ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಕೋಟೆ ಕಾಲಂ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಕೊರೊನಾ ವಿವಾಹ -ಕೋಟೆ ಕಾಲಂ

ಕೋಟೆ ಕಾಲಂ ಕೊರೊನಾ ವಿವಾಹ  ಇದೊಂತರಾ ಹೊಸತರಾ..ಯಾಕಂದ್ರೆ ಬಾಯಿಬಾಯಿ ಬಡಕೊಂಡ್ರು ಪ್ರಚಾರಕ್ಕಾಗಿ ನೀರಿನಂತೆ ಹಣ ಖರ್ಚುಮಾಡಿದರೂ ಕೇಳದ ಜನರು ತಾವಾಗಿಯೇ ಸರಳ ವಿವಾಹಕ್ಕೆ ಮುಂದಾಗಿದ್ದಾರೆ ಇದಕ್ಕೆ ಕಾರಣವಾಗಿದ್ದು ಮಾತ್ರ ಕಣ್ಣಿಗೆ ಕಾಣದ ವೈರಸ್ ಶ್ರೀಮಂತ ರೆನಿಸಿಕೊಂಡವರು ಮಕ್ಕಳ ಮದುವೆಯನ್ನು ಅದ್ದೂರಿಯಾಗಿ ಮಾಡಿ ತಮ್ಮ ಲೆವೆಲ್ ಹೆಚ್ಚಿಸಿಕೊಳ್ಳುವ ಆಸೆಯಲ್ಲಿದ್ದವರಿಗೆ ನಿರಾಸೆಯಾದರೆ ಮದುವೆಗಾಗಿ ಸಾಲಾಸೋಲಾಮಾಡಿ ಕಮಗಾಲಾಗುವ ಅಕ್ಕ ದಲ್ಲಿದ್ದ ಮಧ್ಯಮ ವರ್ಗದ ವರು ಹಾಗು ಅರ್ಥಿಕವಾಗಿ ಸಮಕಷ್ಟದಲ್ಲಿರುವವರು ನಿಟ್ಟುಸಿರು ಬಿಟ್ಟಿದ್ದಾರೆ ವಾಸ್ತವದಲ್ಲಿ ಕಳೆದ ಒಂದು ದಶಕದಿಂದ ಮದುವೆ ಎಂಬುದು ಅತ್ಯಂತ ದುಬಾರಿಯಾಗಿ ಪರಿಣಮಿಸಿತ್ತು ಅದಕ್ಕೆ ಸಾಕ್ಷಿಎಂಬಂತೆ ತಾಲುಕು ಮಟ್ಟ ದಲ್ಲಿಯೂ ಸಹ ಲಕ್ಷರೂಪಾಯಿ ಬಾಡಿಗೆಯ ಕಲ್ಯಾಣ ಮಂಟಪ ಗಳು ಸಾಮಾನ್ಯ ಎಂಬಂತಾಗಿತ್ತು ಪ್ರತಿ ವರ್ಷ ಹೊಸ ಐಷಾರಾಮಿ ಕಲ್ಯಾಣ ಮಂಟಪಗಳು ಎಲ್ಲೆಡೆ ತಲೆ ಎತ್ತುವುದು ಸಾಮಾನ್ಯವಾಗಿತ್ತು ಇದರ ಜೊತೆಗೆ ಪ್ರೀ ವೆಡ್ಡಿಂಗ್ ಶೂಟ್ ಹನಿಮೂನ್ ಪ್ಯಾಕೇಜ್ಗಳು ಬೇರೆ ಹೆಣ್ಣುಹೆತ್ತವರನ್ನು ಐರಾಣಾಗಿಸುತ್ತಿದ್ದವು ಇನ್ನು ಬೀಗರ ಔತಣಕ್ಕೆ ಕ್ವಂಟಾಲು ಲೆಕ್ಕದಲ್ಲಿ ಕೋಳಿ ಕುರಿ ಬಲಿಯಾಗುತ್ತಿದ್ದವು ಅದನ್ನು ಪ್ರತಿಷ್ಠೆಯಾಗಿ ಪರಿಗಣಿಸುವುದಲ್ಲದೇ ತುಂಡಿನ ಜೊತೆಗೆ ಸಾಲಾಸೋಲಾ ಮಾಡಿ ಹೆಂಡದ ಹೊಳೆ ಹರಿಸುವುದು ಅಲಿಖಿತವಾಗಿ ನಡೆದುಕೊಂಡು ಬಂದಿತ್ತು ಈಗ ಅದೆಲ್ಲದಕ್ಕೂ ಕಡಿವಾಣ ಬಿದ್ದಿದೆ ಸಾಮೂಹಿಕ ಗುಂ