ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಹಾಸನ ಜಿಲ್ಲೆಯಲ್ಲಿಂದು 301 ಜನರಿಗೆ ಕೊರೊನಾ ಪಾಸೀಟೀವ್ ಸೋಂಕು ಪತ್ತೆ .443 ಜನ ಗುಣಮುಖರಾಗಿ ಬಿಡುಗಡೆಯಾದರು. ಒಬ್ಬರು ಸಾವನ್ನಪ್ಪಿದ್ದಾರೆ. 52 ಜನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

11/09/2020 ಹಾಸನ ಜಿಲ್ಲೆಯಲ್ಲಿಂದು 301 ಜನರಿಗೆ ಕೊರೊನಾ ಪಾಸೀಟೀವ್ ಸೋಂಕು ಪತ್ತೆ . 443 ಜನ ಗುಣಮುಖರಾಗಿ ಬಿಡುಗಡೆಯಾದರು.  ಒಬ್ಬರು ಸಾವನ್ನಪ್ಪಿದ್ದಾರೆ. 52 ಜನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.                ಸಂಪಾದಕರು             ಹರೀಶ್ ಹೆಚ್ ಆರ್                    ಕೋಟೆ.

ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಆಚರಣೆ

ಅರಣ್ಯ ಸಂರಕ್ಷಣೆ ಪ್ರತಿಯೊಬ್ಬ ನಾಗರೀಕನ ಕರ್ತವ್ಯ: ನ್ಯಾ|| ಶಿವಣ್ಣ ಹಾಸನ,ಸೆ.11(ಕರ್ನಾಟಕ ವಾರ್ತೆ):- ಅರಣ್ಯ ದೇಶದ ಸಂಪತ್ತು ಅದನ್ನು ಸಂರಕ್ಷಣೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಶಿವಣ್ಣ ಅವರು ತಿಳಿಸಿದ್ದಾರೆ. ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಅಂಗವಾಗಿ ಅರಣ್ಯ ಇಲಾಖೆ ವತಿಯಿಂದ ನಗರದ ಅರಣ್ಯ ಭವನದಲ್ಲಿಂದು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅರಣ್ಯ ಹುತಾತ್ಮರಿಗೆ ಗೌರವ ನಮನ ಸಲ್ಲಿಸಿ ಮಾತನಾಡಿದ ಅವರು ದೇಶದಲ್ಲಿ ಅರಣ್ಯ ಸಂಪತ್ತು ಇರುವುದರಿಂದ ಕಾಲಕಾಲಕ್ಕೆ ಮಳೆ ಬೆಳೆಯಾಗಿ ಸುಖ ಸಮೃದ್ಧಿಯಿಂದ ಜನರು ಜೀವನ ನಡೆಸುತ್ತಿದ್ದಾರೆ ಹಾಗಾಗಿ ಅದನ್ನು ಇನ್ನಷ್ಟು ಮುತುವರ್ಜಿಯಿಂದ ಕಾಪಾಡಿಕೊಳ್ಳಬೇಕು ಎಂದರು. ಜೀವ ಸಂಕುಲದ ಉಳಿವಿಗೆ ಮಳೆ, ಗಾಳಿ ಹಾಗೂ ನೀರು ಅತ್ಯಾವಶ್ಯಕ ಹಾಗಾಗಿ ವಸಸಂವರ್ಧನೆಗೆ ಎಲ್ಲರೂ ಶ್ರಮಿಸಬೇಕು ಎಂದು ಅವರು ಕರೆ ನೀಡಿದರು. ಅರಣ್ಯ ಸಿಬ್ಬಂದಿಗಳು ಮರಗಳ ಕಳ್ಳ ಸಾಗಾಣಿಕೆ ಮಾಡುವವರ ವಿರುದ್ಧ, ವನ್ಯ ಜೀವಿ ಭೇಟೆ ಆಡುವವರ ವಿರುದ್ಧ ಪ್ರಾಣದ ಹಂಗು ತೊರೆದು ಹೋರಾಡುತ್ತಿದ್ದಾರೆ. ಅಂತಹ ಸಂದರ್ಭದಲ್ಲಿ ಹುತಾತ್ಮರಾದ ಎಲ್ಲರ ಸಾಧನೆ ಚಿರ ಸ್ಮರಣೀಯ ಎಂದು ನ್ಯಾ|| ಶಿವಣ್ಣ ಹೇಳಿದರು. ಹಲವೆಡೆ ಅರಣ್ಯಗಳ ಒತ್ತುವರಿಯಾಗುತ್ತಿದ್ದು, ಸರ್ಕಾರವು ಆದಷ್ಟು ಕ್ರಮವಹಿಸುತ್ತಿದೆ. ಸಾರ್ವಜನಿಕರೂ ಇದರಲ್ಲಿ ಕೈಜೋಡಿಸುವ ಮೂಲಕ ಅರಣ್ಯ ಸಂರಕ್ಷಣೆ ಮಾಡಿದರೆ ನಮ್

