.  
ನೇಕಾರ್ ಸನ್ಮಾನ್ ಯೋಜನೆ ಮೂಲಕ ಸಹಾಯಧನ: ಶ್ರೀಮಂತ ಬಾಬಾ ಸಾಹೇಬ ಪಾಟೀಲ
ಹಾಸನ.ಸೆ.10(ಕರ್ನಾಟಕ ವಾರ್ತೆ):- ಕೋವಿಡ್-19 ಲಾಕ್‍ಡೌನ್ ನಿಂದ ಕೈಮಗ್ಗ ಮತ್ತು ಜವಳಿ ನೇಕಾರರು ಸಕಷ್ಟದಲ್ಲಿದ್ದು, ಸಹಾಯ ಮಾಡುವ ಉದ್ದೇಶದಿಂದ ಮುಖ್ಯ ಮಂತ್ರಿಯವರೊಂದಿಗೆ ಮಾತನಾಡಿ ನೇಕಾರ್ ಸನ್ಮಾನ್ ಯೋಜನೆ ಮೂಲಕ ಪ್ರತಿ ವರ್ಷ 2,000 ರೂ ಸಹಾಯಧನ ನೀಡಲಾಗುತ್ತಿದೆ ಎಂದು ಕೈಮಗ್ಗ ಮತ್ತು ಜವಳಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವರಾದ ಶ್ರೀಮಂತ ಬಾಬಾ ಸಾಹೇಬ ಪಾಟೀಲ ಅವರು ತಿಳಿಸಿದ್ದಾರೆ.
 ಜಿಲ್ಲಾಧಿಕಾರಿಯವರ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈಗಾಗಲೇ 41 ಸಾವಿರ ಜನ ಅರ್ಜಿ ಸಲ್ಲಿಸಿದ್ದು 8.32 ಕೋಟಿ ಹಣವನ್ನು ನೇರವಾಗಿ ಅವರ ಖಾತೆಗೆ ಜಮಾ ಮಾಡಲಾಗಿದೆ ಹಾಗೂ ವಿದ್ಯುತ್ ಮಗ್ಗಗಳಲ್ಲಿಯೂ ಸಹ 1.25 ಲಕ್ಷ ಜನರಿದ್ದು, 40 ಸಾವಿರ ಜನರು 8.13 ಕೋಟಿ ಹಣವನ್ನು ಜಮಾ ಮಾಡಲಾಗಿದೆ ಎಂದರು.
 ಅರ್ಜಿ ಸಲ್ಲಿಕೆಯಲ್ಲಿ ಹೆಚ್ಚು ಬಾಕಿ ಉಳಿದಿರುವ ಜಿಲ್ಲೆಗೆ ಭೇಟಿ ನೀಡಿ ಅವರ ಸಮಸ್ಯೆಗಳನ್ನು ಆಲಿಸಿ ನೇಕಾರು ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಸರಳೀಕರಿಸಿ ನೇಕಾರರ ಖಾತೆಗೆ ನೇರವಾಗಿ ಜಮಾ ಆಗುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರಾದ ಶ್ರೀಮಂತ ಬಾಬಾ ಸಾಹೇಬ ಪಾಟೀಲ ಅವರು ತಿಳಿಸಿದರು.
