ವಿಷಯಕ್ಕೆ ಹೋಗಿ

ವಿಮರ್ಶಾ -ಸುದ್ದಿ ನೋಟ- 14/11/2020.

       ವಿಮರ್ಶಾ -  ಸುದ್ದಿ  ನೋಟ 

14/11/2020 
ನ.17 ರಂದು ಕಾಲೇಜು ಪ್ರಾರಂಭ: ಆರ್.ಟಿ.ಪಿ.ಸಿ.ಆರ್. ಪರೀಕ್ಷೆ ಕಡ್ಡಾಯ

(ಕರ್ನಾಟಕ ವಾರ್ತೆ):-




ತೃತೀಯ ವರ್ಷದ ಪದವಿ ವಿದ್ಯಾರ್ಥಿಗಳಿಗೆ, ಡಿಪ್ಲೊಮೋ ವಿದ್ಯಾರ್ಥಿಗಳಿಗೆ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ನ.17 ರಂದು ಕಾಲೇಜು ಪ್ರಾಂಭವಾಗುತ್ತಿದ್ದು, ಕಾಲೇಜಿಗೆ ಬರಲು ಇಚ್ಚಿಸುವ ವಿದ್ಯಾರ್ಥಿಗಳನ್ನು ಕಡ್ಡಾಯವಾಗಿ ಆರ್.ಟಿ.ಪಿ.ಸಿ.ಆರ್. ಪರೀಕ್ಷೆಗೆ ಒಳಪಡಿಸುವಂತೆ ಅಧಿಕಾರಿಗಳಿಗೆ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾದ ಕುಮಾರ್ ನಾಯಕ್ ಅವರು ಸೂಚಿಸಿದ್ದಾರೆ. 
ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಪದವಿ ವಿದ್ಯಾರ್ಥಿಗಳಿಗೆ ಕಾಲೇಜು ಪ್ರಾರಂಭಿಸುವುದರ ಕುರಿತು ವೀಡಿಯೋ ಸಂವಾದ ನಡೆಸಿ ಮಾತನಾಡಿದ ಅವರು ರಾಜ್ಯಾದ್ಯಂತ ಕಾಲೇಜುಗಳು ಪ್ರಾರಂಭವಾಗುತ್ತಿದ್ದು, ವಿದ್ಯಾರ್ಥಿಗಳ ಆರೋಗ್ಯದ ಹಿನ್ನಲೆಯಲ್ಲಿ ಪ್ರತಿಯೊಂದು ಕಾಲೇಜುಗಳಲ್ಲಿಯೂ ಪೂರಕ ವ್ಯವಸ್ಥೆ ಕಲ್ಪಿಸುವಂತೆ ಹಾಗೂ ಕಾಲೇಜಿನ ಬೋಧಕರು ಮತ್ತು ಬೋಧಕೇತರ ಸಿಬ್ಬಂದಿಗಳು ಕಡ್ಡಾಯವಾಗಿ ಆರ್.ಟಿ.ಪಿ.ಸಿ.ಆರ್. ಪರೀಕ್ಷೆ ಮಾಡಿಸಿಕೊಳ್ಳುವಂತೆ ತಿಳಿಸಿದರು. 
ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಆನ್‍ಲೈನ್ ಮೂಲಕ ಪಾಠ ಮಾಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಪಠ್ಯದ ವಿಷಯದಲ್ಲಿ ಯಾವುದಾದರೂ ಗೊಂದಲಗಳಿದ್ದರೆ ಅಥವಾ ಅರ್ಥವಾಗದಿದ್ದರೆ ಕಾಲೇಜಿನ ವೇಳಾ ಪಟ್ಟಿ ಪ್ರಕಾರ ಕಾಲೇಜಿಗೆ ಬಂದು ಸಂಬಂಧಪಟ್ಟ ಶಿಕ್ಷಕರಿಂದ ಸ್ಪಷ್ಟಪಡಿಸಿಕೊಳ್ಳಲು ಅವಕಾಶವಿದೆ ಎಂದು ಕುಮಾರ್ ನಾಯಕ್ ಅವರು ಅಧಿಕಾರಿಗಳಿಗೆ ತಿಳಿಸಿದರು. 
ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಎಲ್ಲಾ ಪದವಿ ಕಾಲೇಜುಗಳನ್ನು ಪ್ರತಿ ದಿನ ಸ್ಯಾನಿಟೈಸೇಷನ್ ಮಾಡುವಂತೆ ಹಾಗೂ ಪ್ರತಿ ಕಾಲೇಜಿನಲ್ಲಿಯೂ ಥರ್ಮಲ್ ಸ್ಕ್ಯಾನರ್ ಬಳಸುವಂತೆ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರು ಅಧಿಕಾರಿಗಳಿಗೆ ಸೂಚಿಸಿದರು.
ಪ್ರತಿಯೊಬ್ಬ ವಿದ್ಯಾರ್ಥಿಯು ಕಡ್ಡಾಯವಾಗಿ ಗುರುತಿನ ಚೀಟಿಯನ್ನು ಧರಿಸಲು ಸೂಚನೆ ನೀಡುವಂತೆ ತಿಳಿಸಿದರಲ್ಲದೆ, ಕೋವಿಡ್ ಹರಡುತ್ತಿರುವ ಹಿನ್ನಲೆಯಲ್ಲಿ ಸ್ನಾತಕೋತ್ತರ ಹಾಗೂ ಪದವಿ ವಿದ್ಯಾರ್ಥಿಗಳು ಶೇ.50 ಕ್ಕಿಂತ ಹೆಚ್ಚಾಗಿದ್ದರೆ ಬೋದನಾ ಸಮಯ ವಿಂಗಡಿಸಿ ಪಾಠ ಮಾಡುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಠಿಯಿಂದ ಪ್ರತಿಯೊಂದು ಪದವಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜಿನಲ್ಲಿ ಹಾಗೂ ವಿಶ್ವ ವಿದ್ಯಾನಿಲಯಗಳಲ್ಲಿ ಒಂದೊಂದು ಟಾಸ್ಕ್ ಫೋರ್ಸ್  ಸಮಿತಿ ರಚಿಸುವಂತೆ ಸೂಚಿಸಿದರಲ್ಲದೆ, ಬಹುತೇಕ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶಗಳಿಂದ ಬರುವುದರಿಂದ ಬಸ್ ವ್ಯವಸ್ಥೆ ಕಲ್ಪಿಸುವಂತೆ ಕುಮಾರ್ ನಾಯಕ್ ಅವರು ಅಧಿಕಾರಿಗಳಿಗೆ ನಿರ್ದೇಶಿಸಿದರು.