ಸಂಬಂಧಗಳ ಅನುಬಂಧ-ಕೋಟೆ ಕಾಲಂ

ಸಂಬಂಧಗಳ ಅನುಬಂಧ ಮಕ್ಕಳು ಯಾರಾದ್ರು ನೆಂಟರು ಅದರಲ್ಲಿಯೂ ಹತ್ತಿರದವರು ಅತ್ತೆ ಮಾವ ಚಿಕ್ಕಪ್ಪ ಚಿಕ್ಕಮ್ಮ ಅವರ ಮಕ್ಕಳು ಅಜ್ಜಿ ತಾತ ಹೀಗೆ ಹತ್ತಿರದವರು ಹಬ್ಬ ಹುಣ್ಣಿಮೆ ಇಲ್ಲವೆ ರಜೆ ಸಮಯದಲ್ಲಿ ನಾಕು ದಿನ ಇದ್ದು ಹೊರಟಾಗಿನ ಪ್ರಸಂಗ ಪ್ರಹಸನ ನೆನಪಿಸಿಕೊಂಡರೆ ಸಾಕು ಮನುಷ್ಯ ಸಂಬಂಧ ಅಗ ಮತ್ತು ಈಗ ಎಂಬ ವ್ಯತ್ಯಾಸ ಅರ್ಥ ವಾಗುತ್ತದೆ ನೆಂಟರ ಬ್ಯಾಗ್ ಭರ್ತಿಮಾಡುತ್ತಿದ್ದುದರಿಂದ ಹಿಡಿದು ಅವರನ್ನು ಬಸ್ಸಿನಲ್ಲಿ ಕಿಟಕಿ ಪಕ್ಕದ ಸೀಟ್ ಹಿಡಿದು ಅವರ ಲಗೆಜ್ ಅನ್ನು ಜೋಪಾನವಾಗಿ ಜೋಡಿಸಿ ಬರ್ತೀಯಾ ಕಾಗದ ಬರಿ ಅನ್ನೋವರೆಗೂ ನಡೆಯುತ್ತಿದ್ದ ಸೀನ್ಗಳೇ ಅದ್ಬುತ ಇನ್ನು ಮಕ್ಕಳು ಕರೆದುಕೊಂಡು ಹೋಗುವುದಿಲ್ಲ ಎಂದು ಖಚಿತವಾದರು ಕಡೆಯದಾಗಿ ನಾನು ಬತ್ತೀನಿ ಎಂದು ಅಳುತ್ತಿದ್ದುದು ಅಳುವಿನ ನಡುವೆಯೆ ಚಡ್ಡಿ ಜೇಬು ತಡವಿ ನೆಂಟರು ಕೊಟ್ಟ ಚಿಲ್ಲರೆ ನಾಣ್ಯ ಸ್ಪರ್ಷಿಸಿ ಖುಷಿಪಡುತ್ತಿದ್ದುದು ಮರೆಯಲಸಾಧ್ಯ ಇನ್ನು ಹೆಣ್ಣುಮಕ್ಕಳಿಗೆ ಕುಂಕುಮ ಕೊಡುತ್ತಿದ್ದುದನ್ನೇ ಒಂದು ಕತೆಯಾಗಿಸಬಹುದು ಸಣ್ಣ ವಿಚಾರ ಎನಿಸಿದರೂ ಇವುಗಳಲ್ಲಿ ಅಡಗಿರುವ ಪ್ರೀತಿ ಅಗಾಧ ಇದೆಲ್ಲದರಿಂದ ಇಂದಿನ ಮಕ್ಕಳು ವಂಚಿತರಾದರಲ್ಲಾ ಎಂದು ಒಮ್ಮೊಮ್ಮೆ ನೋವಾಗುತ್ತದೆ ಇನ್ನು ಮದುವೆಗಳಂತೂ ಒಂದು ವಾರ ಠಿಕಾಣಿ ಹೊಡೆಯುವ ಕಾರ್ಯಕ್ರಮ ಮನೆಬಾಗಿಲಿನಲ್ಲಿ ಧಾರೆ ಎರೆಯುತ್ತಿದ್ದ ಮದುವೆಗಳ ಸಂಭ್ರಮ ಒಂದುರೀತಿಯಾದರೆ ಇದ್ದ ಒಂದೆರೆಡು ಛತ್ರಗಳಲ್ಲಿ ನಡೆಯುತ್ತಿದ್ದ ಮದುವೆಗಳ ಸಂಭ್ರಮ ಮತ್ತೊಂದು ರೀತಿಯದ್ದು ಅಲ

ಹೇಮಾವತಿ ಜಲಾಶಯದ ನೀರಿನ ಮಟ್ಟ

ಹೇಮಾವತಿ ಜಲಾಶಯದ ನೀರಿನ ಮಟ್ಟ ಹಾಸನ ಸೆ.11(ಕರ್ನಾಟಕ ವಾರ್ತೆ): HEMAVATHI RESERVOIR Dt- 11-09-2020 6.00 AM Max Levl: 2922.00 ft Today's lvl :2919.52 ( 2922.00 )ft, Max Cap: 37.103 TMC Today's cap: 34.72 ( 37.10 ) Tmc Live cap : 30.35 ( 32.73 )Tmc Inflow: 2590 ( 14479 )Cus, Outflow River: 900 ( 4200 ) cus. Canals- LBC : 3200 (3500) cus, RBC : 300(300) Cus, HRBHLC: 600(600) Cus, Total out flow : 5000 ( 8600 ) cus note: corresponding last year readings are shown in bracket. ಸಂಪಾದಕರು ಹರೀಶ್ ಹೆಚ್ ಆರ್ ಕೋಟೆ.

