ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜನವರಿ, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ವಿಮರ್ಶಾ -ದಿನ ಸುದ್ದಿ

#ವಿಮರ್ಶಾ -ದಿನ ಸುದ್ದಿ  ವಿಮರ್ಶಾ -vimarsha ಬಸ್ ಪಾಸ್ ನವೀಕರಣಕ್ಕೆ ಅರ್ಜಿ ಆಹ್ವಾನ ಹಾಸನ . ( ಕರ್ನಾಟಕ ವಾರ್ತೆ):- ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ 06 ಸೇವೆಗಳನ್ನು (ವಿದ್ಯಾರ್ಥಿ ಉಚಿತ/ರಿಯಾಯಿತಿ ಬಸ್ ಪಾಸ್ ವಿಕಲಚೇತನರ ರಿಯಾಯಿತಿ ಬಸ್‍ಪಾಸ್, ಅಂಧರ ಉಚಿತ ಬಸ್‍ಪಾಸ್, ಸ್ವಾತಂತ್ರ್ಯ ಹೋರಾಟಗಾರರ ಬಸ್‍ಪಾಸ್, ಸ್ವಾತಂತ್ರ್ಯ ಹೋರಾಟಗಾರರ ಪತ್ನಿ/ವಿಧವಾ ಪತ್ನಿಯರ ಉಚಿತ ಕೂಪನ್ ಪಡೆಯಲು ಮತ್ತು ಅಪಘಾತ ಪರಿಹಾರ ನಿಧಿಗಾಗಿ) ಸೇವಾಸಿಂಧು ಪೋರ್ಟಲ್‍ನಲ್ಲಿ ಕಡ್ಡಾಯವಾಗಿ ಆನ್‍ಲೈನ್ ವ್ಯವಸ್ಥೆಯಡಿ ನಿರ್ವಹಿಸಲಾಗುತ್ತಿದೆ.           ವಿಕಲಚೇತನರ ರಿಯಾಯಿತಿ ದರದ ಬಸ್ ಪಾಸ್ ವಿತರಣೆ ಮಾಡಬೇಕಾಗಿರುವುದರಿಂದ ಫಲಾನುಭವಿಗಳು ನವೀಕರಿಸಿಕೊಳ್ಳಲು ಮತ್ತು ಹೊಸ ಬಸ್‍ಪಾಸ್‍ಗಳನ್ನು ಪಡೆದುಕೊಳ್ಳಲು ಸೇವಾಸಿಂದು https://serviceonline.gov.in/karnataka   ನಲ್ಲಿ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.         ಸದರಿ ವಿಕಲಚೇತನ ಫಲಾನುಭವಿಗಳು ಫೆ.28ರ ಒಳಗಾಗಿ ನವೀಕರಣ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿರುತ್ತದೆ. ಫೆ 28ರ ನಂತರ ವಿಕಲಚೇತನರ ಬಸ್‍ಪಾಸ್ ನವೀಕರಣಕ್ಕೆ ಅವಕಾಶ ಇರುವುದಿಲ್ಲ. ಆನ್‍ಲೈನ್‍ನಲ್ಲಿ ಸಂಬಂಧಪಟ್ಟ ದಾಖಲೆಗಳನ್ನು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಯವರಿಂದ ದೃಢೀಕರಿಸಿದ ವಿಕಲಚೇತನರ ಗುರುತಿನ ಚೀಟಿ ಅಥವಾ ಯು.ಜಿ.ಐ.ಡಿ.ಕಾರ್ಡ್ ಮತದಾರರ ಚೀಟಿ/ಆಧಾರ್ ಕಾರ್ಡ್/ರೇಷನ್ ಕಾರ್ಡ್, ಇತ್ತೀಚಿನ ಭಾವ ಚಿತ್ರ