ವಿದ್ಯಾರ್ಥಿಗಳ ಪ್ರವೇಶಾತಿಗೆ ಅನುಕೂಲವಾಗುವಂತೆ ಕೋವಿಡ್ ಪರೀಕ್ಷೆಗೆ ಒಳಪಡಿಸಿದ ನಂತರ ಪರೀಕ್ಷಾ ವರದಿಯನ್ನು ಶೀಘ್ರವಾಗಿ ನೀಡಲು ಕ್ರಮಕೈಗೊಳ್ಳುವಂತೆ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಸಮಾಜ ಕಲ್ಯಾಣ ಇಲಾಖೆ ಆಯುಕ್ತರಾದ ರವಿಕುಮಾರ್ ಸುರಪುರ್ ಅವರು ಮಾತನಾಡಿ ಶಿಕ್ಷಣ ಇಲಾಖೆ ವಿದ್ಯಾರ್ಥಿ ನಿಲಯ, ವಿಶ್ವ ವಿದ್ಯಾನಿಲಯಗಳ ವಿದ್ಯಾರ್ಥಿ ನಿಲಯ ಹಾಗೂ ಖಾಸಗಿ ಕಾಲೇಜುಗಳ ವಿದ್ಯಾರ್ಥಿನಿಲಯಗಳಲ್ಲಿ ಉಳಿಯುವ ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಠಿಯಿಂದ ಪ್ರಾರಂಭಕ್ಕೂ ಮುಂಚೆಯೇ ಸ್ಯಾನಿಟೈಸೇಷನ್ ಹಾಗೂ ಸ್ವಚ್ಚತೆಗೆ ಕ್ರಮವಹಿಸುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಪೂರಕ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ತೃತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ವಿದ್ಯಾರ್ಥಿ ನಿಲಯಗಳಲ್ಲಿ ಉಳಿಸಲು ಇಚ್ಚಿಸಿದರೆ ಪೋಷಕರ ಒಪ್ಪಿಗೆಯ ಮೇರೆಗೆ ಪ್ರವೇಶಾತಿ ನೀಡುವಂತೆ ಹಾಗೂ ವಿದ್ಯಾರ್ಥಿ ನಿಲಯಗಳ ನಿಯಮಗಳನ್ನು ಉಲ್ಲಂಘಿಸಿದವರ ಪ್ರವೇಶಾತಿ ರದ್ದು ಮಾಡುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಮಟ್ಟದಲ್ಲಿಯ ವಿದ್ಯಾರ್ಥಿ ನಿಲಯಗಳನ್ನು ಕೋವಿಡ್ ಕೇರ್ ಕೇಂದ್ರವಾಗಿ ಅಥವಾ ಇನ್ನಿತರ ಸರ್ಕಾರೇತರ ಕೆಲಸಗಳಿಗೆ ಬಳಸಿಕೊಳ್ಳುತ್ತಿದ್ದರೆ, ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಉಳಿಯಲು ವ್ಯವಸ್ಥೆ ಮಾಡುವಂತೆ ಸಮಾಜ ಕಲ್ಯಾಣ ಇಲಾಖೆ ಆಯುಕ್ತರು ಅಧಿಕಾರಿಗಳಿಗೆ ತಿಳಿಸಿದರು.
ಪ್ರತಿಯೊಂದು ವಿದ್ಯಾರ್ಥಿ ನಿಲಯಗಳಲ್ಲಿಯೂ ಆರೋಗ್ಯ ಹದಗೆಟ್ಟ ಮಕ್ಕಳ ಪೋಷಣೆಗಾಗಿ ಪ್ರತ್ಯೇಕ ಐಸೋಲೇಷನ್ ಕೊಠಡಿ ವ್ಯವಸ್ಥೆ ಮಾಡುವಂತೆ ಹಾಗೂ ಪಾಸಿಟೀವ್ ಪ್ರಕರಣಗಳು ಪತ್ತೆಯಾದರೆ ವಿದ್ಯಾರ್ಥಿ ನಿಲಯಗಳನ್ನು ಮುಚ್ಚದೆ, ಅಂತಹವರನ್ನು ಚಿಕಿತ್ಸೆಗೆ ಒಳಪಡಿಸಿ ಪ್ರಾಥಮಿಕ ಸಂಪರ್ಕಿತರನ್ನು ಐಸೋಲೇಷನ್ ನಲ್ಲಿಡುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಿದ್ಯಾರ್ಥಿ ನಿಲಯಗಳಿಗೆ ಬರುವ ವಿದ್ಯಾರ್ಥಿಗಳಿಗೆ ಮಧುಮೇಹ, ಮೂತ್ರಪಿಂಡ ಕಾಯಿಲೆ, ಕ್ಯಾನ್ಸರ್ ಹಾಗೂ ಮತ್ತಿತರ ಗಂಭೀರ ಕಾಯಿಲೆಗಳಿದ್ದರೆ ಅಂತಹ ವಿದ್ಯಾರ್ಥಿಗಳಿಗೆ ಪ್ರವೇಶಾತಿ ನೀಡುವಂತಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಆಯುಕ್ತರು ಅಧಿಕಾರಿಗಳಿಗೆ ತಿಳಿಸಿದರು.
ವೀಡಿಯೋ ಸಂವಾದದ ನಂತರ ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಮಾತನಾಡಿ ಎಲ್ಲಾ ವಿದ್ಯಾರ್ಥಿ ನಿಲಯಗಳ ವಾರ್ಡನ್‍ಗಳ ಸಭೆ ನಡೆಸಿ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಪೂರಕ ವ್ಯವಸ್ಥೆ ಕಲ್ಪಿಸಲು ಸೂಚನೆ ನೀಡುವಂತೆ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಿಗೆ ಸೂಚಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಸತೀಶ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಶ್ರೀಧರ್, ಜಿಲ್ಲಾ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಿನೇಂದ್ರ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ|| ಹಿರಣ್ಣಯ್ಯ, ತಾಲ್ಲೂಕು ಬಿ.ಸಿ.ಎಂ. ಹಾಸ್ಟಲ್ ವಿಸ್ತರಣಾಧಿಕಾರಿ ಎಂ. ಚನ್ನಬಸಪ್ಪ ಹಾಗೂ ಮತ್ತಿತರರು ಹಾಜರಿದ್ದರು.
*************