ಮುಖ್ಯಮಂತ್ರಿಗಳ ವಿಡಿಯೋ ಸಂವಾದ :ಅಧಿಕಾರಿಗಳ ಬಗ್ಗೆ ಶ್ಲಾಘನೆ ಮತ್ತು ಸಲಹೆ

ಕೋವಿಡ್ ನಿಯಂತ್ರಿಸಲು ಶ್ರಮಿಸುತ್ತಿರುವ ಅಧಿಕಾರಿಗಳಿಗೆ ಮಾನ್ಯ ಮುಖ್ಯ ಮಂತ್ರಿಯವರಿಂದ ಅಭಿನಂದನೆ ಹಾಸನ,ಸೆ.10(ಕರ್ನಾಟಕ ವಾರ್ತೆ):- ಕೋವಿಡ್ ಹರಡುವುದನ್ನು ನಿಯಂತ್ರಿಸಲು ಹೆಚ್ಚು ಆಸಕ್ತಿವಹಿಸಿ ಶಕ್ತಿಮೀರಿ ಶ್ರಮಿಸುತ್ತಿರುವ ರಾಜ್ಯದ ಪ್ರತಿಯೊಂದು ಜಿಲ್ಲೆಯ ಅಧಿಕಾರಿಗಳಿಗೆ ಮಾನ್ಯ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಭಿನಂದನೆ ಸಲ್ಲಿಸಿದ್ದಾರೆ.       ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿದ ಅವರು ಕೋವಿಡ್ ನಿರ್ವಹಣೆಯನ್ನು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ನಿಗಾವಹಿಸಿ ಪರಿಣಾಮಕಾರಿಯಾಗಿ ನಿಭಾಯಿಸುವುದರ ಮೂಲಕ ಮರಣ ಸಂಖ್ಯೆಯನ್ನು ಕಡಿಮೆ ಮಾಡಬೇಕು ಎಂದರು.      ಮಳೆಯಿಂದ ನಷ್ಟವಾಗಿರುವ ಬೆಳೆ, ರಸ್ತೆ ಮತ್ತು ಸೇತುವೆಗಳು, ಮನೆಗಳು ಕುರಿತು ಮಾಹಿತಿ ಪಡೆದ ಮುಖ್ಯ ಮಂತ್ರಿಯವರು ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗದಂತೆ ಹಾಳಾಗಿರುವ ರಸ್ತೆ ಮತ್ತು ಸೇತುವೆಗಳನ್ನು ತಾತ್ಕಾಲಿಕವಾಗಿ ದುರಸ್ಥಿಪಡಿಸಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.       ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆಯಾಗುವುದನ್ನು ಕಾಯದೆ, ಜಿಲ್ಲೆಗಳಿಗೆ ಅಗತ್ಯವಿರುವ ಹಣವನ್ನು ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಲಾಗುವುದು ಅದನನು ಸಮರ್ಪಕವಾಗಿ ಬಳಸಿ

ನೇಕಾರ್ ಸನ್ಮಾನ್ ಯೋಜನೆ ಮೂಲಕ ಸಹಾಯ ಧನ: ಸಚಿವ ಶ್ರೀಮಂತ ಬಾಬಾ ಸಾಹೇಬ ಪಾಟೀಲ್

. ನೇಕಾರ್ ಸನ್ಮಾನ್ ಯೋಜನೆ ಮೂಲಕ ಸಹಾಯಧನ: ಶ್ರೀಮಂತ ಬಾಬಾ ಸಾಹೇಬ ಪಾಟೀಲ ಹಾಸನ.ಸೆ.10(ಕರ್ನಾಟಕ ವಾರ್ತೆ):- ಕೋವಿಡ್-19 ಲಾಕ್‍ಡೌನ್ ನಿಂದ ಕೈಮಗ್ಗ ಮತ್ತು ಜವಳಿ ನೇಕಾರರು ಸಕಷ್ಟದಲ್ಲಿದ್ದು, ಸಹಾಯ ಮಾಡುವ ಉದ್ದೇಶದಿಂದ ಮುಖ್ಯ ಮಂತ್ರಿಯವರೊಂದಿಗೆ ಮಾತನಾಡಿ ನೇಕಾರ್ ಸನ್ಮಾನ್ ಯೋಜನೆ ಮೂಲಕ ಪ್ರತಿ ವರ್ಷ 2,000 ರೂ ಸಹಾಯಧನ ನೀಡಲಾಗುತ್ತಿದೆ ಎಂದು ಕೈಮಗ್ಗ ಮತ್ತು ಜವಳಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವರಾದ ಶ್ರೀಮಂತ ಬಾಬಾ ಸಾಹೇಬ ಪಾಟೀಲ ಅವರು ತಿಳಿಸಿದ್ದಾರೆ. ಜಿಲ್ಲಾಧಿಕಾರಿಯವರ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈಗಾಗಲೇ 41 ಸಾವಿರ ಜನ ಅರ್ಜಿ ಸಲ್ಲಿಸಿದ್ದು 8.32 ಕೋಟಿ ಹಣವನ್ನು ನೇರವಾಗಿ ಅವರ ಖಾತೆಗೆ ಜಮಾ ಮಾಡಲಾಗಿದೆ ಹಾಗೂ ವಿದ್ಯುತ್ ಮಗ್ಗಗಳಲ್ಲಿಯೂ ಸಹ 1.25 ಲಕ್ಷ ಜನರಿದ್ದು, 40 ಸಾವಿರ ಜನರು 8.13 ಕೋಟಿ ಹಣವನ್ನು ಜಮಾ ಮಾಡಲಾಗಿದೆ ಎಂದರು. ಅರ್ಜಿ ಸಲ್ಲಿಕೆಯಲ್ಲಿ ಹೆಚ್ಚು ಬಾಕಿ ಉಳಿದಿರುವ ಜಿಲ್ಲೆಗೆ ಭೇಟಿ ನೀಡಿ ಅವರ ಸಮಸ್ಯೆಗಳನ್ನು ಆಲಿಸಿ ನೇಕಾರು ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಸರಳೀಕರಿಸಿ ನೇಕಾರರ ಖಾತೆಗೆ ನೇರವಾಗಿ ಜಮಾ ಆಗುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರಾದ ಶ್ರೀಮಂತ ಬಾಬಾ ಸಾಹೇಬ ಪಾಟೀಲ ಅವರು ತಿಳಿಸಿದರು. ಸಂಕಷ್ಟದ ಸಮಯದಲ್ಲಿ ನೇಕಾರರು ಸಾಲ ಸೌಲಭ್ಯ ಪಡೆದಿದ್ದು, 1 ಲಕ್ಷದ ವರೆಗೆ ಸಾಲ ಮನ್ನ ಮಾಡಲಾಗಿದ್ದು, ಶೇ. 80 ರಷ್ಟು ಮಂದಿ ಲಾಭ ಪಡೆದಿದ್ದಾರೆ

