ಕೋವಿಡ್ ಎರಡನೇ ಅಲೆ ಬರದಂತೆ ತಡೆಗಟ್ಟಲು ಕ್ರಮ ವಹಿಸಲು ಸೂಚನೆ ಹಾಸನ (ಕರ್ನಾಟಕ ವಾರ್ತೆ):- ಕೋವಿಡ್ ಎರಡನೇ ಅಲೆ ಬರದಂತೆ ತಡೆಗಟ್ಟಲು ಹೊರ ರಾಜ್ಯದಿಂದ ನೇರವಾಗಿ ಜಿಲ್ಲೆಗೆ ಆಗಮಿಸುವ ಪ್ರತಿಯೊಬ್ಬರಿಗೂ ಆರ್.ಟಿ,ಪಿ.ಸಿ.ಆರ್. ಪರೀಕ್ಷೆ ಕಡ್ಡಾಯವಾಗಿ ಮಾಡಿಸಬೇಕು ಈ ನಿಟ್ಟಿನಲ್ಲಿ ಕ್ರಮ ವಹಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯಾದರ್ಶಿ ಹಾಗೂ ಬೆಂಗಳೂರು ಪ್ರಾದೇಶಿಕ ಅಯುಕ್ತರಾದ ನವೀನ್ ರಾಜ್ ಸಿಂಗ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಹಿತಿ ಪಡೆದ ಅವರು ಪ್ರತಿ ನಿತ್ಯ ಮಹಾರಾಷ್ಟದಿಂದ ಚನ್ನರಾಯಪಟ್ಟಣ ತಾಲ್ಲೂಕಿಗೆ 6 ಬಸ್ಸು ಹಾಗೂ ಕೇರಳದ ಮಾನಂತವಾಡಿಯಿಂದ ಅರಕಲಗೂಡು ತಾಲ್ಲೂಕಿಗೆ 2 ಬಸ್ಸು ಆಗಮಿಸುತ್ತವೆ ಈ ಬಸ್ಸುಗಳಲ್ಲಿ ಆಗಮಿಸುವ ಪ್ರತಿಯೋಬ್ಬ ಪ್ರಯಾಣಿಕರ ಮೇಲು ನಿಗವಹಿಸಲು ಕಾರ್ಯಾಚರಣೆಗಾಗಿ ತಹಸೀಲ್ದಾರ್, ತಾಲ್ಲೂಕು ಆರೋಗ್ಯಧಿಕಾರಿ ,ಪ್ರಾದೇಶಿಕ ಸಾರಿಗೆ ಇಲಾಖೆ, ಪೋಲಿಸ್ ಇಲಾಖೆ ಸೇರಿದಂತೆ ತಂಡ ರಚಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.. ಕೇರಳ ಮೂಲದಿಂದ ಬಂದು ಜಿಲ್ಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ನರ್ಸಿಂಗ್ ವಿದ್ಯಾರ್ಥಿಗಳನ್ನು ಕಡ್ಡಾಯವಾಗಿ ಪರೀಕ್ಷೆ ಮಾಡಿಸುವಂತೆ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಿಗೆ ಆದೇಶವನ್ನು ನೀಡುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದರ...
News/information/advertising/entertainment