ಸಚಿವರ ಜಿಲ್ಲಾ ಪ್ರವಾಸ
ಹಾಸನ.

(ಕರ್ನಾಟಕ ವಾರ್ತೆ):- 

ಕಾನೂನು ಸಂಸದೀಯ ವ್ಯವಹಾರಗಳು ಶಾಸನ ರಚನೆ ಮತ್ತು ಸಣ್ಣ ನೀರಾವರಿ ಇಲಾಖೆಯ ಸಚಿವರಾದ ಜೆ.ಸಿ. ಮಾಧುಸ್ವಾಮಿ ಅವರು ನ.14 ರಂದು ಹಾಸನ ಜಿಲ್ಲೆಯಲ್ಲಿ ಪ್ರವಾಸ ಮಾಡಲಿರುವರು.
ಅಂದು ಬೆಳಿಗ್ಗೆ 11.30 ಗಂಟೆಗೆ ಹಳೇಬಿಡು ಕೆರೆಯ ಪುನರುಜ್ಜೀವನದ ಕಾಮಗಾರಿ ಪರಿವೀಕ್ಷಣೆ ಮಾಡಿ ಮದ್ಯಾಹ್ನ 1 ಗಂಟೆಗೆ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಮಳೆಯಿಂದಾಗಿರುವ ಸಣ್ಣ ನೀರಾವರಿ ಕೆರೆಗಳ ಪುನರುಜ್ಜೀವನದ ಕಾಮಗಾರಿ ಪ್ರಗತಿ ಪರಿಶೀಲನೆ ಸಭೆ ನಡೆಸಲಿದ್ದಾರೆ.
**********