ಆತ್ಮಹತ್ಯೆ ತಡೆಗಟ್ಟಲು ಪ್ರಚಾರ ವಾಹನಕ್ಕೆ ಚಾಲನೆ. -ಹಾಸನದ ಮಾನ್ಯ ಜಿಲ್ಲಾಧಿಕಾರಿ ಆರ್ .ಗಿರೀಶ್ ರವರಿಂದ.

ಆತ್ಮಹತ್ಯೆ ತಟೆಗಟ್ಟಲು  ಪ್ರಚಾರ ವಾಹನಕ್ಕೆ ಚಾಲನೆ :- ಹಾಸನ.ಸೆ.10(ಕರ್ನಾಟಕ ವಾರ್ತೆ):-  ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗದ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಂದು ವಿಶ್ವ ಆತ್ಮಹತ್ಯೆ ತಟೆಗಟ್ಟುವ ದಿನದ ಅಂಗವಾಗಿ ಆತ್ಮಹತ್ಯೆ ತಡೆಗಟ್ಟುವ ಕುರಿತು ಸಾರ್ವಜನಿಕರಿಗೆ ಪ್ರಚಾರ ಅರಿವು ಮೂಡಿಸುವ ನಿಟ್ಟಿನಲ್ಲಿ ವಾಹನಕ್ಕೆ ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಚಾಲನೆ ನೀಡಿದರು.  ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಕವಿತ ರಾಜರಾಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಸತೀಶ್, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಸವರಾಜು, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ|| ವೇಣುಗೋಪಾಲ್, ಹಿಮ್ಸ್ ಮನೋವೈದ್ಯಕೀಯ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರಾದ ಡಾ|| ಸಂತೋಷ್ ಹಾಗೂ ಮತ್ತಿತರರು ಹಾಜರಿದ್ದರು.                   ಸಂಪಾದಕರು                ಹರೀಶ್ ಹೆಚ್ ಆರ್                           ಕೋಟೆ          **********

ದಿನಾಂಕ: 10/09/2020ಹಾಸನ ಜಿಲ್ಲೆಯಲ್ಲಿಂದು 218 ಜನರಿಗೆ ಕೊರೊನಾ ಪಾಸೀಟೀವ್ ಸೋಂಕು ಪತ್ತೆ .213 ಜನ ಗುಣಮುಖರಾಗಿ ಬಿಡುಗಡೆಯಾದರು. ಒಟ್ಟು 9 ಜನ ಸಾವನ್ನಪ್ಪಿದ್ದಾರೆ.50 ಜನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದಿನಾಂಕ: 10/09/2020 ಹಾಸನ ಜಿಲ್ಲೆಯಲ್ಲಿಂದು 218 ಜನರಿಗೆ ಕೊರೊನಾ ಪಾಸೀಟೀವ್ ಸೋಂಕು ಪತ್ತೆ . 213 ಜನ ಗುಣಮುಖರಾಗಿ ಬಿಡುಗಡೆಯಾದರು.  ಒಟ್ಟು 9 ಜನ ಸಾವನ್ನಪ್ಪಿದ್ದಾರೆ. 50 ಜನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.                ಸಂಪಾದಕರು             ಹರೀಶ್ ಹೆಚ್ ಆರ್                    ಕೋಟೆ.

ದಿನಾಂಕ: 09/09/2020ಹಾಸನ ಜಿಲ್ಲೆಯಲ್ಲಿಂದು 273 ಜನರಿಗೆ ಕೊರೊನಾ ಪಾಸೀಟೀವ್ ಸೋಂಕು ಪತ್ತೆ .263 ಜನ ಗುಣಮುಖರಾಗಿ ಬಿಡುಗಡೆಯಾದರು. ಒಟ್ಟು 4 ಜನ ಸಾವನ್ನಪ್ಪಿದ್ದಾರೆ.52 ಜನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

               ಸಂಪಾದಕರು              ಹರೀಶ್ ಹೆಚ್ ಆರ್                      ಕೋಟೆ.  ದಿನಾಂಕ: 09/09/2020 ಹಾಸನ ಜಿಲ್ಲೆಯಲ್ಲಿಂದು 273  ಜನರಿಗೆ ಕೊರೊನಾ ಪಾಸೀಟೀವ್ ಸೋಂಕು ಪತ್ತೆ . 263 ಜನ ಗುಣಮುಖರಾಗಿ ಬಿಡುಗಡೆಯಾದರು.  ಒಟ್ಟು 4  ಜನ ಸಾವನ್ನಪ್ಪಿದ್ದಾರೆ. 52 ಜನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆರೋಗ್ಯ ಬಿ ಶ್ರೀರಾಮುಲು ಸಲಹೆ