ಬಿಲ್ಡರ್ಸ್ ಗಳು ಸರ್ಕಾರಿ ಯೋಜನೆಗಳಲ್ಲಿ ಸಕ್ರೀಯವಾಗಿ ತೊಡಗಲಿ.- ಸಚಿವ ಕೆ ಗೋಪಾಲಯ್ಯ

ಬಿಲ್ಡರ್ಸ್‍ಗಳು ಸರ್ಕಾರದ ಯೋಜನೆಗಳಲ್ಲಿ ಸಕ್ರೀಯವಾಗಿ ತೊಡಗಲಿ: ಸಚಿವ ಕೆ. ಗೋಪಾಲಯ್ಯ (ಕರ್ನಾಟಕ ವಾರ್ತೆ ):  ಜಿಲ್ಲೆಯ ಬಿಲ್ಡರ್ಸ್ ಗಳು ಸರ್ಕಾರದ ವಸತಿ ಯೋಜನೆಗಳ ಅನುಷ್ಠಾನದಲ್ಲಿ ತೊಡಗಿ ಬಡವರಿಗೆ  ಉತ್ತಮ ಗುಣಮಟ್ಟದ ಮನೆಗಳನ್ನು  ನಿರ್ಮಾಣಮಾಡಿ ತಮ್ಮ  ಆರ್ಥಿಕತೆಯನ್ನು  ಚುರುಕುಗೊಳಿಸಿಕೊಳ್ಳಿ  ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಆಹಾರ, ನಾಗರಿಕ ಸರಬರಾಜು ಗ್ರಾಹಕರ ವ್ಯವಹಾರಗಳ ಸಚಿವರಾದ ಕೆ.ಗೋಪಾಲಯ್ಯ ರವರು ಕರೆ ನೀಡಿದ್ದಾರೆ.       ನಗರದ ಜ್ಞಾನಕ್ಷಿ ಸಮುದಾಯ ಭವನದಲ್ಲಿ ಬಿಲ್ಡ್‍ರ್ಸ್  ಅಸೊಸಿಯೇಷನ್ ಆಫ್ ಇಂಡಿಯಾ ವತಿಯಿಂದ ಏರ್ಪಡಿಸಿದ್ದ  ಕಟ್ಟಡ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.    ಕೋವಿಡ್ 19 ಹಿನ್ನೆಯಲ್ಲಿ ದೇಶದ ಎಲ್ಲಾ ವಲಯದಲ್ಲಿ ಅಭಿವೃದ್ದಿ ಕುಂಠಿತವಾಗಿತ್ತು ಇಂತಹ ಪಿರಿಸ್ಥಿಯಲ್ಲಿ  ಬಿಲ್ಡರ್ಸ್ ಮತ್ತು ಕೈಗಾರಿಕೋದ್ಯಮಿಗಳು  ಸರ್ಕಾರಿ ವಲಯದ ಕಟ್ಟಡ ಮತ್ತಿತರ ನಿರ್ಮಾಣ  ಯೋಜನೆಗಳಲ್ಲಿ ಸಕ್ರೀಯವಾಗಿ ತೊಡಗುವ ಪರಿಸ್ಥಿತಿ ಸುಧಾರಣೆ ಮಾಡಲು ಮೂಲಕ ಪ್ರಯತ್ನಿಸಿ ಎಂದು ಹೇಳಿದರು.      ಕೇಂದ್ರ ಸರ್ಕಾರದ ಆತ್ಮ ನಿರ್ಭರ ಭಾರತಿ  ಯೋಜನೆ ಮೂಲಕ ಸಂಕಷ್ಠದಲ್ಲಿರುವವರ  ಶ್ರೇಯಸ್ಸಿಗೆ ನೆರವಾಗಲಾಗುತ್ತದೆ ಅದೇ ರೀತಿ ರಾಜ್ಯ ಸರ್ಕಾರವೂ  ಹಲವು ಯೋಜನೆಗಳ ಮೂಲಕ ಸಂಕಷ್ಠ ಪರಿಹಾರಕ್ಕೆ ಮುಂದಾಗಿದೆ ಎಂದು  ಸಚಿವರು ಹೇಳಿದರು. ಮುಂದಿನ

ಹಾಸನದ ಶ್ರೀ ಗ್ಯಾರಂಟಿ ರಾಮಣ್ಣನವರಿಗೆ ಜಾನಪದ ಅಕಾಡೆಮಿ ಪ್ರಶಸ್ತಿ.

