ವಿಷಯಕ್ಕೆ ಹೋಗಿ

ವಿಮರ್ಶಾ -ಸುದ್ದಿ ನೋಟ

ನೂತನ ಉಪ ಅರಣ್ಯಾಧಿಕಾರಿ ಅಧಿಕಾರ ಸ್ವೀಕಾರ
ಹಾಸನ. 

(ಕರ್ನಾಟಕ ವಾರ್ತೆ):- 

ಜಿಲ್ಲೆಯ ನೂತನ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಬಸವರಾಜು ಅವರು ಅಧಿಕಾರ ಸ್ವೀಕರಿಸಿದ್ದಾರೆ. ಜ1 ರಂದು ಸಂಜೆ ಅಧಿಕಾರ ವಹಿಸಿಕೊಂಡ ಕೆ.ಎನ್.ಬಸವರಾಜು ರವರು ಜ 2 ರಂದು  ಪರಿಸರ ಪೋಷಕರು, ಪ್ರಗತಿಪರ ಚಿಂತಕರುಗಳೊಂದಿಗೆ  ಜಿಲ್ಲೆಯ ಅರಣ್ಯ ಹಾಗೂ, ಸಾಮಾಜಿಕ ಸಮಸ್ಯೆಗಳನ್ನು ಕುರಿತು ಚರ್ಚಿಸಿ ಮಾಹಿತಿ ಪಡೆದರು.

    ಅರಣ್ಯ ಭವನದಲ್ಲಿಂದು  ಹೆಮ್ಮಿಗೆ  ಮೋಹನ್ ,ಅರ್.ಪಿ ವೆಂಕಟೇಶ್ ಮೂರ್ತಿ, ಕಿಶೋರ್ ಕುಮಾರ್ ಮತ್ತಿತರರಿಂದ ಉಪ ಅರಣ್ಯ ಸಂರಕ್ಷಣಾಧಿಕಾüರಿಯವರು  ವಿವರ ಪಡೆದರು. 

    ಜಿಲ್ಲೆಯಲ್ಲಿ ಹೆಚ್ಚಾಗಿರುವ ಕಾಡಾನೆ, ಚಿರತೆ ಕಾಡು ಕೋಣ ,ಕಪಿಗಳ ಹಾಗೂ ಮತ್ತಿತರ ವನ್ಯ ಜೀವಿಗಳ ಹಾವಳಿ ಬಗ್ಗೆ ವಿವರಿಸಿದ ಪ್ರಗತಿಪರರು ರೈತರಿಗೆ  ಅಯಾಯ ವರ್ಷದ ಬೆಳೆ ಹಾನಿ ಪರಿಹಾರ ಆ ವರ್ಷವೇ ದೊರೆಯುವಂತಾಗಬೇಕು ವೈಜ್ಞಾನಿಕ ದರ ನಿಗಧಿಯಾಗಬೇಕು ಎಂದು  ಮನವಿ ಮಾಡಿದರು.

   ಆಲೂರು ಸಕಲೇಶಪುರ ಭಾಗದ ಆನೆ ಹಾವಳಿ ನಿಯಂತ್ರಣಕ್ಕೆ ಆನೆ ಕಾರಿಡಾರ್ ಸ್ಥಾಪನೆಗೆ ಪ್ರಸ್ತಾವನೆ ಇದ್ದು, ಅದರ ಜಾರಿಯ ಬಗ್ಗೆ ಗಮನಹರಿಸುವಂತೆ ಮನವಿ ಮಾಡಿದರು. 
   