ಹಾಸನ:-ಕೋವಿಡ್ -19ಮರಣ ಪ್ರಮಾಣವನ್ನು ಸಂಪೂರ್ಣವಾಗಿ ನಿಯಂತ್ರಿಸಿ ಹೆಚ್ಚಿನ ಕಾಳಜಿಯೊಂದಿಗೆ ಸೂಕ್ತ ಚಿಕಿತ್ಸೆನೀಡಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀರಾಮುಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ಇಂದು ವಿಡಿಯೋ ಸಂವಾದ ನಡೆಸಿದ ಅವರು ಸದ್ಯ ಕೆಲಸ ನಿರ್ವಹಿಸುತ್ತಿರುವ ಎಲ್ಲವೈದ್ಯರ ಕರ್ತವ್ಯವೂ ಅಭಿನಂದನಾರ್ಹ ಆದರೆ ಕಾರಣ ಸಾವಿನ ಸಂಖ್ಯೆ ಕಡಿಮೆ ಮಾಡಲು ಇನ್ನಷ್ಟುಶ್ರಮವಹಿಸಿ ಎಂದರು.

ಹೇಮಾವತಿ ಜಲಾಶಯದ ನೀರಿನ ಮಟ್ಟ

ಸಂಪಾದಕರು ಹರೀಶ್ ಹೆಚ್ ಆರ್ ಕೋಟೆ ಹೇಮಾವತಿ ಜಲಾಶಯದ ನೀರಿನ ಮಟ್ಟ ಹಾಸನ ಸೆ.10(ಕರ್ನಾಟಕ ವಾರ್ತೆ): HEMAVATHI RESERVOIR Dt- 10-09-2020 6.00 AM Max Levl: 2922.00 ft Today's lvl :2919.75 ( 2921.48 )ft, Max Cap: 37.103 TMC Today's cap: 34.93 ( 36.60 ) Tmc Live cap : 30.56 ( 32.22 )Tmc Inflow: 2364 ( 21060 )Cus, Outflow River: 1000 ( 16600 ) cus. Canals- LBC : 3200 (3500) cus, RBC : 300(300) Cus, HRBHLC: 600(600) Cus, Total out flow : 5100 ( 21000 ) cus note: corresponding last year readings are shown in bracket.

ಹೋದೋರೆಲ್ಲಾ ಒಳ್ಳೆಯವರು-ಕೋಟೆ ಕಾಲಂ

       ಸಂಪಾದಕರು ಹಾಗೂ ಲೇಖಕರು               ಹರೀಶ್ ಹೆಚ್ ಆರ್                     ಕೋಟೆ.                          ಬೇಲೂರು ಕೃಷ್ಣಮೂರ್ತಿ                  ಆರ್. ಕೆ .ಸ್ವರೂಪ್ ಹೋದೋರೆಲ್ಲಾ ಒಳ್ಳೆಯವರು....             ಹರೀಶ್ ಹೆಚ್ ಆರ್                   ಕೋಟೆ  ಇಬ್ಬರ ಸಾವು ಅದರಲ್ಲಿಯೂ ಒಂದುದಿನದ ಅಂತರದಲ್ಲಿ ನಡೆದ ಮರಣಗಳು ವೈಯಕ್ತಿಕ ವಾಗಿ ನನ್ನನ್ನು ಘಾಸಿಗೊಳಿಸಿದ್ದು ಸುಳ್ಳಲ್ಲಾ ಒಂದು ಸಮಾಜಸೇವಕ ನಿರೂಪಕ ಆರ್.ಕೆ.ಸ್ವರೂಪ್ ಅವರದ್ದಾದರೆ ಮತ್ತೊಂದು ಅವರ ಸಾವಿನ ಮಾರನೆಯ ದಿವಸವೇ ಇಹಲೋಕ ತ್ಯಜಿಸಿದ ಶತನಾಟಕಗಳ ಸರದಾರ ಬೇಲೂರು ಕ್ರೃಷ್ಣ ಮೂರ್ತಿ ಅವರದ್ದು ಇಬ್ಬರ ಕಾರ್ಯಕ್ಷೇತ್ರವಾಗಲಿ ಸ್ವಭಾವ ಗುಣವಾಗಲೀ ಯಾವುದು ಹೋಲಿಕೆ ಇಲ್ಲವಾದರೂ ಮಾನವೀಯ ಗುಣ ಹಾಗೂ ಯಾರಿಗೂ ಕೆಡುಕು ಬಯಸದ ಅವರ ಬದುಕು ನಿಜಕ್ಕೂ ಸ್ಮರಣೀಯ, ಮಿತ್ರ ಡಾ.ಉದಯರವಿ ಹಾಸನ ಜಿಲ್ಲಾ ಕನ್ನಡಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ದ್ದಾಗ ಬೇಲೂರು ಕ್ರೃಷ್ಣ ಮೂರ್ತಿ ಅವರೊಂದಿಗೆ ಸಾಕಷ್ಡು ಸಮಯ ಕಳೆಯುವ ಹಾಗೂ ಹಲವು ವಿಚಾರಗಳ ಬಗ್ಗೆ ಅವರೊಂದಿಗೆ ಚರ್ಚಿಸುವ ಅವಕಾಶ ಲಭ್ಯ ವಾಗಿತ್ತು, ಅದು ಹಾಗೆಯೇ ಬಹಳ ವರ್ಷ ಮುಂದುವರೆಯಿತು ವಯಸ್ಸಿನ ಅಂತರ ಬದಿಗಿಟ್ಟು ಅವರು ಹಾರಿಸುತ್ತಿದ್ದಾ ಹಾಸ್ಯಚಟಾಕಿಗಳು ಎಲ್ಲ ವಿಚಾರಗಳ ಬಗ್ಗೆ ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದ ರೀತಿ ಅಚ್ಚರಿ ಮೂಡಿಸುತ್ತಿತ್ತಲ್ಲದೆ

ಸಚಿವ ಶ್ರೀ ಬಿ. ಗೋಪಾಲಯ್ಯರವರಿಂದ ವಿವಿಧ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಉದ್ಘಾಟನೆ.