ಗ್ಯಾರಂಟಿ ರಾಮಣ್ಣ ಅವರಿಗೆ ಜಾನಪದ ಅಕಾಡೆಮಿ ಪ್ರಶಸ್ತಿ. ಹಾಸನ  ( ಕರ್ನಾಟಕ ವಾರ್ತೆ) ಹಾಸನ ಜಿಲ್ಲೆಯ ಹಿರಿಯ ಜಾನಪದ  ಕಲಾವಿದರಾದ ಗ್ಯಾರಂಟಿ ರಾಮಣ್ಣ ಅವರು ಈ ಬಾರಿಯ ಜಾನಪದ ಅಕಾಡಮಿ ಪ್ರಶಸ್ತಿಗೆ  ಪಾತ್ರರಾಗಿದ್ದಾರೆ ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ  ಇಂದು  ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರಾದ ಮಾತಾ ಬಿ.ಮಂಜಮ್ಮ ಜೋಗತಿ ಅವರು ಪತ್ರಿಕಾಗೋಷ್ಠಿ ನಡೆಸಿ 2020 ನೇ ಸಾಲಿನಲ್ಲಿ ಪ್ರಶಸ್ತಿಗೆ ಆಯ್ಕೆಯಾಗಿರುವ 30 ಜಿಲ್ಲೆಗಳ ಹಿರಿಯ ಜಾನಪದ  ಕಲಾವಿದರು ಹಾಗೂ ಇಬ್ಬರು ಜಾನಪದತಜ್ಞರ ಪಟ್ಟಿಯನ್ನು ಪ್ರಕಟಿಸಿದರು. ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ,ಅಕಾಡೆಮಿಯ ಸದಸ್ಯರಾದ ಸಿ.ಎಂ.ನರಸಿಂಹ ಮೂರ್ತಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತಿ.

ನಮ್ಮ ಪರಂಪರೆ ಭಾಗವೇ ನಮ್ಮ ಆಚರಣೆಯಾಗಲಿ...ಡ್ಯಾನಿ ಪಿರೇರಾ

ನಮ್ಮ ಪರಂಪರೆಯ ಭಾಗವೇ ನಮ್ಮ ಆಚರಣೆಯಾಗಲಿ..                    ಲೇಖಕರು  :-                ಡ್ಯಾನಿ  ಪಿರೇರಾ                           #ಡ್ಯಾನಿ ಪಿರೇರಾ-ಕಾಲಂ ನಾನು ಮೂಲತಃ religious ಅಲ್ಲ, ನನ್ನ ದೇಶದ ಧಾರ್ಮಿಕ ಪರಂಪರೆಯ ಬಗ್ಗೆ  ಮಾತ್ರ ಗೌರವ ಹೊಂದಿರುವವನು. ಹಾಗಾಗಿ ಎಲ್ಲರ ನಂಬಿಕೆಯ ಬಗ್ಗೆ ಗೌರವ ಭಾವವಿದೆ. ವಿಷಯ ಇಷ್ಟೇ.  ಪಾಶ್ಚಾತ್ಯ ಮಾನಸೀಕತೆಯ ಹೊಸವರ್ಷದ ಮೊದಲ ದಿನ ಮುಕ್ತಾಯಗೊಂಡಿದೆ. ವಾಸ್ತವವಾಗಿ ಇದು ಕ್ರೈಸ್ತವರ್ಷಾಚರಣೆ ಕ್ಯಾಲೆಂಡರ್ ಬದಲಾಗುತ್ತದೆ ಮತ್ತೇನಲ್ಲ.  ಇರಲಿ,  ಡಿಸೆಂಬರ್ 31 ರ ಆ ರಾತ್ರಿ ಆ ಮತಾನುಯಾಯಿಗಳು ಚರ್ಚ್ ಗೆ ತೆರಳುತ್ತಾರೆ ಅವರು ನಂಬಿದ ಕ್ರಿಸ್ತನ ಆರಾಧನೆ ಮಾಡುತ್ತಾರೆ. ಸಾಧ್ಯವಾದರೆ ಚರ್ಚ್ ನಲ್ಲಿ ಕೇಕ್ ಹಂಚಿ ತಿಂದು ಸಂಭ್ರಮಿಸಿ,  ವಾಪಸ್ ಮನೆಗೆ ಬಂದು ಬಹುತೇಕ ಜನ ತೆಪ್ಪಗೆ ಮಲಗುತ್ತಾರೆ. ಅಲ್ಲಿಗೆ ಅವರ ಹೊಸ ವರ್ಷಾಚರಣೆ ಅವರು ನಂಬಿದ ದೈವದ ಆರಾಧನೆಯ ಮೂಲಕ ಮುಕ್ತಾಯವಾಗುತ್ತದೆ. ಆದರೆ ಸಮಸ್ಯೆ ಇರುವುದು ಹಿಂದುಗಳಲ್ಲಿ. ಅವರಿಗೆ ಯಾವ ಆ್ಯಂಗಲ್ ನಲ್ಲೂ ಸಂಬಂಧಿಸದ ಆಚರಣೆಯನ್ನು ಊರ ಹಬ್ಬದಂತೆ ಆಚರಿಸಲು ನಿಲ್ಲುತ್ತಾರೆ.  ಅದೊಂದು ಗೌರಿ ಗಣೇಶ,ಯುಗಾದಿ, ದೀಪಾವಳಿಯ ಭಕ್ತಿ ಶ್ರದ್ಧೆಯ ಭಾಗವಾಗಿದ್ದರೆ, ಅದೊಂದು ಅತ್ಯಂತ ಸಂಭ್ರಮದ ವಿಚಾರ ಎನ್ನಬಹುದಿತ್ತು.  ಈಗದು fashion ಎನ್ನುವ ರೀತಿಯಲ್ಲಿ  ಮನೆಯ ಹಬ್ಬದಂತೆ ಆಗಿದೆ. ಮನೆಯಲ್ಲಿ ಆಗತಾನೆ ಮದುವೆಯಾಗಿ ಬಂದ ಗೃಹಿಣಿಯಾದಿಯಾಗಿ ಹಲ್ಲ