   ಶೀಘ್ರದಲ್ಲೆ ಬೆಳೆಗಾರರು ,ರೈತ ಪ್ರಮುಖರ ಸಭೆ ನಡೆಸಿ ಮಾಹಿತಿ ಪಡೆದು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಪ್ರಯತ್ನಿಸುವುದಾಗಿ ಅವರು ಹೇಳಿದರು. ಹಂತಹಂತವಾಗಿ ಇಲಾಖೆಗೆ ಸಂಭಂದಿಸಿದ ಸಮಸ್ಯೆಯನ್ನು ಬಗೆಹರಿಸಲಾಗುವುದು ಹಾಗೂ ಹೆಚ್ಚಿನ ಮಟ್ಟದಲ್ಲಿ ಅರಣ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

  ಇದೇ ವೇಳೆ ಗೆಂಡೆ ಕಟ್ಟೆ ಅರಣ್ಯ ಅಭಿವೃದ್ಧಿ ,ಕೆರೆ ,ಉದ್ಯಾನಗಳನ್ನು ಅರಣ್ಯ ಅಭಿವೃದ್ಧಿ ಮತ್ತಿತರ ವಿಷಯಗಳ ಕುರಿvತು ಚರ್ಚೆ ನಡೆಯಿತು.  

      ಸಭೆಯಲ್ಲಿ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ  ಅನುಪಮಾ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಅಧಿಕಾರಿ ವಿನೋದ್ ಚಂದ್ರ, ಎ. ಸಿ.ಎಫ್ ಹರೀಶ್, ಹೊಳೆನರಸೀಪುರ, ಅರಕಲಗೂಡು, ಆಲೂರು ವಲಯ ಅರಣ್ಯ ಅಧಿಕಾರಿಗಳು ಹಾಗೂ ಮತ್ತಿತರರು ಹಾಜರಿದ್ದರು .
*******************************



ರಬಿ  ಬೆಳೆ ಸರ್ವೆ ಪೂರ್ಣಗೊಳಿಸಲು ಸೂಚನೆ
ಹಾಸನ 

(ಕರ್ನಾಟಕ ವಾರ್ತೆ):- 

ರಬಿ ಬೆಳೆ ಸಮೀಕ್ಷೆಯನ್ನು ಶೀಘ್ರವಾಗಿ ಮುಕ್ತಾಯಗೊಳಿಸಿ ಮಾಹಿತಿಯನ್ನು ಗಣಕೀಕರಣಗೊಳಿಸುವಂತೆ ಕಂದಾಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ಅಭಿವೃದ್ಧಿ ಆಯುಕ್ತರಾದ  ವಂದಿತ ಶರ್ಮ, ಕೃಷಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಜ್ ಕುಮಾರ್‍ಕತ್ರಿ, ಹಾಗೂ ಇ ಆಡಳಿತ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಜೀವ್ ಚಾವ್ಲರವರು ಜಿಲ್ಲೆಗಳಿಗೆ ಸೂಚನೆ ನೀಡಿದ್ದಾರೆ.
     ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಅವರು ಈಗಾಗಲೇ ಸರ್ವೆ ಕಾರ್ಯಕ್ಕೆ ಅಗತ್ಯ ಅಗತ್ಯ ಅನುದಾನ ಬಿಡುಗಡೆ ಮಾಡಲಾಗಿದ್ದು ನಿಗದಿತ ಆಪ್ ಬಳಸಿ ಜ.20ರೊಳಗೆ ಬೆಳೆ ಸಮಿಕ್ಷೆ ಸರ್ವೆ ಕಾರ್ಯ ಮುಕ್ತಾಯ ಗೊಳಿಸಿ ಜ.25ರೋಳಗೆ ಪುನರ್ ಪರಿಶೀಲಿಸಿ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದರು.
     ಈಗಾಗಲೇ ಬೆಳೆ ಕಟಾವು ಪ್ರಾರಂಭವಾಗಿರುವುದರಿಂದ ವೇಗವಾಗಿ ಸರ್ವೆ ಕಾರ್ಯ ಮುಕ್ತಾಯಗೊಳಿಸಬೇಕು ಇಲ್ಲದಿದ್ದರೆ ಬೆಳೆಯ ಬಗ್ಗೆ ನಿಖರ ಮಾಹಿತಿ ದೊರೆಯುವುದಿಲ್ಲ ಆಗಾಗಿ ಈ ಕಾರ್ಯವನ್ನು ಅತ್ಯಂತ ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದರು.
ಜಿಲ್ಲಾಧಿಕಾರಿ ಆರ್. ಗಿರೀಶ್ ಮಾತನಾಡಿ ಸಭೆಯಲ್ಲಿ ರಬಿ ಬೆಳೆ ಸಮೀಕ್ಷೆಯಲ್ಲಿ ಈಗಾಗಲೆ 684 ಸಿಬ್ಬಂದಿಗಳನ್ನು ತೆಗೆದುಕೊಳ್ಳಲಾಗಿದೆ ಹೆಚ್ಚುವರಿ ಸಿಬ್ಬಂದಿಗಳನ್ನು ಬಳಸಿಕೊಂಡು ತರಬೇತಿ ನೀಡಿ ಶೀಘ್ರ ಸರ್ವೆ ಕಾರ್ಯ ಮುಕ್ತಾಯಗೊಳಿಸಿ ಎಂದರು.
 ಸಭೆಯಲ್ಲಿ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕರಾದ ಯೋಗೆಶ್, ಹಾಸನದ ಕೃಷಿ ಇಲಾಖೆಯ ಉಪನಿರ್ದೇಶಕರಾದ ಮುನಿಗೌಡ, ಸಕಲೇಶಪುರದ ಕೃಷಿ ಇಲಾಖೆ ಉಪನಿರ್ದೇಶಕರಾದ ಸುಷ್ಮಾ ಹಾಗೂ ಮತ್ತಿತರರು ಅಧಿಕಾರಿಗಳು ಹಾಜರಿದ್ದರು.