                                  ಸಂಪಾದಕರು                                ಹರೀಶ್ ಹೆಚ್ ಆರ್                        ಕೋಟೆ.  ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಆಹಾರ ನಾಗರೀಕ  ಸರಬರಾಜು ಮತ್ತು  ಗ್ರಾಹಕ ವ್ಯವಹಾರಗಳ ಸಚಿವರಾದ ಶ್ರೀ  ಬಿ.ಗೋಪಾಲಯ್ಯ ಅವರು  ಚನ್ನರಾಯಪಟ್ಟಣಲ್ಲಿಂದು  ರೂ   2148 ಲಕ್ಷ ಮೊತ್ತದಲ್ಲಿ ತಾಲ್ಲೂಕಿನ ವಿವಿಧೆಡೆ  ನಡೆಯುತ್ತಿರುವ 17 ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯನ್ನು ನೆರವೇರಿಸಿದರು,ಶಾಸಕರಾದ ಶ್ರೀಯುತ ಸಿ ಎನ್ ಬಾಲಕ್ರೃಷ್ಣರವರು ಉಪಸ್ಥಿತರಿದ್ದರು.

ಹೇಮಾವತಿ ಜಲಾಶಯದ ನೀರಿನ ಮಟ್ಟ

                 ಸಂಪಾದಕರು                ಹರೀಶ್ ಹೆಚ್ ಆರ್                        ಕೋಟೆ  ಹೇಮಾವತಿ ಜಲಾಶಯದ ನೀರಿನ ಮಟ್ಟ ಹಾಸನ ಸೆ.09(ಕರ್ನಾಟಕ ವಾರ್ತೆ): HEMAVATHI RESERVOIR Dt- 09-09-2020 6.00 AM Max Levl: 2922.00 ft Today's lvl :2920.01 ( 2921.48 )ft, Max Cap: 37.103 TMC Today's cap: 35.17 ( 36.60 ) Tmc Live cap : 30.80 ( 32.22 )Tmc Inflow: 2250 ( 23460 )Cus, Outflow River: 1000 ( 19000 ) cus. Canals- LBC : 3200 (3500) cus, RBC : 300(300) Cus, HRBHLC: 600(600) Cus, Total out flow : 5100 ( 23400 ) cus note: corresponding last year readings are shown in bracket.

ಹಾಸನ ಜಿಲ್ಲೆಯ ಕೋವಿಡ್ -19 ವರದಿ. 08/09/2020 ಹಾಸನ ಜಿಲ್ಲೆಯಲ್ಲಿಂದು 220 ಜನ ಕೋವಿಡ್ -19 ಸೋಂಕಿತರ ಪತ್ತೆ. 314 ಜನ ಗುಣಮುಖರಾಗಿ ಬಿಡುಗಡೆಯಾದರು. 5 ಜನ ಸಾವನ್ನಪ್ಪಿದರು. 53 ಜನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

                      ಸಂಪಾದಕರು              ಹರೀಶ್ ಹೆಚ್ ಆರ್                      ಕೋಟೆ  ಹಾಸನ ಜಿಲ್ಲೆಯ ಕೋವಿಡ್ -19 ವರದಿ.  08/09/2020   ಹಾಸನ  ಜಿಲ್ಲೆಯಲ್ಲಿಂದು 220 ಜನ ಕೋವಿಡ್ -19 ಸೋಂಕಿತರ ಪತ್ತೆ.  314 ಜನ ಗುಣಮುಖರಾಗಿ ಬಿಡುಗಡೆಯಾದರು.  5 ಜನ ಸಾವನ್ನಪ್ಪಿದರು.  53 ಜನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶತನಾಟಕ ಸಾರ್ವಭೌಮ ಬೇಲೂರು ಕೃಷ್ಣಮೂರ್ತಿ ಇನ್ನಿಲ್ಲ.

