ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

#ನೇಕಾರ್ ಸನ್ಮಾನ್ ಯೋಜನೆ ಸಹಾಯ ಧನ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ನೇಕಾರ್ ಸನ್ಮಾನ್ ಯೋಜನೆ ಮೂಲಕ ಸಹಾಯ ಧನ: ಸಚಿವ ಶ್ರೀಮಂತ ಬಾಬಾ ಸಾಹೇಬ ಪಾಟೀಲ್

. ನೇಕಾರ್ ಸನ್ಮಾನ್ ಯೋಜನೆ ಮೂಲಕ ಸಹಾಯಧನ: ಶ್ರೀಮಂತ ಬಾಬಾ ಸಾಹೇಬ ಪಾಟೀಲ ಹಾಸನ.ಸೆ.10(ಕರ್ನಾಟಕ ವಾರ್ತೆ):- ಕೋವಿಡ್-19 ಲಾಕ್‍ಡೌನ್ ನಿಂದ ಕೈಮಗ್ಗ ಮತ್ತು ಜವಳಿ ನೇಕಾರರು ಸಕಷ್ಟದಲ್ಲಿದ್ದು, ಸಹಾಯ ಮಾಡುವ ಉದ್ದೇಶದಿಂದ ಮುಖ್ಯ ಮಂತ್ರಿಯವರೊಂದಿಗೆ ಮಾತನಾಡಿ ನೇಕಾರ್ ಸನ್ಮಾನ್ ಯೋಜನೆ ಮೂಲಕ ಪ್ರತಿ ವರ್ಷ 2,000 ರೂ ಸಹಾಯಧನ ನೀಡಲಾಗುತ್ತಿದೆ ಎಂದು ಕೈಮಗ್ಗ ಮತ್ತು ಜವಳಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವರಾದ ಶ್ರೀಮಂತ ಬಾಬಾ ಸಾಹೇಬ ಪಾಟೀಲ ಅವರು ತಿಳಿಸಿದ್ದಾರೆ. ಜಿಲ್ಲಾಧಿಕಾರಿಯವರ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈಗಾಗಲೇ 41 ಸಾವಿರ ಜನ ಅರ್ಜಿ ಸಲ್ಲಿಸಿದ್ದು 8.32 ಕೋಟಿ ಹಣವನ್ನು ನೇರವಾಗಿ ಅವರ ಖಾತೆಗೆ ಜಮಾ ಮಾಡಲಾಗಿದೆ ಹಾಗೂ ವಿದ್ಯುತ್ ಮಗ್ಗಗಳಲ್ಲಿಯೂ ಸಹ 1.25 ಲಕ್ಷ ಜನರಿದ್ದು, 40 ಸಾವಿರ ಜನರು 8.13 ಕೋಟಿ ಹಣವನ್ನು ಜಮಾ ಮಾಡಲಾಗಿದೆ ಎಂದರು. ಅರ್ಜಿ ಸಲ್ಲಿಕೆಯಲ್ಲಿ ಹೆಚ್ಚು ಬಾಕಿ ಉಳಿದಿರುವ ಜಿಲ್ಲೆಗೆ ಭೇಟಿ ನೀಡಿ ಅವರ ಸಮಸ್ಯೆಗಳನ್ನು ಆಲಿಸಿ ನೇಕಾರು ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಸರಳೀಕರಿಸಿ ನೇಕಾರರ ಖಾತೆಗೆ ನೇರವಾಗಿ ಜಮಾ ಆಗುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರಾದ ಶ್ರೀಮಂತ ಬಾಬಾ ಸಾಹೇಬ ಪಾಟೀಲ ಅವರು ತಿಳಿಸಿದರು. ಸಂಕಷ್ಟದ ಸಮಯದಲ್ಲಿ ನೇಕಾರರು ಸಾಲ ಸೌಲಭ್ಯ ಪಡೆದಿದ್ದು, 1 ಲಕ್ಷದ ವರೆಗೆ ಸಾಲ ಮನ್ನ ಮಾಡಲಾಗಿದ್ದು, ಶೇ. 80 ರಷ್ಟು ಮಂದಿ ಲಾಭ ಪಡೆದಿದ್ದಾರೆ