ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

#ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಆಚರಣೆ

ಅರಣ್ಯ ಸಂರಕ್ಷಣೆ ಪ್ರತಿಯೊಬ್ಬ ನಾಗರೀಕನ ಕರ್ತವ್ಯ: ನ್ಯಾ|| ಶಿವಣ್ಣ ಹಾಸನ,ಸೆ.11(ಕರ್ನಾಟಕ ವಾರ್ತೆ):- ಅರಣ್ಯ ದೇಶದ ಸಂಪತ್ತು ಅದನ್ನು ಸಂರಕ್ಷಣೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಶಿವಣ್ಣ ಅವರು ತಿಳಿಸಿದ್ದಾರೆ. ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಅಂಗವಾಗಿ ಅರಣ್ಯ ಇಲಾಖೆ ವತಿಯಿಂದ ನಗರದ ಅರಣ್ಯ ಭವನದಲ್ಲಿಂದು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅರಣ್ಯ ಹುತಾತ್ಮರಿಗೆ ಗೌರವ ನಮನ ಸಲ್ಲಿಸಿ ಮಾತನಾಡಿದ ಅವರು ದೇಶದಲ್ಲಿ ಅರಣ್ಯ ಸಂಪತ್ತು ಇರುವುದರಿಂದ ಕಾಲಕಾಲಕ್ಕೆ ಮಳೆ ಬೆಳೆಯಾಗಿ ಸುಖ ಸಮೃದ್ಧಿಯಿಂದ ಜನರು ಜೀವನ ನಡೆಸುತ್ತಿದ್ದಾರೆ ಹಾಗಾಗಿ ಅದನ್ನು ಇನ್ನಷ್ಟು ಮುತುವರ್ಜಿಯಿಂದ ಕಾಪಾಡಿಕೊಳ್ಳಬೇಕು ಎಂದರು. ಜೀವ ಸಂಕುಲದ ಉಳಿವಿಗೆ ಮಳೆ, ಗಾಳಿ ಹಾಗೂ ನೀರು ಅತ್ಯಾವಶ್ಯಕ ಹಾಗಾಗಿ ವಸಸಂವರ್ಧನೆಗೆ ಎಲ್ಲರೂ ಶ್ರಮಿಸಬೇಕು ಎಂದು ಅವರು ಕರೆ ನೀಡಿದರು. ಅರಣ್ಯ ಸಿಬ್ಬಂದಿಗಳು ಮರಗಳ ಕಳ್ಳ ಸಾಗಾಣಿಕೆ ಮಾಡುವವರ ವಿರುದ್ಧ, ವನ್ಯ ಜೀವಿ ಭೇಟೆ ಆಡುವವರ ವಿರುದ್ಧ ಪ್ರಾಣದ ಹಂಗು ತೊರೆದು ಹೋರಾಡುತ್ತಿದ್ದಾರೆ. ಅಂತಹ ಸಂದರ್ಭದಲ್ಲಿ ಹುತಾತ್ಮರಾದ ಎಲ್ಲರ ಸಾಧನೆ ಚಿರ ಸ್ಮರಣೀಯ ಎಂದು ನ್ಯಾ|| ಶಿವಣ್ಣ ಹೇಳಿದರು. ಹಲವೆಡೆ ಅರಣ್ಯಗಳ ಒತ್ತುವರಿಯಾಗುತ್ತಿದ್ದು, ಸರ್ಕಾರವು ಆದಷ್ಟು ಕ್ರಮವಹಿಸುತ್ತಿದೆ. ಸಾರ್ವಜನಿಕರೂ ಇದರಲ್ಲಿ ಕೈಜೋಡಿಸುವ ಮೂಲಕ ಅರಣ್ಯ ಸಂರಕ್ಷಣೆ ಮಾಡಿದರೆ ನಮ್