ಸಂಪಾದಕರು  ಹರೀಶ್ ಹೆಚ್ ಆರ್  ಕೋಟೆ  *ಶತನಾಟಕ* *ಸಾರ್ವಭೌಮ ,ಕಾದಂಬರಿಕಾರರು* *,ವಿಚಾರವಾದಿಗಳು,ಸಿನಿಮಾ* *ನಿರ್ದೇಶಕರು ,* *ನಿರ್ಮಾಪಕರು,ಕರ್ನಾಟಕ* *ರಾಜ್ಯೋತ್ಸವ ಪ್ರಶಸ್ತಿ* *ಪುರಸ್ಕೃತರು, ಅನೇಕ ರಾಜ್ಯ* *ಮಟ್ಟದ* *ಪ್ರಶಸ್ತಿಗಳು,ಪುರಸ್ಕಾರಗಳು* *ಸಂದಿವೆ.ನೇರ* *ನುಡಿಯ,* *ನೇರ ನಡೆಯ,ಬಿಚ್ಚುಮನಸ್ಸಿನ* *ಹೃದಯವಂತ ಸಾಹಿತಿ* , ತಮ್ಮ ದೇಹವನ್ನೇ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿಗೆ ದಾನ ಮಾಡಿದ ಪರಮಧಾನಿ,ತೊಂಭತ್ತು ವರ್ಷಗಳ ಸಾರ್ಥಕ ಬದುಕು ಬಾಳಿದ ಮಾನವತಾವಾದಿ, ನಮ್ಮ ನಡುವಿನ ಸಾಹಿತ್ಯ ಪರಂಪರೆಯ ಮಹಾ ಕೊಂಡಿ ಇನ್ನಿಲ್ಲ.  ಇಂದು ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಉಸಿರೆಳಿದಿದ್ದಾರೆ. ನಾಟಕ ಸಾರ್ವಭೌಮ - ಬೇಲೂರು ಕೃಷ್ಣಮೂರ್ತಿ ಪರಿಚಯ ಲೇಖನ-ಕೊಟ್ರೇಶ್.ಎಸ್. ಉಪ್ಪಾರ್. ನಾಟಕ ಎಂದಾಕ್ಷಣ ನಮಗೆ ದುತ್ತನೇ ನೆನಪಿಗೆ ಬರುವುದು ಬೇಲೂರು ಕೃಷ್ಣಮೂರ್ತಿಯವರು. ಕನ್ನಡ ಸಾರಸ್ವತ ಲೋಕದಲ್ಲಿ ‘ನಾಟಕ’ ಪ್ರಕಾರಕ್ಕೆ ಭದ್ರ ಅಡಿಪಾಯ ಹಾಕಿದವರಲ್ಲಿ ಬೇಲೂರು ಕೃಷ್ಣಮೂರ್ತಿಯವರು ಮುಂಚೂಣಿಯಲ್ಲಿ ನಿಲ್ಲುತ್ತಾರೆ ಎಂದರೆ ಅತಿಶಯೋಕ್ತಿಯಾಗಲಾರದು. ಇವರು 1931 ಆಗಸ್ಟ್ 08 ರಂದು ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಮಾದನಹಳ್ಳಿ ಗ್ರಾಮದ ಅನಂತರಾಮಯ್ಯ ಮತ್ತು ಲಕ್ಷ್ಮೀದೇವಮ್ಮ ಬ್ರಾಹ್ಮಣ ದಂಪತಿಗಳ ಪುತ್ರರಾಗಿ ಜನಿಸಿದರು. 110 ನಾಟಕಗಳು, 30 ಇತರ ಕೃತಿಗಳನ್ನು ಸೇರಿದಂತೆ ಸುಮಾರು 140ಕ್ಕೂ ಹೆಚ್ಚು ಕೃತಿರತ್ನಗಳನ್ನು ಕನ್ನಡ ಸಾರಸ್

ಹೇಮಾವತಿ ಜಲಾಶಯದ ನೀರಿನ ಮಟ್ಟ

ಸಂಪಾದಕರು :- ಹರೀಶ್ ಹೆಚ್ ಆರ್  ಕೋಟೆ   ಕರ್ನಾಟಕ  ವಾರ್ತೆ  08/09/2020.ಬೆಳಿಗ್ಗೆ 6.00 ರವರೆಗೆ  HEMAVATHI RESERVOIR  Dt- 08-09-2020  6.00 AM  Max Levl: 2922.00 ft Today's lvl :2920.27 ( 2921.48 )ft, Max Cap: 37.103 TMC  Today's cap: 35.43 ( 36.60 ) Tmc Live  cap : 31.05 ( 32.22 )Tmc   Inflow: 3257 ( 23841 )Cus, Outflow River: 1000 ( 21000 ) cus. Canals- LBC : 3200 (3450) cus, RBC :   300(300) Cus, HRBHLC: 600(600) Cus, Total out flow : 5100 ( 25350 ) cus   note: corresponding last year readings are shown in bracket.

ಹಾಸನ ಜಿಲ್ಲೆಯಲ್ಲಿಂದು 127 ಕೊರೊನಾ ಪಾಸೀಟೀವ್ ಧೃಡ,349 ಜನ ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆಯಾದರು. ಒಟ್ಟು 4 ಸಾವು.

ಹಾಸನ ಜಿಲ್ಲೆಯಲ್ಲಿಂದು 127 ಕೊರೊನಾ ಪಾಸೀಟೀವ್ ಧೃಡ, 349 ಜನ ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆಯಾದರು.  ಒಟ್ಟು 4 ಸಾವು.

ಸಮಾಜ ಸೇವಕರು,ನಿರೂಪಕರು ಹಾಸನದ ಶ್ರೀ ಎನ್ ಆರ್.ಕೃಷ್ಣ ಸ್ವರೂಪ್ (67 )ವರ್ಷ ಇಂದು ಬೆಳಿಗ್ಗೆ ಅನಾರೋಗ್ಯದ ನಿಮಿತ್ತ ನಿಧನರಾದರು.