ವಿಮರ್ಶಾ -ಸುದ್ದಿ ನೋಟ

ನೂತನ ಉಪ ಅರಣ್ಯಾಧಿಕಾರಿ ಅಧಿಕಾರ ಸ್ವೀಕಾರ ಹಾಸನ.  (ಕರ್ನಾಟಕ ವಾರ್ತೆ):-  ಜಿಲ್ಲೆಯ ನೂತನ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಬಸವರಾಜು ಅವರು ಅಧಿಕಾರ ಸ್ವೀಕರಿಸಿದ್ದಾರೆ. ಜ1 ರಂದು ಸಂಜೆ ಅಧಿಕಾರ ವಹಿಸಿಕೊಂಡ ಕೆ.ಎನ್.ಬಸವರಾಜು ರವರು ಜ 2 ರಂದು  ಪರಿಸರ ಪೋಷಕರು, ಪ್ರಗತಿಪರ ಚಿಂತಕರುಗಳೊಂದಿಗೆ  ಜಿಲ್ಲೆಯ ಅರಣ್ಯ ಹಾಗೂ, ಸಾಮಾಜಿಕ ಸಮಸ್ಯೆಗಳನ್ನು ಕುರಿತು ಚರ್ಚಿಸಿ ಮಾಹಿತಿ ಪಡೆದರು.     ಅರಣ್ಯ ಭವನದಲ್ಲಿಂದು  ಹೆಮ್ಮಿಗೆ  ಮೋಹನ್ ,ಅರ್.ಪಿ ವೆಂಕಟೇಶ್ ಮೂರ್ತಿ, ಕಿಶೋರ್ ಕುಮಾರ್ ಮತ್ತಿತರರಿಂದ ಉಪ ಅರಣ್ಯ ಸಂರಕ್ಷಣಾಧಿಕಾüರಿಯವರು  ವಿವರ ಪಡೆದರು.      ಜಿಲ್ಲೆಯಲ್ಲಿ ಹೆಚ್ಚಾಗಿರುವ ಕಾಡಾನೆ, ಚಿರತೆ ಕಾಡು ಕೋಣ ,ಕಪಿಗಳ ಹಾಗೂ ಮತ್ತಿತರ ವನ್ಯ ಜೀವಿಗಳ ಹಾವಳಿ ಬಗ್ಗೆ ವಿವರಿಸಿದ ಪ್ರಗತಿಪರರು ರೈತರಿಗೆ  ಅಯಾಯ ವರ್ಷದ ಬೆಳೆ ಹಾನಿ ಪರಿಹಾರ ಆ ವರ್ಷವೇ ದೊರೆಯುವಂತಾಗಬೇಕು ವೈಜ್ಞಾನಿಕ ದರ ನಿಗಧಿಯಾಗಬೇಕು ಎಂದು  ಮನವಿ ಮಾಡಿದರು.    ಆಲೂರು ಸಕಲೇಶಪುರ ಭಾಗದ ಆನೆ ಹಾವಳಿ ನಿಯಂತ್ರಣಕ್ಕೆ ಆನೆ ಕಾರಿಡಾರ್ ಸ್ಥಾಪನೆಗೆ ಪ್ರಸ್ತಾವನೆ ಇದ್ದು, ಅದರ ಜಾರಿಯ ಬಗ್ಗೆ ಗಮನಹರಿಸುವಂತೆ ಮನವಿ ಮಾಡಿದರು.         ಶೀಘ್ರದಲ್ಲೆ ಬೆಳೆಗಾರರು ,ರೈತ ಪ್ರಮುಖರ ಸಭೆ ನಡೆಸಿ ಮಾಹಿತಿ ಪಡೆದು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಪ್ರಯತ್ನಿಸುವುದಾಗಿ ಅವರು ಹೇಳಿದರು. ಹಂತಹಂತವಾಗಿ ಇಲಾಖೆಗೆ ಸಂಭಂದಿಸಿದ ಸಮಸ್ಯೆಯನ್ನು ಬಗೆಹರಿಸಲಾಗುವು