*******************************

ಪರಿಶಿಷ್ಟ ಪಂಗಡ ಸಮುದಾಯದವರಿಂದ ನಿವೇಶನಕ್ಕೆ ಅರ್ಜಿ ಆಹ್ವಾನ

ಹಾಸನ 

(ಕರ್ನಾಟಕ ವಾರ್ತೆ): 

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ  2019-20 ಸಾಲಿನ ವಸತಿ ಮತ್ತು ನಿವೇಶನ ಯೋಜನೆಗಳಡಿ ವಸತಿ ಮತ್ತು ನಿವೇಶನ ಸೌಲಭ್ಯ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

     18ರಿಂದ 60 ವರ್ಷಗಳ ವಯೋಮಾನದ  ಪರಿಶಿಷ್ಟ ವರ್ಗದ ಅಲೆಮಾರಿ ಅರೆ ಅಲೆಮಾರಿ, ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಸಮುದಾಯಗಳ ಅರ್ಹ ಫಲಾಪೇಕ್ಷಿಗಳು ನಿಗಮದ ಜಿಲ್ಲಾ ಕಚೇರಿಯಿಂದ ಉಚಿತವಾಗಿ ಅರ್ಜಿಗಳನ್ನು ಪಡೆದು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಜ.25 ರೊಳಗೆ ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, 11 ಕ್ರಾಸ್, 1ನೇ ಮಹಡಿ, ಜನನಿ ಕಾಂಪ್ಲೆಕ್ಸ್ ಕೆ.ಆರ್.ಪುರಂ, ಹಾಸನ ಇವರಿಗೆ ಸಲ್ಲಿಸಬಹುದಾಗಿದೆ.
   ಹೆಚ್ಚಿನ ಮಾಹಿತಿಗಾಗಿ ದೂ. ಸಂಖ್ಯೆ 9008500474 ಗೆ ಸಂಪರ್ಕಿಸಬಹುದಾಗಿದೆ.

*******************************


ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ
ಹಾಸನ. 

