ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ನವೆಂಬರ್, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಶ್ರೀ ಬಿಂದು ಮಾಧವ ಶರ್ಮ ಸ್ವಾಮೀಜಿ ವೃಂದಾವನೋಹರಣ.

ವಿಮರ್ಶಾ -ಸುದ್ದಿ ನೋಟ

   ಕೆ. ಡಿ. ಪಿ  ತ್ರೈಮಾಸಿಕ  ಸಭೆ  ಮತ್ತು ಜಿಲ್ಲಾ ಸಚಿವರ ಪ್ರವಾಸ                   ಜಿಲ್ಲಾ ಪಂಚಾಯತ್. ಹಾಸನ                 ಕೆ.ಗೋಪಾಲಯ್ಯ ಹಾಸನ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರು  ಹಾಸನ ಸರ್ಕಾರಿ ವಸತಿ ಅಥಿತಿ ಗೃಹಕ್ಕೆ ಆಗಮಿಸಲಿದ್ದಾರೆ. ಜಿಲ್ಲಾ 10.30 ಕ್ಕೆ ಜಿಲ್ಲಾಪಂಚಾಯಿತಿ ಹೊಯ್ಸಳ ಸಂಭಾಂಗಣದಲ್ಲಿ ನಡೆಯುವ 2020 ನೇ ಸಾಲಿನ ಹಾಸನ ತ್ರೈ ಮಾಸಿಕ ಕೆ.ಡಿ.ಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗಹಿಸಲಿದ್ದಾರೆ. ಸಂಜೆ 4.30ಕ್ಕೆ ಹಾಸನದಿಂದ ಬೆಂಗಳೂರಿಗೆ ರಸ್ತೆ ಮಾರ್ಗವಾಗಿ ತೆರಳಲಿದ್ದಾರೆ. **************************** ಅಂತರಾಷ್ಟ್ರೀಯ ದತ್ತು ಮಾಸಾಚರಣೆ - ಈ ಬಾರಿ ನವೆಂಬರ್ ತಿಂಗಳನ್ನು ಅಂತರಾಷ್ಟ್ರೀಯ ದತ್ತು ಮಾಸಾವನ್ನಾಗಿ ಆಚರಿಸಲಾಗುತ್ತದೆ.       ಪ್ರಸ್ತುತ ಬಾಲಾನ್ಯಾಯ (ಮಕ್ಕಳ ಪಾಲನೆಮತ್ತು ರಕ್ಷಣೆ) ಅಧಿನಿಯಮ -2015 ಅಡಿಯಲ್ಲಿ ಹಾಸನ ಜಿಲ್ಲೆಯಲ್ಲಿ ತವರು ಪಬ್ಲಿಕ್ ಚಾರಿಟಬಲ್ ಟ್ರಸ್ಟ್ ಮತ್ತು ಕಾಮಧೇನು ಶಿಶುಕೇಂದ್ರ ಎಂಬ ಎರಡು ವಿಶೇಷ ದತ್ತು ಕೇಂದ್ರಗಳು ಕಾರ್ಯನಿರ್ವಹಿಸುತ್ತಿದೆ. ಸದರಿ ಸಂಸ್ಥೆಗಳು ಸರ್ಕಾರದ ಮಾರ್ಗಸೂಚಿಯಂತೆ ಕಾರ್ಯನಿರ್ವಹಿಸುತ್ತಿದ್ದು, ಆಸಕ್ತರು ನಿಯಮನುಸಾರ ಕೇಂದ್ರಗಳಲ್ಲಿ ಮಕ್ಕಳನ್ನು ಕಾನೂನುಬದ್ಧವಾಗಿ ದತ್ತು ತೆಗೆದುಕೊಳ್ಳಬಹುದು ಎಂದು ತಿಳಿಸಲಾಗಿದೆ.        ಕುಟುಂಬ ವ್ಯವಸ್ಥೆಯಲ್ಲ