ಕೊರೋನಾ ವಿಶೇಷ ಜಾಗೃತಿ ಕಾರ್ಯಕ್ರಮ

(ಕರ್ನಾಟಕ ವಾರ್ತೆ):- 

ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಸಾರ್ವಜನಿಕರು ಸಮಾಜಕ್ಕೆ ಬಂದೊದಗಿರುವ ಈ ಪಿಡುಗನ್ನು ತಡೆಗಟ್ಟುವಲ್ಲಿ ಅನುಸರಿಸಬೇಕಾದ ಅಗತ್ಯ ಮುಂಜಾಗ್ರತಾ ಕ್ರಮಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಶ್ರವ್ಯ-ದೃಶ್ಯ ಮಾಧ್ಯಮದ ಮೂಲಕ ಬೃಹತ್ ಎಲ್.ಇ.ಡಿ ಪರದೆ ಹೊಂದಿರುವ ಮೊಬೈಲ್ ವಾಹನಗಳನ್ನು ಬಳಸಿಕೊಂಡು 15 ಜಿಲ್ಲೆಗಳಲ್ಲಿ ನ. 14 ರಿಂದ ವಿಶೇಷ ಜಾಗೃತಿ ಕಾರ್ಯಕ್ರಮ ಪ್ರಾರಂಭಿಸಲಾಗುತ್ತಿದೆ.

ವಾಹನವು ಜಿಲ್ಲೆಯ 8 ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಲಿದ್ದು,  ಆಲೂರು ತಾಲ್ಲೂಕಿನ ಅಬ್ಬನ, ಬೈರಾಪುರ, ಹುಣಸವಳ್ಳಿ, ದೊಡ್ಡಕಣಗಾಲು, ಕದಾಳು, ಮಲ್ಲಾಪುರ, ಮಡಬಲು, ಕಾರಗೋಡು, ಕಣತೂರು, ಕಾರ್ಜುವಳ್ಳಿ, ಪಾಳ್ಯ, ತಾಳೂರು, ಕುಂದೂರು, ಕೆಂಚಮ್ಮನ ಹೊಸಕೋಟೆ, ಮಗ್ಗೆ, ಗಂಜಿಗೆರೆ, ಚಿಕ್ಕಕಣಗಾಲು.