ಸಮಾಜ ಸೇವಕರು ಹಾಸನದ ಶ್ರೀ ಎನ್ ಆರ್.ಕೃಷ್ಣ  ಸ್ವರೂಪ್ (67 )ವರ್ಷ ಇಂದು ಬೆಳಿಗ್ಗೆ ಅನಾರೋಗ್ಯದ ನಿಮಿತ್ತ ನಿಧನರಾಗಿರುತ್ತಾರೆ ಹಾಸನದಲ್ಲಿ ಹಲವಾರು ವರ್ಷ ಗಳಿಂದ ಸಭೆ ಸಮಾರಂಭಗಳಲ್ಲಿ ನಿರೂಪಣೆ ಸ್ವಾಗತ ಇತ್ಯಾದಿಗಳನ್ನು ಮಾಡಿಕೊಡುವ ಮೂಲಕ ಹೆಸರಾಗಿದ್ದ ಕನ್ನಡ ಹೋರಾಟ ಗಾರರೂ ಕಲಾವಿದರೂ ಆಗಿದ್ದ ಶ್ರೀಯುತ N.R.ಕೃಷ್ಣಸ್ವರೂಪ್ (ಸಂಗೀತ ಕಲಾವಿದ N R ಪ್ರಸಾದ್ ರವರ ಹಿರಿಯ ಸಹೋದರ)ರವರು ಇಂದು ಬೆಳಗ್ಗೆ ಅನಾರೋಗ್ಯ ದಿಂದ ವಿಧಿವಶರಾಗಿದ್ದಾರೆ. ಅವರ ಆತ್ಮಕ್ಕೆ  ಸದ್ಗತಿ ದೊರೆಯಲಿ. ಓಂ ಶಾಂತಿ. 🙏🙏🙏🙏

ಕಂಡಲ್ಲಿ ಕಾಲೇಜು -ಕೋಟೆ ಕಾಲಂ

ಕಂಡಲ್ಲಿ ಕಾಲೇಜು ಹರೀಶ್ ಹೆಚ್ ಆರ್  ಕೋಟೆ  ಒಂದು ಸಮಯವಿತ್ತು ದಿಢೀರನೆ ನಮ್ಮ ಜನರಿಗೆ ಆಂಗ್ಲ ವ್ಯಾಮೋಹ ಎಂದಿಗಿಂತಲೂ ಹೆಚ್ಚಾಗಿ ಹರಿಯತೊಡಗಿತು ಮಕ್ಕಳು ಮಮ್ಮಿ ಡ್ಯಾಡಿ ಎನ್ನಬೇಕು ತಪ್ಪು ತಪ್ಪಾಗಿ ಇಂಗ್ಲೀಷ್ ನಲ್ಲಿಯೇ ಮಾತನಾಡಬೇಕು ಅದರಲ್ಲಿಯೂ ಕೆಲವು ಹೆಸರಾಂತ ಕೆಜಿ ಶಾಲೆಗಳಿಗೆ ಹೋಗಬೇಕೆಂದು ಬಯಸಿದ ಪರಿಣಾಮ ನಾಯಿ ಕೊಡೆಗಳಂತೆ ಕಿಂಡರ್ ಗಾರ್ಟನ್ ಗಳು ಸಣ್ಣಸಣ್ಣ ಜಾಗಗಳಲ್ಲಿ ತಲೆ ಎತ್ತಿ ಪೋಷಕರಿಂದ ಸಾವಿರಾರು ರುಪಾಯಿ ಹಣ ಸುಲಿಗೆ ಮಾಡಿದವು, ಇತ್ತೀಚೆಗೆ ಸ್ವಲ್ಪಮಟ್ಟಿಗೆ ಅದಕ್ಕೆ ಕಡಿವಾಣ ಬಿದ್ದಿದ್ದು ಪೋಷಕರಿಗೆ ಬುದ್ದಿಬಂದಂತಿದೆ, ಆದರೆ ಮತ್ತೊಂದು ಬೆಳವಣಿಗೆಯಲ್ಲಿ ಕೆಜಿ ಶಾಲೆಗಳ ಸ್ಥಾನವನ್ನು ಪಿಯು ಕಾಲೇಜುಗಳು ತುಂಬಿದ್ದು ಅಗತ್ಯಕ್ಕಿಂತ ಹೆಚ್ಚಾಗಿ ಕಂಡಕಂಡಲ್ಲಿ ತಲೆ ಎತ್ತಿ ವೆ ಹಲವರುಷಗಳ ಹಿಂದೆ ಎಸ್ಸೆಸೆಲ್ಸಿ ನಂತರ ಪ್ರಥಮ ಪಿಯುಸಿ ಗೆ ಅದರಲ್ಲಿಯೂ ವಿಜ್ಞಾನ ವಿಷಯಕ್ಕೆ ಸೇರಬೇಕಾದರೆ ಪರ್ಸೆಂಟೇಜ್ ಇದ್ದರೂ ಕಾಲೇಜಿನ ಪ್ರವೇಶಕ್ಕೆ ಹರಸಾಹಸ ಪಡಬೇಕಾಗಿತ್ತು ಇದ್ದ ಬೆರಳೆಣಿಕೆಯಷ್ಟು ಕಾಲೇಜು ಗಳು ಉತ್ತಮ ಶಿಕ್ಷಣ ನೀಡುವಲ್ಲಿ ಸಫಲವಾಗಿದ್ದವು ಅದರೆ ಇತ್ತೀಚಿನ ವರ್ಷಗಳಲ್ಲಿ ಕಂಡ ಕಂಡಲ್ಲಿ ತಲೆ ಎತ್ತಿದ ಪಿಯುಕಾಲೇಜುಗಳು ದಿಢೀರ್ ಹಣಮಾಡುವ ಕಾಯಕವಾಗಿ ಪರಿಣಮಿಸಿದವು ಯಾವುದೋ ಕಿರಿದಾದ ಬಾಡಿಗೆ ಕಟ್ಟಡಗಳು ಗಾಳಿ ಬೆಳಕು ಬಾರದ ಕೊಠಡಿಗಳು ಸರಿಯಾದ ಲ್ಯಾಬ್ ಗಳಿಲ್ಲದ ಅವ್ಯವಸ್ಥೆ ಯಲ್ಲಿ ನಡೆಯುವ ಕಾಲೇಜುಗಳ ಸಂಖ್ಯೆ ಹ