PMKVY -ಪಿಎಂಕೆವಿವೈ

ರಾಜ್ಯ ಪ್ರಶಸ್ತಿ ವಿಜೇತ ಹಂಪನಹಳ್ಳಿ ತಿಮ್ಮೇಗೌಡರಿಗೆ ಪತ್ರಕರ್ತರುಗಳಿಂದ ಅಭಿನಂದನೆ

ಹಾಸನ ಜಿಲ್ಲೆಯ  ಪತ್ರಕರ್ತರುಗಳಿಂದ ಜನಪದ ಕ್ಷೇತ್ರದಲ್ಲಿ ರಾಜ್ಯಪ್ರಶಸ್ತಿಗೆ ಭಾಜನರಾದ ಜಾನಪದ ತಜ್ಞ ಡಾ.ಹಂಪನಹಳ್ಳಿ ತಿಮ್ಮೇಗೌಡರಿಗೆ  ಅಭಿನಂದನೆ.:- ಜಿಲ್ಲೆಯಲ್ಲಿ ಎಲ್ಲಾ ಪ್ರಾಕಾರದ ಸಾಹಿತ್ಯ ಹಾಗೂ ಸಾಹಿತಿಗಳು ಶ್ರೀಮಂತವಾಗಿದ್ದಾರೆ ಆದರೆ ಇತ್ತೀಚೆಗೆ ಅದಕ್ಕೆ ಪೂರಕ ವಾತಾವರಣ ಸೃಷ್ಟಿಯಾಗುತ್ತಿಲ್ಲ ಎಂದು ರಾಜ್ಯ ಪ್ರಶಸ್ತಿಗೆ ಭಾಜನರಾದ ಜನಪದ ತಜ್ಞ ಡಾ.ಹಂಪನಹಳ್ಳಿ ತಿಮ್ಮೇಗೌಡ ವಿಷಾದಿಸಿದ್ದಾರೆ ಇತ್ತೀಚೆಗೆ  ತಮ್ಮ ನಿವಾಸದಲ್ಲಿ ಅಭಿನಂದಿಸಿದ ಮಾಧ್ಯಮ ಪ್ರತಿನಿಧಿ ಗಳೊಂದಿಗೆ ಮಾತನಾಡಿದ ಅವರು  ಯುವ ಸಾಹಿತಿಗಳಿಗೆ ಹಾಗೂ ಪ್ರತಿಭಾವಂತ ಸಾಹಿತಿಗಳಿಗೆ ಸಾಹಿತ್ಯ ಪರಿಷತ್ತು ಪ್ರೋತ್ಸಾಹ ನೀಡಬೇಕು ಆದರೆ ಇತ್ತೀಚಿನ ವರ್ಷ ಗಳಲ್ಲಿ ಅಂತಹ ವಾತಾವರಣ ಮಾಯವಾಗಿದೆ ಎಂದರು ಎಲ್ಲಾ ಸಾಹಿತ್ಯಾಸಕ್ತರು ಕನ್ನಡ ಪರ ಹೋರಾಟಗಾರರು ಸಾಹಿತಿಗಳು ಸೇರಿ ಸಾಹಿತ್ಯಪರಿಷತ್ತನ್ನು ಸಾಹಿತ್ಯಾತ್ಮಕ ಚಟುವಟಿಕೆ ಗಳ ಕೇಂದ್ರವನ್ನಾಗಿಸಬೇಕಿದ್ದು ಈ ನಿಟ್ಟಿನಲ್ಲಿ ಎಲ್ಲರೂ ಕೈ ಜೋಡಿಸಬೇಕಾದುದು ಅನಿವಾರ್ಯ ಎಂದರು ಈ ಸಂದರ್ಭದಲ್ಲಿ ಪತ್ರಕರ್ತರುಗಳಾದ ಕೆ.ಅರ್.ಮಂಜುನಾಥ್, ಬಿ.ಅರ್.ಉದಯಕುಮಾರ್,ಹೆಚ್.ಅರ್.ಹರೀಶ್ ಕೋಟೆ,ಪ್ರಕಾಶ್ ಬೆಳವಾಡಿರವರುಗಳು ಡಾ.ಹಂಪನಹಳ್ಳಿ ದಂಪತಿಗಳನ್ನು ಸನ್ಮಾನಿಸಿದರು #ಹಂಪನಹಳ್ಳಿ ತಿಮ್ಮೇಗೌಡರು ಪ್ರಧಾನ  ಸಂಪಾದಕರು:- ಹರೀಶ್ ಹೆಚ್ ಆರ್  ಕೋಟೆ.  ಸುದ್ದಿ ಸಂಪಾದಕರು :- ನಾಗೇಂದ್ರ.ಹೆಚ್.ಎನ್. 