ಹಾಸನ ತಾಲ್ಲೂಕಿನ ಅಟ್ಟಾವರ ಹೊಸಳ್ಳಿ, ಕಬ್ಬಳ್ಳಿ, ದುದ್ದ, ಹೊನ್ನಾವರ, ಬಸವಾಘಟ್ಟ, ಅಂಬುಗ, ಅಂಕಪುರ, ಬೂವನಹಳ್ಳಿ, ಹನುಮಂತಪುರ, ಹೂವಿನಹಳ್ಳಿ ಕಾವಲು, ಕಾರ್ಲೆ, ಮೊಸಳೆಹೊಸಳ್ಳಿ, ಜಾಗರವಳ್ಳಿ, ಮಡೆನೂರು, ಮೆಳಗೋಡು, ಶಂಕರನಹಳ್ಳಿ, ಕಂದಲಿ, ಕಾಟೀಹಳ್ಳಿ, ಮಣಚನಹಳ್ಳಿ, ತೇಜೂರು.
ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆ, ಬಾಗೆ, ಬೆಳಗೋಡು, ಹಲಸುಲಿಗೆ, ಉದೇವಾರ, ಉಚ್ಚಂಗಿ, ಯಸಳೂರು, ವಣಗೂರು, ಐಗೂರು, ಹೆತ್ತೂರು, ದೇವಾಲಕೆರೆ, ಹಾನುಬಾಳು, ಆನೇಮಹಲ್, ಹೆಬ್ಬಸಾಲೆ, ಹುರುಡಿ, ಶುಕ್ರವಾರಸಂತೆ, ಮಳಲಿ, ಚಂಗಡಿಹಳ್ಳಿ, ಹೊಸೂರು, ಕೂಡುರಸ್ತೆ.
ಬೇಲೂರು ತಾಲ್ಲೂಕಿನ ಅಡಗೂರು, ಗಂಗೂರು, ಹಳೇಬೀಡು, ಹೆಬ್ಬಾಳು, ಚಟಾಚಟ್ನಳ್ಳಿ, ಹಗರೆ, ಯಲಹಂಕ, ಇಬ್ಬೀಡು, ಗೋಣಿಸೋಮನಹಳ್ಳಿ, ಬಂಟೇನಹಳ್ಳಿ, ಚೀಕನಹಳ್ಳಿ, ಗೆಂಡೆಹಳ್ಳಿ, ಯಮಸಂದಿ, ಸನ್ಯಾಸಿಹಳ್ಳಿ, ತೊಳಲು, ಬೇಲೂರು ಬಸ್ ನಿಲ್ದಾಣ, ಕೋಗಿಲೆ ಮನೆ, ಬಿಕ್ಕೋಡು, ಮಲಸಾವರ, ಅರೇಹಳ್ಳಿ.
ಚನ್ನರಾಯಪಟ್ಟಣ ತಾಲ್ಲೂಕಿನ ಕುಂದೂರು ಮಠ, ಬ್ಯಾಡರಹಳ್ಳಿ, ಬಾಗೂರು, ಕೆಂಬಾಳು, ಅಣತಿ, ಎಂ. ಶಿವರ, ಸಾತೇನಹಳ್ಳಿ, ಅಕ್ಕನಹಳ್ಳಿ ಕೂಡು, ಕಬ್ಬಳ್ಳಿ, ದಿಡಗ, ನುಗ್ಗೇಹಳ್ಳಿ, ಹಿರೀಸಾವೆ, ಶ್ರವಣಬೆಳಗೊಳ, ಕಾಂತರಾಜಪುರ, ಕಬ್ಬಾಳು, ಸುಂಡಹಳ್ಳಿ, ಜುಟ್ಟನಹಳ್ಳಿ ಬಾರೆ, ಕಾರೆಹಳ್ಳಿ, ನವಿಲೆ ಗೇಟ್, ಜಂಬೂರು, ಕಲ್ಕೆರೆ, ಬಳದರೆ(ಉದಯಪುರ ಸರ್ಕಲ್), ಡಿ. ಕಾಳೇನಹಳ್ಳಿ, ಬರಗೂರು, ಆನೆಕೆರೆ, ಕುಂಬೇನಹಳ್ಳಿ, ನಲ್ಲೂರು (ಶ್ರೀನಿವಾಸಪುರ), ನೊರನಕ್ಕಿ, ಮಟ್ಟನವಿಲೆ, ಗೌಡಗೆರೆ.
ಹೊಳೆನರಸೀಪುರ ತಾಲ್ಲೂಕಿನ ದೊಡ್ಡಹಳ್ಳಿ, ಆನೇಕನ್ನಂಬಾಡಿ, ದೊಡ್ಡಕಾಡನೂರು, ಕಟ್ಟೆಬೆಳಗುಲಿ, ಬಾಗೇವಾಳು ತಾತನಹಳ್ಳಿ, ಹಳ್ಳಿ ಮೈಸೂರು, ಬಿದರಕ್ಕ, ಓಡನಹಳ್ಳಿ, ನಿಡುವಾಣಿ, ಮೂಡಲಹಿಪ್ಪು, ನಗರನಹಳ್ಳಿ, ಶ್ರವಣೂರು, ಹಳೇಕೋಟೆ, ಹಂಗರಹಳ್ಳಿ, ಹರಿಹರಪುರ, ದೊಡ್ಡಕುಂಚೇವು, ಕೋಡಿಹಳ್ಳಿ, ಪಡುವಲಹಿಪ್ಪೆ, ಸಂಕನಹಳ್ಳಿ, ದೊಡ್ಡಬ್ಯಾಗತವಳ್ಳಿ, ಕೆರಗೂಡು.
ಅರಕಲಗೂಡು ತಾಲ್ಲೂಕಿನ  ಗಂಜಲಗೂಡು, ಹೆಬ್ಬಾಲೆ, ಬೈಚನಹಳ್ಳಿ, ಯಲಗತ್ತಹಳ್ಳಿ, ಬೆಳವಾಡಿ, ಕೆರಳಾಪುರ, ಕಾಳೇನಹಳ್ಳಿ, ರಾಮನಾಥಪುರ, ರುದ್ರಪಟ್ಟಣ, ಹನ್ಯಾಳು, ಲಕ್ಕೂರು, ಗಂಗೂರು, ಕಟ್ಟೇಪುರ, ರಾಗಿಮರೂರು, ಕೊಣನೂರು, ಸಿದ್ದಾಪುರ ಗೇಟ್, ಮರಿಯಾನಗರ, ಬನ್ನೂರು, ದೊಡ್ಡಬೆಮ್ಮತ್ತಿ, ಮಲ್ಲಿಪಟ್ಟಣ, ಹುಲಿಕಲ್ಲು.
ಅರಸೀಕೆರೆ ತಾಲ್ಲೂಕಿನ ಅರಸೀಕೆರೆ ಬಸ್ ನಿಲ್ದಾಣ, ಮಾಡಾಳು, ಕಣಕಟ್ಟೆ, ಶಂಕರನಹಳ್ಳಿ, ಜೆ.ಸಿ.ಪುರ, ಅಗ್ಗುಂದ, ದುಮ್ಮೇನಹಳ್ಳಿ, ಬಾಗೇಶಪುರ, ಹಾರನಹಳ್ಳಿ, ಹಬ್ಬನಘಟ್ಟ, ಬೆಂಡೆಕೆರೆ, ಕುರುವಂಕ, ಬಾಣಾವಾರ, ಕಾಚೀಘಟ್ಟ, ಜಾಜೂರು, ಶ್ಯಾನೆಗೆರೆ, ಕೊಳಗುಂದ, ಬಂದೂರು, ಜಾವಗಲ್, ರಂಗಾಪುರ, ಉಂಡಿಗನಾಳು, ಮುದುಡಿ, ಲಾಳನಕೆರೆ, ಕೆಂಕೆರೆ, ಹೆಗ್ಗಟ್ಟ, ಗಂಡಸಿ, ಬಾಗೇವಾಳು, ಗೀಜಿಹಳ್ಳಿ, ರಾಂಪುರ, ಕಾಮಸಮುದ್ರ ಗ್ರಾಮಗಳಲ್ಲಿ ಸಂಚರಿಸಿ ಕೋವಿಡ್-19 ಬಗ್ಗೆ ಜಾಗೃತಿ ಮೂಡಿಸಲಿದೆ.
********

