ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

#ವಿಮರ್ಶಾ -ಕೋಟೆ ಕಾಲಂ. ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

# ಹಾಸನ --- ಕ.ಸಾ.ಪ ದಲ್ಲಿ ಮಾಧ್ಯಮ ಮಿತ್ರರು- ಕೋಟೆ ಕಾಲಂ - ಲೇಖಕರು :- ಹರೀಶ್ ಹೆಚ್ .ಆರ್ .(ಕೋಟೆ).

ಲೇಖಕರು -ಹರೀಶ್ ಹೆಚ್ ಆರ್ (ಕೋಟೆ ).   ಕ.ಸಾ.ಪ ದಲ್ಲಿ ಮಾಧ್ಯಮ ಮಿತ್ರರು- ಕೋಟೆ  ಕಾಲಂ. ಹಾಸನ ಜಿಲ್ಲಾ ಕನ್ನಡಸಾಹಿತ್ಯ ಪರಿಷತ್ ಚುನಾವಣೆ ಬಹುತೇಕ ಮಾರ್ಚ್ ತಿಂಗಳಿನಲ್ಲಿ ನಡೆಯುವ ಸಾಧ್ಯತೆ ನಿಚ್ಚಳವಾಗಿದ್ದು ಅಭ್ಯರ್ಥಿಗಳು ಸಿದ್ದತೆಯಲ್ಲಿ ತೊಡಗಿದ್ದು ಆಕಾಂಕ್ಷಿಗಳಲ್ಲಿ ಮೇಲ್ನೋಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪತ್ರಕರ್ತರು ಕಾಣತೊಡಗಿದ್ದಾರೆ ಇದೇನು ಸಾಹಿತ್ಯ ಪರಿಷತ್ತಿನ ಚುನಾವಣೆ ಯೊ ಅಥವಾ ಪತ್ರಕರ್ತರ ಸಂಘದ ಚುನಾವಣೆಯೋ ಎಂಬ ಅನುಮಾನ ಬರುವಂತೆ ಮಾಡಿದೆ ಕಳೆದ ಚುನಾವಣೆಯ ಫಲಿತಾಂಶ ಬಂದ ನಂತರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾಜಿಅಧ್ಯಕ್ಷರಾಗಿದ್ದ ಮದನ ಗೌಡರು  ಒಕ್ಕಲಿಗ ಸಮುದಾಯದವರೇ ಏಕೆ ಪದೆಪದೆ ಸಾಹಿತ್ಯಪರಿಷತ್ ಅಧ್ಯಕ್ಷರಾಗಬೇಕು ಮುಂದಿನ ಅವಧಿಯಲ್ಲಿ ದಲಿತರು ಹಾಗು ಇತರೆ ಹಿಂದುಳಿದ ವರ್ಗಗಳ ವ್ಯಕ್ತಿ ಅಯ್ಕೆಯಾಗಬೇಕು ಎನ್ನುವ ಮೂಲಕ ಸಾಹಿತ್ಯ ಪರಿಷತ್ನಲ್ಲಿ  ಎಲ್ಲರಿಗೂ ಅವಕಾಶ ಲಬ್ಯವಾಗಬೇಕೆಂಬ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದರು  ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಪತ್ರಕರ್ತ ಹೆತ್ತೂರು ನಾಗರಾಜ್ ಸಂಘಟನೆಯಲ್ಲಿ ತೊಡಗಿಕೊಂಡರು ಜೊತೆಗೆ ಉತ್ತಮ ಸಾಹಿತ್ಯ ರಚನೆ ಪುಸ್ತಕ ಪ್ರಕಟಿಸುವ ಮೂಲಕ ಸಾಹಿತ್ಯಾತ್ಮಕ ಚಟುವಟಿಕೆ ಗಳಲ್ಲಿ ಸಕ್ರಿಯರಾಗಿ ಮುಂದಿನ ಚುನಾವಣೆಗೆ ಸಿದ್ದತೆ ನಡೆಸಿದರು ಇದರೊಂದಿಗೆ ಪತ್ರಿಕೆ ಹಾಗು ದಲಿತಪರ ಹೋರಾಟದ ಮೂಲಕ ಕಣದಲ್ಲಿದ್ದೇನೆ ಎಂಬ ಸಂದೇಶ ನೀಡುತ್ತಾ ಬಂದರು ಈ ಬಾರಿ ದಲಿತರಿಗೆ ಅ