ಶಾಲು ಕೊಡವಿ ಎದ್ದು ಹೋದೆಯಲ್ಲೋ-ಕೋಟೆ ಕಾಲಂ

ಶಾಲು ಕೊಡವಿ ಎದ್ದು..... ಹೋದೆಯಲ್ಲೋ..-ಕೋಟೆ ಕಾಲಂ. ಸಿಕ್ಕಿದಾಗಲೆಲ್ಲಾ ಮೊದಲು ಜಗಳವೇ ಅದಕ್ಕೆ ಕಾರಣವಾಗಲೀ ಇಂತದ್ದೆ ನಿರ್ದಿಷ್ಟ ವಿಚಾರವಾಗಲಿ ಬೇಕೆಂದಿಲ್ಲಾ.. ಒಟ್ಟಾರೆ ಜಗಳವಾಡಿಕೊಂಡೆ ಮಾತಿಗೆ ಶುರುವಿಟ್ಟರೆ ಅರ್ಧ ಗಂಟೆ ಇಬ್ಬರು ಆ ಜಾಗಬಿಟ್ಟು ಕದಲುತ್ತಿರಲಿಲ್ಲ ನಡುವೆ ಅವನಿಗೆ ಪ್ರೀತಿಪಾತ್ರನಾದ ನನ್ನ ಮಗ ಮಯೂರನ ಬಗ್ಗೆ ವಿಚಾರಿಸುವುದನ್ನು ಮರೆಯುತ್ತಿರಲಿಲ್ಲ ಕೊಟ್ಟೂರು ಶ್ರಿನಿವಾಸ ಎಂದರೇ ಮೆಲುಮಾತಿನ ನಗುನಗುತ್ತಲೇ ಇರುವ ಸ್ನೇಹಜೀವಿ ಯಾವತ್ತೂ ಯಾರಿಗೂ ಕೇಡನ್ನು ಬಯಸಲಿಲ್ಲ ಹಣಕಾಸು ಲಾಭದ ಬಗ್ಗೆ ಮಾತನ್ನೇ ಆಡಲಿಲ್ಲ ಅಂತಹ ಗೆಳೆಯ ನಮ್ಮೊಡನಿಲ್ಲಾ ಎಂಬುದನ್ನು ಈಗಲೂ ಅರಗಿಸಿಕೊಳ್ಳಲು ಆಗುತ್ತಿಲ್ಲ ಬಿಸಿಲ ಬೆಂಗಾಡು ಬಳ್ಳಾರಿಯ ಕೊಟ್ಟೂರಿನ ಶ್ರೀನಿವಾಸ ಹಾಸನದ ಕೊಟ್ಟೂರು ಶ್ರೀನಿವಾಸ ನಾಗಿಯೇ ಬದುಕಿದ ವ್ಯಕ್ತಿ ಆತನ ಪತ್ನಿ ಪ್ರಮೀಳ ಅವರಿಗೆ ಸರ್ಕಾರಿ ನೌಕರಿ ಸಿಕ್ಕಿದ್ದರಿಂದ ಅನಿವಾರ್ಯ ವಾಗಿ ಹಾಸನಕ್ಕೆ ಬಂದಾತ ಹಾಸನದ ಮಣ್ಣಿನ ಮಗನಾಗಿ ಇಲ್ಲಿಯೇ ಬದುಕನ್ನು ಮುಗಿಸಿ ಪಂಚಭೂತಗಳಲ್ಲಿ ಲೀನವಾದನು ವಿದ್ಯಾರ್ಥಿ ದಿಸೆಯಲ್ಲಿ ಅರ್ ಎಸ್ ಎಸ್ ನಿಂದ ಆಕರ್ಷಿತರಾಗಿ ಕೆಲಕಾಲ ಸ್ವಯಂಸೇವಕ ರಾಗಿಯೂ ಇದ್ದರು ಅದೇಕೋ ಆತನ ಜಾಯಮಾನಕ್ಕೆ ಒಗ್ಗದ ಕಾರಣ ಅಲ್ಲಿ ಮುಂದುವರೆಯಲಿಲ್ಲ ಹಾಸನಕ್ಕೆ ಬಂದ ಬಳಿಕ ದಲಿತ ಮುಖಂಡ ಚಂದ್ರಪ್ರಸಾದ ತ್ಯಾಗಿ ಅವರ ಸಂಪರ್ಕಕ್ಕೆ ಬಂದವನೆ ದಲಿತ ಚಳುವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು ಸಾಕಷ್ಟು ಹೋರಾಟಗಳಲ್ಲಿ ಸಕ್ರಿಯ

ಎಲ್ಲಾ ಬಿಟ್ಟ ಮಗ....ಬಂಗಿ ನೆಟ್ಟ-ಕೋಟೆ ಕಾಲಂ.

ಎಲ್ಲಾ ಬಿಟ್ಟ ಮಗ .....ಬಂಗಿ ನೆಟ್ಟ- ಕೋಟೆ ಕಾಲಂ. ಎಲ್ಲಾ ಬಿಟ್ಟ ಮಗ ಬಂಗಿನೆಟ್ಟ ಅನ್ನುವ ಹಾಗೆ ಸಿ.ಎಂ. ಯಡಿಯೂರಪ್ಪನವರ ಮಗ ಅವರ ಉತ್ತರಾಧಿಕಾರಿ ಎಂದೇ ಬಿಂಬಿತರಾಗಿರುವ ಬಿ.ವೈ. ವಿಜಯೇಂದ್ರ ಮಾಡುತ್ತಿರುವ ಯಡವಟ್ಟುಗಳು ಕೆಲಸವಿಲ್ಲದೆ ಮಗುವಿನ ಹಿಂಭಾಗ ಕೆತ್ತಿದ ಎಡಬಿಡಂಗಿಯಂತಿದೆ ನಮ್ಮ ರಾಜ್ಯದಲ್ಲಿ ಜಾತಿ ಎನ್ನುವುದು ಜೇನುಗೂಡಿನ ಪ್ರತಿ ರೂಪದಂತೆ ಅದಕ್ಕೆ ಕೈ ಹಾಕಬೇಕಾದರೆ ಎಂತಹ ಮುತ್ಸದ್ದಿ ರಾಜಕಾರಣಿಯೇ ಅಗಲಿ ಹತ್ತುಬಾರಿ ಯೋಚಿಸುತ್ತಾರೆ ಆದರೆ ಉಪಚುನಾವಣೆ ಫಲಿತಾಂಶ ಹಾಗೂ ತನ್ನ ತಂತ್ರಗಳು ಫಲ ಕೊಡುತ್ತಿರುವುದರಿಂದ ನೆಲಕಾಣದಂತಾಗಿರುವ ವಿಜಯೇಂದ್ರ ಅತಿ ಉತ್ಸಾಹದಿಂದ ಮಾಡಿದ ಮರಾಠಾ ಪ್ರಾಧಿಕಾರದ ಎಡವಟ್ಟು ರಾಜಕಾರಣದ ಕೊನೆಯ ಇನ್ನಿಂಗ್ಸ್ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವ ಉಮೇದಿನಲ್ಲಿ ಬಿಗಿಯಾಗಿ ಪ್ಯಾಡ್ ಹಾಗೂ ಅಬ್ಡಾಮನ್ ಗಾರ್ಡ್ ಕಟ್ಟಿಕೊಂಡಿರುವ ರಾಜಾಹುಲಿ ಯನ್ನು ಹಿಟ್ ವಿಕೇಟ್ ಮಾಡಿ ಪೆವಿಲಿಯನ್ ಗೆ ಕಳುಹಿಸುವ ಸಾಧ್ಯತೆಗಳಿವೆ, ಬಸವ ಕಲ್ಯಾಣದಲ್ಲಿ ಉಪ ಚುನಾವಣೆ ಹಿನ್ನಲೆಯಲ್ಲಿ ನಡೆದ ಸಭೆಯಲ್ಲಿ ಮರಾಠರನ್ನು ಓಲೈಸಲು ಬಿ.ವೈ. ವಿಜಯೇಂದ್ರ ಅಭಿವೃದ್ದಿ ನಿಗಮ ಮಾಡುವುದಾಗಿ ಭರವಸೆ ನೀಡಿದರು ಮಗನ ಮಾತನ್ನು ಚಾಚೂತಪ್ಪದೆ ಪಾಲಿಸುವ ಸಿಎಂ ಶಿರಸಾವಹಿಸಿ ಅದಕ್ಕೆ ಚಾಲನೆ ನೀಡಿ ಸಂಪುಟ ಸಭೆಯಲ್ಲಿ ಸಣ್ಣಪುಟ್ಟ ಹೆಸರು ಬದಲಾವಣೆಯೊಂದಿಗೆ ಅನುಮೋದನೆ ನೀಡಿ ಕನ್ನಡಿಗರ ಹಿತಾಸಕ್ತಿಗೆ ಕೊನೆಯ ಮೊಳೆ ಹೊಡೆದರು ಉತ್ತರ ಕರ್ನಾಟಕ ಭಾಗದಲ್ಲಿ