ಜಿಲ್ಲೆಯಲ್ಲಿಂದು ಹೊಸದಾಗಿ 62 ಕೋವಿಡ್ ಪ್ರಕರಣಗಳು ಪತ್ತೆ

(ಕರ್ನಾಟಕ ವಾರ್ತೆ):-

ಜಿಲ್ಲೆಯಲ್ಲಿಂದು ಹೊಸದಾಗಿ 62 ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 26,249ಕ್ಕೆ ಏರಿಕೆಯಾಗಿದೆ. 
 ಜಿಲ್ಲಾಸ್ಪತ್ರೆಯಲ್ಲಿ 699 ಮಂದಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, ಈವರೆಗೆ 25,109 ಮಂದಿ ಗುಣಮುಖರಾಗಿದ್ದಾರೆ. ತೀವ್ರ ನಿಗಾ ಘಟಕದಲ್ಲಿ 24 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. 
ಇಂದು ಪತ್ತೆಯಾದ 62 ಕೊರೋನ ಸೋಂಕು ಪ್ರಕರಣಗಳಲ್ಲಿ 8 ಮಂದಿ ಚನ್ನರಾಯಪಟ್ಟಣ ತಾಲ್ಲೂಕಿನವರು, ಆಲೂರು ತಾಲ್ಲೂಕಿನ 5 ಮಂದಿ, 23 ಮಂದಿ ಹಾಸನ ತಾಲ್ಲೂಕು, 5 ಮಂದಿ ಹೊಳೆನರಸೀಪುರ ತಾಲ್ಲೂಕು, 7 ಮಂದಿ ಅರಕಲಗೂಡು ತಾಲ್ಲೂಕು, ಬೇಲೂರು ತಾಲ್ಲೂಕಿನ 9 ಮಂದಿ, ಅರಸೀಕೆರೆ ತಾಲ್ಲೂಕಿನ 5 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಸತೀಶ್ ಅವರು ತಿಳಿಸಿದ್ದಾರೆ.
*********

ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡುವಂತೆ ಜಿಲ್ಲಾಧಿಕಾರಿ ಸೂಚನೆ

ಹಾಸನ.

(ಕರ್ನಾಟಕ ವಾರ್ತೆ):-

 ಸರ್ಕಾರದ ಮಾರ್ಗಸೂಚಿಗಳಂತೆ ಕೋವಿಡ್-19ರ ಸಾಂಕ್ರಮಿಕ ರೋಗ ಹರಡಿರುವ ಹಿನ್ನಲೆಯಲ್ಲಿ ಸಾರ್ವಜನಿಕರ ಆರೋಗ್ಯವನ್ನು ಕಾಪಾಡುವ ಹಿತದೃಷ್ಟಿಯಿಂದ ಹಾಗೂ ಪರಿಸರ ಮಾಲಿನ್ಯವನ್ನು ತಡೆಗಟ್ಟುವ ಸಲುವಾಗಿ ಹಾಸನ ಜಿಲ್ಲೆಯಲ್ಲಿ ಈ ಬಾರಿ ಪಟಾಕಿ ಮಾರಾಟದ ತಾತ್ಕಲಿಕ ಪರವಾನಗಿ ಪಡೆಯುವ ವರ್ತಕರು ಹಸಿರು ಪಟಾಕಿಗಳನ್ನು ಮಾತ್ರ ನ.16 ರವರೆಗೆ ಮಾರಾಟ ಮಾಡತಕ್ಕದ್ದು ಹಾಗೂ ಸಾರ್ವಜನಿಕರು ಪಟಾಕಿಗಳನ್ನು ರಾತ್ರಿ 8 ರಿಂದ 10 ಗಂಟೆಯವರೆಗೆ ಮಾತ್ರ ಬಳಸತಕ್ಕದ್ದು.
ಈ ಬಾರಿ ಹಸಿರು ಪಟಾಕಿಗಳನ್ನು ಬಿಟ್ಟು ಇತರೆ ಯಾವುದೇ ಪಟಾಕಿಗಳನ್ನು ಮಾರಾಟ ಮಾಡತಕ್ಕದ್ದಲ್ಲ ಹಾಗೂ ಹಚ್ಚತಕ್ಕದ್ದಲ್ಲವೆಂದು ಸರ್ಕಾರವು ನಿರ್ದೇಶನಗಳನ್ನು ನೀಡಿದೆ. 
ಹಸಿರು ಪಟಾಕಿಗಳೆಂದರೆ ಕಡಿಮೆ ಹಾನಿಕಾರಕ ಪಟಾಕಿಗಳು ಅಂದರೆ  ಪೆಟ್ರೊಲಿಯಂ ಅಂಡ್ ಎಕ್ಸ್‍ಪ್ಲೊಸಿವ್ಸ್ ಸೇಫ್ಟಿ ಆರ್ಗಾನೈಷನ್ ಇವರು CSIR-NEERI  ರವರ ಸಹಯೋಗದೊಂದಿಗೆ ಸುಧಾರಿತ ವಿಧಾನದಿಂದ ತಯಾರು ಮಾಡಿದ ಪಟಾಕಿಗಳಿಗೆ ಅನುಮೋದನೆ ನೀಡಿದ ಪಟಾಕಿಗಳಾಗಿರುತ್ತದೆ. ಹಾಗೂ ಪಟಾಕಿ ಬಾಕ್ಸ್‍ಗಳ ಮೇಲೆ ಹಸಿರು ಪಟಾಕಿಗಳ ಮುದ್ರೆ ಇರುತ್ತದೆ. ಸಾರ್ವಜನಿಕರು ಪಟಾಕಿ ಖರೀದಿ ವೇಳೆ ಪರಿಶೀಲನೆ ಮಾಡಿ ಹಸಿರು ಪಟಾಕಿಗಳೆಂದು ಖಾತ್ರಿ ಪಡಿಸಿಕೊಂಡು ಪಟಾಕಿಗಳನ್ನು ಖರೀದಿಸುವಂತೆ ಜಿಲ್ಲಾ ದಂಡಾಧಿಕಾರಿ ಆರ್. ಗಿರೀಶ್ ತಿಳಿಸಿದ್ದಾರೆ.
*********