 ಸಂಕಷ್ಟದ ಸಮಯದಲ್ಲಿ ನೇಕಾರರು ಸಾಲ ಸೌಲಭ್ಯ ಪಡೆದಿದ್ದು, 1 ಲಕ್ಷದ ವರೆಗೆ ಸಾಲ ಮನ್ನ ಮಾಡಲಾಗಿದ್ದು, ಶೇ. 80 ರಷ್ಟು ಮಂದಿ ಲಾಭ ಪಡೆದಿದ್ದಾರೆ ಹಾಗೆಯೇ ಕೋವಿಡ್ ಸಂದರ್ಭದಲ್ಲಿ ಹಲವಾರು ನೇಕಾರರು ಆತ್ಮಹತ್ಯೆ ಮಾಡಿಕೊಂಡಿದ್ದು, ಅಂತಹವರ ಕುಟುಂಬಕ್ಕೆ 2 ಲಕ್ಷ ರೂ. ಸಹಾಯಧನ ನೀಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
 ಅಲ್ಪ ಸಂಖ್ಯಾತರಲ್ಲಿ ಹೆಚ್ಚು ಮಂದಿ ಶಿಕ್ಷಣದಿಂದ ವಂಚಿತರಾಗಿದ್ದಾರೆ ಅವರಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಿದರೆ ಭೌಧ್ಧಿಕವಾಗಿ ಹಾಗೂ ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಾರೆ. ಹಾಗಾಗಿ ಅವರಿಗಾಗಿ ಎಲ್ಲಾ ಜಿಲ್ಲೆಗಳಲ್ಲಿಯೂ ಐ.ಟಿ.ಐ ಕಾಲೇಜು ಮತ್ತು ಒಂದು ವಿಭಾಗಕ್ಕೆ ಒಂದು ಪಾಲಿಟೆಕ್ನಿಕ್ ಕಾಲೇಜು ಸ್ಥಾಪಿಸುವ ಯೋಜನೆ ರೂಪಿಸಲಾಗಿದೆ ಎಂದು ಶ್ರೀಮಂತ ಬಾಬಾ ಸಾಹೇಬ ಪಾಟೀಲ ಅವರು ತಿಳಿಸಿದರು.
 ಜಿಲ್ಲೆಯಲ್ಲಿ ಗಾರ್ಮೆಂಟ್ಸ್‍ಗಳು ಇರುವುದರಿಂದ ಟೆಕ್ಸ್‍ಟೈಲ್ ಉದ್ಯಮಗಳು ಕಡಿಮೆಇವೆ ಹಾಗಾಗಿ ಜಿಲ್ಲೆಯಲ್ಲಿ ಹೊಸ ಯುನಿಟ್ ಸ್ಥಾಪಿಸಲು ಮೆಗಾ ಪ್ರೋಜೆಕ್ಟ್ ಬರಬೇಕು ಎಂದು ಸಚಿವರು ಹೇಳಿದರು.
*************
ಸಂಪಾದಕರು
ಹರೀಶ್ ಹೆಚ್ ಆರ್ 
ಕೋಟೆ 
- 
ಬಂಧುಗಳೇ, ಪ್ರತಿಯೊಂದು ಜನರು ನೆಮ್ಮದಿಯಿಂದ ಬದುಕಲು ಇಷ್ಟಪಡುತ್ತಾರೆ, ಆದರೂ ಹಲವಾರು ಸಮಸ್ಯೆಗಳಿಂದ ಬಳಲುತ್ತಿದ್ದಾರೆ, ಅದರಲ್ಲಿ  ಮುಖ್ಯ ಸಮಸ್ಯೆಗಳು ಅಂದರೆ ಆರೋಗ್ಯ ಮತ್ತು ಹಣಕಾಸು ಮತ್ತು  ಉದ್ಯೋಗ ಭದ್ರತೆ. ನಮ್ಮಲ್ಲಿ ಮೇಲ್ಕಂಡ  ಸಮಸ್ಯೆಗಳಿಗೆ ಸಮಂಜಸವಾದ ಪರಿಹಾರವಿದೆ , ನೀವು ಆತಂಕ ಪಡುವ ಅಗತ್ಯವಿಲ್ಲ, ಬನ್ನಿ ನಮ್ಮೂಡನೆ ಸೇರಿರಿ, ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳರಿ.   ನಾವು ಸಂವಹನ ಮಾಡಲು ಅಂತರ್ಜಾಲ ಮತ್ತು ನೇರ ಭೇಟಿ ಕಾರ್ಯಕ್ರಮ ಮೂಲಕ  ಕೆಲವೊಂದು ಮಾರ್ಗದರ್ಶನಗಳನ್ನು ನೀಡುತ್ತೇವೆ, ಅದಕ್ಕಾಗಿ ನೀವು ನಿಮ್ಮ ವಾಟ್ಸಾಪ್ ಸಂಖ್ಯೆಯನ್ನು ನಮಗೆ ಕಳುಹಿಸಿದರೆ, ಮಾರ್ಗದರ್ಶನ ಅವಕಾಶ ನಿಮಗೆ ಲಭಿಸುತ್ತದೆ.             

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Vimarsha.info