ಹಾಸನ ಜಿಲ್ಲೆಯ ಕೋವಿಡ್ -19 ವರದಿ. 21/11/2020

ಹಾಸನ ಜಿಲ್ಲೆಯ ಕೋವಿಡ್ -19 ವರದಿ  21/11/2020 ಹಾಸನ ಜಿಲ್ಲೆಯ ಕೋವಿಡ್ -19 ವರದಿ.  #ವಿಮರ್ಶಾ -vimarsha      ಪ್ರಧಾನ ಸಂಪಾದಕರು:-        ಹರೀಶ್ ಹೆಚ್ ಆರ್                 ಕೋಟೆ              ಸುದ್ದಿ ಸಂಪಾದಕರು :-        ನಾಗೇಂದ್ರ.ಹೆಚ್ ಎನ್ 

ದೊಡ್ಡಗದ್ದವಳ್ಳಿ ಮಹಾಲಕ್ಷಿ ದೇವಾಲಯ ವಿಗ್ರಹ ಧ್ವಂಸ :ನಿಷ್ಪಕ್ಷಪಾತ ತನಿಖೆಗೆ ಆಗ್ರಹ

ಘಟನೆ ವಿವರ:-  ನಿನ್ನೆ ರಾತ್ರಿ ದುಷ್ಕರ್ಮಿಗಳಿಂದ ರಾಜ್ಯದ ದೊಡ್ಡ ಪರಂಪರೆ, ಇತಿಹಾಸ ನಾಶವಾಗಿದೆ. ಹೊಯ್ಸಳರ ವಿಷ್ಣುವರ್ಧನನ ಕಾಲದ ಸಾ.ಶ. 1113 ರಲ್ಲಿ ವಜ್ರದ ವ್ಯಾಪಾರಿಗಳಿಂದ ಕಟ್ಟಿಸಲ್ಪಟ್ಟ ಹಾಸನ ಜಿಲ್ಲೆಯ ದೊಡ್ಡಗದ್ದವಳ್ಳಿ ಗ್ರಾಮದ ಚತುಷ್ಕೂಟ ಮಹಾಲಕ್ಷ್ಮಿ ದೇವಾಲಯದ ದಕ್ಷಿಣ ಗರ್ಭಗೃಹದಲ್ಲಿದ್ದ ಮಹಾಕಾಳಿ ಅಥವಾ ದಕ್ಷಿಣ ಭದ್ರಕಾಲಿ ಅಮ್ಮನವರ ವಿಗ್ರಹವನ್ನು ಒಡೆದು ಹಾಕಲಾಗಿದೆ. ( ಜಾರಿ‌ ಬಿದ್ದಿದೆ ಎಂದೂ‌ ಕೂಡ ಹೇಳಲಾಗುತ್ತಿದೆ) ಇಂತಹ ಪರಮ‌ನೀಚ ಕೃತ್ಯಕ್ಕೆ ಕಾರಣರಾದವರನ್ನು ಕಠಿಣ ಶಿಕ್ಷೆಗಳಿಂದ ದಂಡಿಸಬೇಕಿದೆ. ಇಂತಹ ಒಂದು ಭದ್ರಕಾಳಿಯ ವಿಗ್ರಹ ಅಪರೂಪದಲ್ಲಿ ಅಪರೂಪವಾಗಿತ್ತು. ಇದರ ರಕ್ಷಣೆಯ ಹೊಣೆ ಹೊತ್ತಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ( ASI) ಇದಕ್ಕೆ ಉತ್ತರಿಸಿ, ಜವಾಬು ನೀಡಬೇಕಿದೆ. ತನ್ನ ಅಸಮರ್ಥತೆಯನ್ನು ಒಪ್ಪಿಕೊಳ್ಳಬೇಕಿದೆ. ಸಾಲದ್ದಕ್ಕೆ ಪರಂಪರೆಯ ಸಪ್ತಾಹವನ್ನು ಆಚರಿಸುತ್ತಿರುವ ಈ ವಾರದಲ್ಲಿ ಇದು ರಾಜ್ಯಕ್ಕೆ, ಪರಂಪರೆಗೆ ಆದ ದೊಡ್ಡ ನಷ್ಟವಾಗಿದೆ. ಭಕ್ತಾದಿಗಳ ಮನಸಿಗೆ ತುಂಬಾ ದುಃಖವಾಗಿದೆ. ಇದಕ್ಕೆ ಕಾರಣರಾದವರಿಗೆ ಧಿಕ್ಕಾರವಿರಲಿ ಎಂದು ಕೂಗುತ್ತಿದ್ದಾರೆ ಅದಾಗಿಯೇ ಬಿದ್ದು ಒಡೆದು ಹೋಯಿತು ಎಂಬ ಸಬೂಬು ಹೇಳದಿರಲಿ. ಸರಿಯಾದ ರೀತಿಯಲ್ಲಿ ತನಿಖೆ ನಡೆದು ಸತ್ಯ ಹೊರಬರಲಿ ಭಕ್ತಾದಿಗಳು ಆಗ್ರಹ ಪಡಿಸಿದ್ದಾರೆ.  ಸ್ಥಳ ಪರಿಚಯ:-  ದೊಡ್ಡಗದ್ದವಳ್ಳಿಯು ಹಾಸನ ಜಿಲ್ಲೆಯ ಒಂದು ಹಳ್ಳಿ. ಇದು ಹೊಯ್ಸಳ ಶೈಲಿಯ ಪುರಾತನ