ಪ್ರಧಾನ ಸಂಪಾದಕರು :- ಹರೀಶ್ ಹೆಚ್ ಆರ್  
ಕೋಟೆ



ಸುದ್ದಿ ಸಂಪಾದಕರು :- ನಾಗೇಂದ್ರ ಹೆಚ್.ಎನ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರೈತ ದಿನ ಆಚರಣೆ-ಸಾವಯವ ಕೃಷಿ ಪದ್ಧತಿಗೆ ಸಲಹೆ.

👇👇👇👇👇👇👇👇👇👇👇👇👇 ರೈತ ದಿನಾಚರಣೆ https://youtube.com/shorts/EGX4c_IVzY8?si=erkB19_6MH0KmBG6 ಮೊಸಳೆಹೊಸಹಳ್ಳಿಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ರಾಷ್ಟ್ರೀಯ ರೈತರ ದಿನದ ಅಂಗವಾಗಿ ಸಾವಯವ ಕೃಷಿ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಪುಣ್ಯಭೂಮಿ ಪರಿಸರ ಪ್ರಶಸ್ತಿ ಮತ್ತು ಶ್ರೇಷ್ಠ ಕೃಷಿಕ ಪ್ರಶಸ್ತಿ ಪುರಸ್ಕೃತರಾದ ಕಟ್ಟಾಯ ಹೋಬಳಿಯ ಬ್ಯಾಡರಹಳ್ಳಿಯ ಸಾವಯವ ಕೃಷಿಕರು, ಪ್ರಗತಿಪರ ರೈತರು ಮತ್ತು ಪಾರಂಪರಿಕ ವೈದ್ಯರಾದ ಶ್ರೀಯುತ ರವಿಶಂಕರ್ ಅವರು ಆಗಮಿಸಿದ್ದರು. ಸಂಸ್ಥೆಯಲ್ಲಿ ರೈತರಿಂದ ಗಿಡ ನೆಡುವುದರ ಮೂಲಕ ರೈತರ ದಿನವನ್ನು ಉದ್ಘಾಟಿಸಲಾಯಿತು. ಸಾವಯವ ಕೃಷಿಯನ್ನು ಉದ್ದೇಶಿಸಿ ಮಾತನಾಡಿದ ಇವರು ವಿದ್ಯಾರ್ಥಿಗಳಿಗೆ ಸಾವಯವ ಕೃಷಿಯ ಕ್ರಮಗಳು, ಆರೋಗ್ಯಕರ ಪ್ರಯೋಜನಗಳನ್ನು ವಿವರಿಸುತ್ತಾ, ಬೆಳೆಗೆ ಯಾವುದೇ ರಾಸಾಯನಿಕ ಗೊಬ್ಬರಗಳು, ಕೀಟನಾಶಕಗಳನ್ನು ಬಳಸದೇ ಕೇವಲ ಹಸುವಿನ ಸಗಣಿ ಮತ್ತು ಗಂಜುಳದಿಂದ ರಸಗೊಬ್ಬರ ಮತ್ತು ಸಾವಯವ ಕೀಟನಾಶಕವನ್ನು ತಯಾರಿಸಿ ಮಣ್ಣಿನ ಫಲವತ್ತತೆಯನ್ನು ಹೇಗೆ ಹೆಚ್ಚಿಸುವುದು ಮತ್ತು ಯಾವ ಕಾಲ, ನಕ್ಷತ್ರ, ಹವಾಮಾನ ಮತ್ತು ಮಾಸಕ್ಕನುಗುಣವಾಗಿ ಯಾವ ಬೆಳೆ ಬೆಳೆಯಬೇಕೆಂಬುದನ್ನು ರೈತರು ಸೂಕ್ತವಾಗಿ ಅರಿತಿರಬೇಕು ಮತ್ತು ಪೌಷ್ಟಿಕ ಆಹಾರ ಸೇವನೆಯಿಂದ ಆರೋಗ್ಯ ವೃದ್ಧಗೊಳಿಸಿಕೊಳ್ಳ

ಮೊಸಳೆಹೊಸಳ್ಳಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿಶ್ವ ಏಡ್ಸ್ ದಿನ ಆಚರಣೆ.

