕ್ಕೂ ಹೆಚ್ಚು ಕೃತಿರತ್ನಗಳನ್ನು ಕನ್ನಡ ಸಾರಸ್