Udaya varadi-ಉದಯ ವರದಿ

ವಿಮರ್ಶಾ -vimarsha ph-9164551901/7090899728

ವಿಮರ್ಶಾ -vimarsha

ವಿಮರ್ಶಾ -vimarsha come join with us,ಬನ್ನಿ ನಮ್ಮೂಂದಿಗೆ ಕೈ ಜೋಡಿಸಿ. vimarsha infomedia vimarsha.info

ವಿಮರ್ಶಾ -ಸುದ್ದಿ ನೋಟ

ನವೆಂಬರ್ 19 ರಿಂದ ವಿದ್ಯುತ್ ಹರಿಸಲಾಗುವುದು,ವಿದ್ಯುತ್ ಗೋಪುರ ಹತ್ತದಂತೆ ಎಚ್ಚರಿಕೆ  ಹಾಸನ (ಕರ್ನಾಟಕ ವಾರ್ತೆ):  ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಶ್ರೀನಿವಾಸಪುರದಲ್ಲಿರುವ ಮೆ|| ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯಿಂದ 220/66/11 ಕೆ.ವಿ ಸ್ವೀಕರಣಾ ಕೇಂದ್ರಕ್ಕೆ ವಿದ್ಯುತ್ ರವಾನೆ ಮಾಡಲು220/66/11 ಕೆ.ವಿ ಯಾಚೇನಹಳ್ಳಿ ಸ್ವೀಕರಣಾ ಕೇಂದ್ರದಿಂದ ನೂತನವಾಗಿ 66 ಕೆ.ವಿ ವಿದ್ಯುತ್ ಮಾರ್ಗವನ್ನು ಸ್ವಯಂ ನಿರ್ಮಾಣ ಯೋಜನೆಯಡಿಯಲ್ಲಿ ನಿರ್ಮಾಣ ಮಾಡಲಾಗಿದ್ದು,  ಸದರಿ ವಿದ್ಯುತ್ ಮಾರ್ಗದಲ್ಲಿ ನ. 19 ರಂದು ಅಥವಾ ನಂತರ ದಿನಗಳಲ್ಲಿ 66ಕೆವಿ ವಿದ್ಯುತ್‍ನ್ನು ಹರಿಸಲಾಗುವುದು ಆದ್ದರಿಂದ ಸಾರ್ವಜನಿಕರು ಈ ಮಾರ್ಗದ ವಿದ್ಯುತ್ ಗೋಪುರವನ್ನು ಹತ್ತುವುದಾಗಲಿ, ಅವುಗಳಿಗೆ ದನ-ಕರುಗಳನ್ನು ಕಟ್ಟುವುದಾಗಲಿ, ಹಸಿರು ಬಳ್ಳಿ ಅಥವಾ ಲೋಹದ ತಂತಿಗಳನ್ನು ಎಸೆಯುವುದಾಗಲಿ ಮಾಡಬಾರದು. ಇದರಿಂದ ಸಾರ್ವಜನಿಕರ ಆಸ್ತಿ-ಪಾಸ್ತಿ ಮತ್ತು ಪ್ರಾಣಕ್ಕೆ ಹಾನಿಯಾಗುವ ಸಂಭವವಿರುತ್ತದೆ. ವಿದ್ಯುತ್ ಪ್ರಸರಣ ಮಾರ್ಗಗಳ ಕೆಳಭಾಗದಲ್ಲಿ ಯಾವುದೇತರಹದ ಚಟುವಟಿಕೆಗಳನ್ನು ಮಾಡಬಾರದಾಗಿ ಹಾಗೂ ವಿದ್ಯುತ್ ಮಾರ್ಗದ 18 ಮೀಟರ್ ಕಾರಿಡಾರ್ ಅಡಿಯಲ್ಲಿ ಯಾವುದೇ ರೀತಿಯ ಕಟ್ಟಡಗಳನ್ನು ಕಟ್ಟುವುದಾಗಲಿ ಅಥವಾ ಮರಗಳನ್ನು ಬೆಳೆಸುವುದಾಗಲಿ ಮಾಡಬಾರದು ಹಾಗೂ ಯಾವುದೇ ತರಹದ ದುಷ್ಕøತ್ಯಗಳಿಗೆ ಒಳಗೊಂಡ ಅಪಘಾತ ಅಥವಾ ಹಾನಿ ಸಂಭವಿಸಿದರೆ ಅವರೇ ಜವಾಬ್ಧಾರರಾಗಿರುತ್ತಾರೆ ಎ