ಹಾಸನ ತಾಲ್ಲೂಕಿನ ಮೊಸಳೆಹೊಸಹಳ್ಳಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್.) ಘಟಕದ ವತಿಯಿಂದ ರೆಡ್ ರಿಬ್ಬನ್ ಕ್ಲಬ್ ಸಹಯೋಗದೊಂದಿಗೆ, ವಿಶ್ವ ಏಡ್ಸ್ ದಿನದ ಪ್ರಯುಕ್ತ ಸಂಸ್ಥೆಯಲ್ಲಿ ಏಡ್ಸ್ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.. . ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಾಸನ ಜಿಲ್ಲಾ ಏಡ್ಸ್ ಪ್ರಿವೆನ್ಷನ್ ಮತ್ತು ಕಂಟ್ರೋಲ್ ಘಟಕದ ಸೂಪರ್ವೈಸರ್ ಶ್ರೀಯುತ ರವಿಕುಮಾರ್ ವಿ. ಬಲ್ಲೇನಹಳ್ಳಿ ಯವರು ಮತ್ತು ಲಯನ್ಸ್ ಕ್ಲಬ್ ಅಧ್ಯಕ್ಷರಾದ ಶ್ರೀಯುತ ನಾಗೇಶ್ ರವರು ಹೆಚ್.ಐ.ವಿ. ಸೋಂಕಿನ ಬಗ್ಗೆ ವಿದ್ಯಾರ್ಥಿಗಳಿಗೆ ಸಂಕ್ಷಿಪ್ತ ಮಾಹಿತಿ ನೀಡುವ ಮೂಲಕ ಜಾಗೃತಿ ಮೂಡಿಸಿದರು.  ಮುಂದುವರೆದು ಸಂಸ್ಥೆಯಲ್ಲಿ ಏಡ್ಸ್/ಹೆಚ್.ಐ.ವಿ. ಸೋಂಕಿನ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಸವಾಗಿ ಚರ್ಚಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಪೋಸ್ಟರ್ ಡಿಸೈನ್ ಮತ್ತು ರಂಗೋಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು ಮತ್ತು ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು ಸಂಸ್ಥೆಯ ಎನ್.ಎಸ್.ಎಸ್. ಅಧಿಕಾರಿಗಳಾದ ಶ್ರೀಯುತ ವೀರಭದ್ರಸ್ವಾಮಿ ಕೆ.ಎಂ. ರವರು, ಎನ್.ಎಸ್.ಎಸ್. ಚಟುವಟಿಕೆಯ ಅಡಿಯಲ್ಲಿ ವಿದ್ಯಾರ್ಥಿಗಳು ಸುತ್ತಮುತ್ತಲ, ಮೂರು ಗ್ರಾಮಗಳನ್ನು ದತ್ತು ಪಡೆದು ಸ್ವಚ್ಛತೆ, ಆರೋಗ್ಯ, ಉನ್ನತ ಶಿಕ್ಷಣ ಮುಂತಾದ ವಿಷಯಗಳ ಬಗ್ಗೆ ಜಾಗೃತಿ

ಹಾಸನ ಜಿಲ್ಲೆಯಲ್ಲಿ ಸ್ವಯಂ ಉದ್ಯೋಗಾವಕಾಶಗಳು.

ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯಲ್ಲಿ ನೆಲೆಸಿರುವ ಗೃಹಿಣಿಯರು, ನಿವೃತ್ತ ಅಧಿಕಾರಿಗಳು /ನೌಕರರು ಮತ್ತು ನಿರುದ್ಯೋಗಿಗಳಿಗೆ ಆರ್ಥಿಕ ವಲಯದಲ್ಲಿ ಹೂಡಿಕೆ ಇಲ್ಲದೆ ವೃತ್ತಿ ಅವಕಾಶಗಳು / ವ್ಯಾಪಾರ ಅವಕಾಶಗಳು  ಪುರುಷ ಮತ್ತು  ಮಹಿಳೆಯರಿಗೆ   ವಯಸ್ಸಿನ ಮಿತಿ: - 25 ರಿಂದ 65 ವರ್ಷಗಳು.  ದಯವಿಟ್ಟು ನಿಮ್ಮ ವಿವರಗಳನ್ನು ಕೆಳಗಿನ ಇಮೇಲ್ ಐಡಿಗೆ ಕಳುಹಿಸಿ.  freelanceadvertisingthassan@gmail.com  ಅಥವಾ  ಸಂಪರ್ಕಿಸಿ  7090899728 Career opportunities /business opportunities with out an investments in financial sector for housewives ,retired officials /employees and unemployed persons residing in Hassan district, Karnataka state India For both male and female. Age limit:- 25 to 65 years. Please send your details to below email id. freelanceadvertisingathassan@gmail.com Or  Contact  070908 99728