ವಿಮರ್ಶಾ -ಸುದ್ದಿ ನೋಟ

ವಿಮರ್ಶಾ -vimarsha ಉಚಿತವಾಗಿ ಹೊಲಿಗೆ ಯಂತ್ರ ನೀಡಲು ಅರ್ಜಿ ಆಹ್ವಾನ ಹಾಸನ  (ಕರ್ನಾಟಕ ವಾರ್ತೆ):  ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆವತಿಯಿಂದ ಶ್ರವಣದೋಷವುಳ್ಳ ವಿಕಲಚೇತನರಿಗೆ ಸ್ವಯಂ ಉದ್ಯೋಗಕ್ಕಾಗಿ ಹೊಲಿಗೆ ಯಂತ್ರವನ್ನು ಉಚಿತವಾಗಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.     ಶ್ರವಣದೋಷವುಳ್ಳ ವ್ಯಕ್ತಿಯು ಭಾರತದ ಪ್ರಜೆಯಾಗಿರಬೇಕು ಹಾಗೂ ಕರ್ನಾಟಕದಲ್ಲಿ ಕನಿಷ್ಟ ಹಿಂದಿನ 10 ವರ್ಷಗಳ ನಿವಾಸಿಯಾಗಿರಬೇಕು. ಕನಿಷ್ಠ ಎಸ್.ಎಸ್.ಎಲ್.ಸಿ ವರೆಗೆ ವ್ಯಾಸಂಗ ಮಾಡಿರಬೇಕು ಹಾಗೂ ವೃತ್ತಿಗೆ ಸಂಬಂಧಿಸಿದಂತೆ ಪ್ರಮಾಣ ಪತ್ರ ಸಲ್ಲಿಸಬೇಕು. ಯೋಜನೆಯ ಸೌಲಭ್ಯ ಪಡೆಯಲು ಯಾವುದೇ ಆದಾಯ ಮಿತಿಯಿರುವುದಿಲ್ಲ.     ಈ ಯೋಜನೆಯಡಿ ಸೌಲಭ್ಯ ಪಡೆಯುವ ಶ್ರವಣದೋಷವುಳ್ಳ ಫಲಾನುಭವಿಗಳು ಬೇರೆ ಯಾವುದೇ ಮೂಲಗಳಿಂದ ಇದೇ ರೀತಿಯ ಸೌಲಭ್ಯ ಪಡೆದಿರಬಾರದು ಹಾಗೂ ಈ ಬಗ್ಗೆ ನೋಟರಿಯಿಂದ ದೃಢೀಕರಿಸಿದ ಪ್ರಮಾಣ ಪತ್ರ ಒದಗಿಸತಕ್ಕದ್ದು. ವಿಕಲಚೇತನತೆಯ ಪ್ರಮಾಣ ಶೇ.40 ಅಥವಾ ಅದಕ್ಕಿಂತ ಹೆಚ್ಚಾಗಿರತಕ್ಕದ್ದು. ಕಡ್ಟಾಯವಾಗಿ ಸಂಬಂಧಪಟ್ಟ ತಹಸೀಲ್ದಾರರಿಂದ ಪಡೆದ ವಾಸಸ್ಥಳ ದೃಢೀಕರಣ ಪತ್ರ ನೀಡಬೇಕು.      ಈ ಯೋಜನೆಯಡಿ ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ಸೌಲಭ್ಯ ನೀಡಲಾಗುವುದು, ಸೌಲಭ್ಯ ಪಡೆದ ನಂತರ ಬೇರೆಯವರಿಗೆ ಹಸ್ತಾಂತರಿಸಬಾರದು/ಪರೆಭಾರೆ ಮಾಡಬಾರದು ಈ ಕುರಿತು ದೃಢೀಕರಣ ನೀಡುವಂತೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.     ಅರ್ಜಿಯನ್ನು ಅಗತ್ಯ ದ