Deepavali Dance and Music Festival

ವಿಮರ್ಶಾ-ಸುದ್ದಿ ನೋಟ .15/11/2೦2೦

                  ವಿಮರ್ಶಾ  -ಸುದ್ದಿ ನೋಟ              15/11/2೦2೦ ತಜ್ಞರ ಸಲಹೆಯಂತೆ ದ್ವಾರಸಮುದ್ರ ಕೆರೆ ಏರಿ ದುರಸ್ತಿಗೆ ಕ್ರಮ: ಜೆ.ಸಿ ಮಾಧುಸ್ವಾಮಿ ಹಾಸನ.ನ.14. (ಕರ್ನಾಟಕ ವಾರ್ತೆ):-  ದ್ವಾರಸಮುದ್ರ ಕೆರೆ ಏರಿ ದುರಸ್ತಿ ಕುರಿತಾಗಿ ಅಧಿಕಾರಿಗಳು ಈಗಾಗಲೇ ತಜ್ಞರ ಸಲಹೆ ಪಡೆದಿದ್ದು, ಅದರಂತೆ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಸಚಿವರಾದ ಜೆ.ಸಿ. ಮಾಧುಸ್ವಾಮಿ ಅವರು ತಿಳಿಸಿದ್ದಾರೆ.  ಬೇಲೂರು  ತಾಲ್ಲೂಕಿನ ದ್ವಾರಸಮುದ್ರ ಕೆರೆ ಏರಿ ಕುಸಿದಿರುವ ಸ್ಥಳ ವೀಕ್ಷಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಧ್ಯ ಕೆರೆ ಸಂಪೂರ್ಣವಾಗಿ ಭರ್ತಿಯಾಗಿರುವುದರಿಂದ ತಾತ್ಕಾಲಿಕವಾಗಿ ಕೆರೆ ಏರಿ ದುರಸ್ತಿ ಮಾಡಬಹುದಾಗಿದ್ದು, ಕೂಡಲೇ ಕೈಗೊಳ್ಳಬಹುದಾದ ದುರಸ್ತಿ ಕ್ರಮಗಳ ಬಗ್ಗೆ ಅಧಿಕಾರಿಗಳು ಹಾಗೂ ತಜ್ಞರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.  ಸ್ಥಳೀಯ ಶಾಸಕರಾದ ಕೆ.ಎಸ್. ಲಿಂಗೇಶ್, ತಹಶೀಲ್ದಾರ್ ನಟೇಶ್, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಹಾಗೂ ಮತ್ತಿತರ ರೈತ ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು. *********** ಹಾನಿಗೊಳಗಾಗಿರುವ ಕೆರೆಗಳ ದುರಸ್ಥಿಗೆ ಶೀಘ್ರ ಕ್ರಮವಹಿಸಿ: ಜೆ.ಸಿ. ಮಾಧುಸ್ವಾಮಿ ಹಾಸನ.ನ.14 (ಕರ್ನಾಟಕ ವಾರ್

ವಿಮರ್ಶಾ -ಸುದ್ದಿ ನೋಟ- 14/11/2020.

       ವಿಮರ್ಶಾ -  ಸುದ್ದಿ  ನೋಟ  14/11/2020  ನ.17 ರಂದು ಕಾಲೇಜು ಪ್ರಾರಂಭ: ಆರ್.ಟಿ.ಪಿ.ಸಿ.ಆರ್. ಪರೀಕ್ಷೆ ಕಡ್ಡಾಯ (ಕರ್ನಾಟಕ ವಾರ್ತೆ):- ತೃತೀಯ ವರ್ಷದ ಪದವಿ ವಿದ್ಯಾರ್ಥಿಗಳಿಗೆ, ಡಿಪ್ಲೊಮೋ ವಿದ್ಯಾರ್ಥಿಗಳಿಗೆ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ನ.17 ರಂದು ಕಾಲೇಜು ಪ್ರಾಂಭವಾಗುತ್ತಿದ್ದು, ಕಾಲೇಜಿಗೆ ಬರಲು ಇಚ್ಚಿಸುವ ವಿದ್ಯಾರ್ಥಿಗಳನ್ನು ಕಡ್ಡಾಯವಾಗಿ ಆರ್.ಟಿ.ಪಿ.ಸಿ.ಆರ್. ಪರೀಕ್ಷೆಗೆ ಒಳಪಡಿಸುವಂತೆ ಅಧಿಕಾರಿಗಳಿಗೆ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾದ ಕುಮಾರ್ ನಾಯಕ್ ಅವರು ಸೂಚಿಸಿದ್ದಾರೆ.  ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಪದವಿ ವಿದ್ಯಾರ್ಥಿಗಳಿಗೆ ಕಾಲೇಜು ಪ್ರಾರಂಭಿಸುವುದರ ಕುರಿತು ವೀಡಿಯೋ ಸಂವಾದ ನಡೆಸಿ ಮಾತನಾಡಿದ ಅವರು ರಾಜ್ಯಾದ್ಯಂತ ಕಾಲೇಜುಗಳು ಪ್ರಾರಂಭವಾಗುತ್ತಿದ್ದು, ವಿದ್ಯಾರ್ಥಿಗಳ ಆರೋಗ್ಯದ ಹಿನ್ನಲೆಯಲ್ಲಿ ಪ್ರತಿಯೊಂದು ಕಾಲೇಜುಗಳಲ್ಲಿಯೂ ಪೂರಕ ವ್ಯವಸ್ಥೆ ಕಲ್ಪಿಸುವಂತೆ ಹಾಗೂ ಕಾಲೇಜಿನ ಬೋಧಕರು ಮತ್ತು ಬೋಧಕೇತರ ಸಿಬ್ಬಂದಿಗಳು ಕಡ್ಡಾಯವಾಗಿ ಆರ್.ಟಿ.ಪಿ.ಸಿ.ಆರ್. ಪರೀಕ್ಷೆ ಮಾಡಿಸಿಕೊಳ್ಳುವಂತೆ ತಿಳಿಸಿದರು.  ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಆನ್‍ಲೈನ್ ಮೂಲಕ ಪಾಠ ಮಾಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಪಠ್ಯದ ವಿಷಯದಲ್ಲಿ ಯಾವುದಾದರೂ ಗೊಂದಲಗಳಿದ್ದರೆ ಅಥವಾ ಅರ್ಥವಾಗದಿದ್ದರೆ ಕಾಲೇಜಿನ ವೇಳಾ ಪಟ್ಟಿ ಪ್ರಕಾರ ಕಾಲೇ

Ninodu Mugiyada Mouna || Edegaarike || Aadithya || Akanksha || Sadhu Ko...

ಅಫಿಡೆವಿಟ್ ಸಲ್ಲಿಸಿದ ಬೆಳೆಗೆರೆ-ಕೋಟೆ ಕಾಲಂ.

ಅಫಿಡೆವಿಟ್ ಸಲ್ಲಿಸಿದ ಬೆಳೆಗೆರೆ ಕೋಟೆ ಕಾಲಂ  ಬೆಳ್ಳಂಬೆಳಿಗ್ಗೆ ಮೊಬೈಲ್ ತೆಗೆದು ಫೇಸ್ಬುಕ್ ನೋಡಿದರೆ ಅಚ್ಚರಿ ಖ್ಯಾತಪತ್ರಕರ್ತ ರವಿಬೆಳಗೆರೆ ನಿಧನ ಎಂಬ ಸ್ಟೇಟಸ್ ಇತ್ತು  ಕಾಮೆಂಟ್ ಬಾಕ್ಸ್ನಲ್ಲಿ ರಿಪ್ ಗಳ ಸುರಿಮಳೆ ಅಲ್ಲಿಗೆ ಕನ್ನಡ ಪತ್ರಿಕೋದ್ಯಮದ ವರ್ಣರಂಜಿತ ವ್ಯಕ್ತಿ ಇನ್ನಿಲ ಎಂಬುದು ಖಚಿತವಾಯಿತು ದಶಕಗಳ ಕಾಲ ಸುಟ್ಟ ಅಸಂಖ್ಯಾತ ಸಿಗರೇಟ್ಗಳು ಆ ದಿನಗಳಲ್ಲಿ ಹೀರಿದ ಲೀಟರ್ ಗಟ್ಟಲೆ ಮದ್ಯದ ಹೊಡೆತ ಶುಗರ್ ಕಾಲುನೋವು ತೊದಲುವ ನಾಲಿಗೆ ಕತ್ತುಕೆಳಗೆ ಹಾಕಿ ಮಾತನಾಡಲು ಆಯಾಸಪಡುವುದನ್ನು ಕಂಡವರಿಗೆ ಸಾವು ಅಷ್ಟಾಗಿ ಅಚ್ಚರಿ ತರಲಿಲ್ಲವಾದರೂ ಆತನ ಜೀವಂತಿಕೆಗೆ 62ರ ವಯೋಮಾನಕ್ಕೆ ಸಾವು ಆಘಾತವೇ ಸರಿ ಬಳ್ಳಾರಿಯ ಸತ್ಯನಾರಾಯಣ ಪೇಟೆಯಲ್ಲಿ 1958 ರ ಮಾ.15 ರಂದು ತಂದೆಯ ನೆರಳೇ ಇಲ್ಲದೆ ತಾಯಿಯ ಅಸರೆಯಲ್ಲಿ ಬೆಳೆದ ಬೇಜವಾಬ್ದಾರಿ ಹುಡುಗ ರವಿಬೆಳೆಗೆರೆ  ಮುಂದೆ ದೊಡ್ಡದೊಡ್ಡವರಿಗೆ ಜವಾಬ್ದಾರಿಯ ಪಾಠ ಹೇಳಿದ್ದು ಇತಿಹಾಸ ಪಿ.ಲಂಕೇಶ್ ವೈಕುಂಠ ರಾಜು ನಂತರ ಜಾಹೀರಾತಿನ ಹಂಗಿಲ್ಲದೆ ಪತ್ರಿಕೆಯನ್ನು ಯಶಸ್ವಿಯಾಗಿ ನಡೆಸಿದ ಹೆಗ್ಗಳಿಕೆ ಬೆಳೆಗೆರೆ ಅವರದ್ದು ಕಪ್ಪುಬಿಳುಪಿನ ಸುಂದರಿ ಹಾಯ್ ಬೆಂಗಳೂರನ್ನು 1995 ರಲ್ಲಿ ರವಿ ಹೊರ ತಂದಾಗ ಅದರ ಹೆಸರು ಕೇಳಿ ನಕ್ಕವರೇ ಹೆಚ್ಚು ಅದರೆ ಅ ನಂತರದಲ್ಲಿ ಅದು ಕಂಡ ಯಶಸ್ಸು ಬಹುಶ ಬೆಳೆಗೆರೆಯೆ ಊಹಿಸಿರಲಿಲ್ಲ ಎನಿಸುತ್ತದೆ ಜಾಣಜಾಣೆಯರ ಪತ್ರಿಕೆ ಲಂಕೇಶ್ ಇಳಿಜಾರಿನಲ್ಲಿದ್ದಾಗ ಬಂದ ಹಾಯ್ ಬೆಂಗಳೂರು ರವಿ

ವಿಮರ್ಶಾ -vimarsha

ವಿಮರ್ಶಾ -ಸುದ್ದಿ ನೋಟ

ನ. 20 ರಿಂದ ಬೆಂಬಲ ಬೆಲೆಯೊಂದಿಗೆ ಭತ್ತ ಖರೀದಿ ಪ್ರಕ್ರಿಯೆ ಪ್ರಾರಂಭ -ಹಾಸನ ಜಿಲ್ಲೆಯಲ್ಲಿ ಬೆಂಬಲ ಬೆಲೆಯೊಂದಿಗೆ ಭತ್ತ ಖರೀದಿ ಪ್ರಕ್ರಿಯೆಯು ನ. 20 ರಿಂದ ಪ್ರಾರಂಭವಾಗಲಿದ್ದು 2021 ರ ಮಾ. 21 ರವರೆಗೂ ಇದಕ್ಕೆ ಅವಕಾಶ ಇದ್ದು, ಯಾವುದೇ ಲೋಪ ಇಲ್ಲದೆ ಈ ಪ್ರಕ್ರಿಯೆ ನಡೆಸುವಂತೆ ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಂ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಬೆಂಬಲ ಬೆಲೆಯೊಂದಿಗೆ ಭತ್ತ ಖರೀದಿಗೆ ಸಂಬಂಧೀಸಿದಂತೆ ಟಾಸ್ಕ್ ಫೋರ್ಸ್ ಸಮಿತಿ ಸಭೆ ನಡೆಸಿ ಮಾತನಾಡಿದ ಅವರು ಬೆಂಬಲ ಬೆಲೆ ಯೋಜನೆಯಡಿ ಉತ್ತಮ ಗುಣಮಟ್ಟದ ಭತ್ತಕ್ಕೆ 1,888 ರೂ ಪ್ರತಿ ಕ್ವಿಂಟಾಲ್‍ಗೆ ನಿಗಧಿಯಾಗಿದ್ದು, ಕಡಿಮೆ ಗುಣಮಟ್ಟದ ಭತ್ತಕ್ಕೆ 1,868 ರೂ ನಿಗಧಿಯಾಗಿದೆ. ಭತ್ತವನ್ನು ನೀಡುವ ರೈತರಿಗೆ ಗರಿಷ್ಠ ಮೂರು ದಿನಗಳಲ್ಲಿ ವಿಳಂಬವಾಗದೆ ಅವರ ಖಾತೆಗೆ ಹಣ ವರ್ಗಾವಣೆಯಾಗುವಂತೆ ಕ್ರಮ ವಹಿಸಬೇಕು. ಈ ನಿಟ್ಟಿನಲ್ಲಿ ಅಗತ್ಯ ದಾಖಲಾತಿಗಳನ್ನು ಖರೀದಿಗೆ ಮುನ್ನವೇ ಸರಿಯಾಗಿ ಪರಿಶೀಲಿಸಿ ಪಡೆಯಿರಿ ಎಂದರು. ಬೆಂಬಲ ಬೆಲೆಯೊಂದಿಗೆ ಭತ್ತ ಖರೀದಿಗೆ ಸಾಕಷ್ಟು ದೀರ್ಘ ಸಮಯಾವಕಾಶ ಇದೆ. ರೈತರು ಯಾವುದೇ ಆತುರ ಮಾಡದೆ ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ತಾವು ನೀಡುತ್ತಿರುವ ದಾಖಲಾತಿಗಳು ಸರಿಯಾಗಿವೆಯೇ ಎಂಬುದನ್ನು ಪರಿಶೀಲಿಸಿಕೊಂಡು ಫ್ರೂಟ್ಸ್ ಗುರುತಿನ ಚೀಟಿ ಪಡೆದು ಸರಿಯಾದ ಬ್ಯಾಂಕ್ ದಾಖಲಾತಿಗಳನ್ನು ಸಲ್ಲಿಸುವಂತೆ ಅಪರ ಜಿಲ್ಲಾಧಿಕ