(ಕರ್ನಾಟಕ ವಾರ್ತೆ):- 

ಬೇಲೂರು ತಾಲ್ಲೂಕಿನ ವಿವಿಧ ಅಂಗನವಾಡಿಗಳಲ್ಲಿ ಖಾಲಿ ಇರುವ ಮಿನಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಸಹಾಯಕಿಯರ ಸ್ಥಾನಗಳನ್ನು ಮೆರಿಟ್ ಆಧಾರದ ಮೇಲೆ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ  ಅರ್ಜಿ ಆಹ್ವಾನಿಸಲಾಗಿದೆ. 

   ಬೇಲೂರು ತಾಲ್ಲೂಕಿನ  ಲಕ್ಷ್ಮಿಪುರ ಅಂಗನವಾಡಿ ಕೇಂದ್ರದಲ್ಲಿ ಮಿನಿ ಅಂಗನವಾಡಿ ಕಾರ್ಯಕರ್ತೆ ಹುದ್ದೆ, ಘಟ್ಟದಹಳ್ಳಿ, ಶಿವನೇಹಳ್ಳಿ, ಹೊಸಮನೆ ಹಾಗೂ ಮಲ್ಲಿಕಾರ್ಜುನಪುರದ ಅಂಗನವಾಡಿ ಕೇಂದ್ರದಲ್ಲಿ ಅಂಗನವಾಡಿ ಸಹಾಯಕಿಯರ ಹುದ್ದೆ ಖಾಲಿ ಇರುತ್ತದೆ ಆಸಕ್ತ ಅಭ್ಯರ್ಥಿಗಳು ಆನ್ ಲೈನ್  ಮೂಲಕ ಜ.30 ರೊಳಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
    
     ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಮಾಲೂರು ಕಾಂಪ್ಲೆಕ್ಸ್, ಡಾ ಬಿ.ಆರ್.ಅಂಬೇಡ್ಕರ್ ವೃತ್ತ. ಬೇಲೂರು ದೂರವಾಣಿ ಸಂಖ್ಯೆ 08177- 222269 ಸಂಪರ್ಕಿಸಬಹುದಾಗಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ತಿಳಿಸಿದ್ದಾರೆ.

*******************************
ಕಾಣೆಯಾದವರ ಪತ್ತೆಗೆ ಮನವಿ
ಹಾಸನ 

(ಕರ್ನಾಟಕ ವಾರ್ತೆ):- 

ಅರಸೀಕೆರೆ ತಾಲ್ಲೂಕಿನ ಜಾವಗಲ್ ಕೋಳಗುಂದ ಗ್ರಾಮದ ಹುಚ್ಚಯ್ಯ ಎಂಬುವವರು ಮಾನಸಿಕ ರೋಗಿಯಾಗಿದ್ದು ರೋಗವನ್ನು  ಚಿಕಿತ್ಸೆ ಕೊಡಿಸಿದರು ಗುಣಮುಖರಾಗದೇ  ಅವರ ಮಗ ಮನೆಯಲ್ಲೇ ನೋಡಿಕೊಳ್ಳುತ್ತಿದ್ದು ನ.20 ರಂದು 2 ಗಂಟೆ ಸಮಯದಲ್ಲಿ ಊಟ ಮಾಡಿಕೊಂಡು ಆಚೆ ಹೋದವರು ರಾತ್ರಿಯಾದರೂ ಮನೆಗೆ ಬಾರದೇ ಇದ್ದಾಗ ಹುಚ್ಚಯ್ಯನವರ ಮಗ ಎಲ್ಲ ಊರುಗಳಲ್ಲಿ ಸಂಬಂಧಿಕರ ಮನೆಗಳಲ್ಲಿ ಹುಡುಕಿದರು ಪತ್ತೆಯಾಗದ ಕಾರಣ ತಡವಾಗಿ  ಜಾವಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿರುತ್ತಾರೆ .
      
    ಕಾಣೆಯಾದ ವ್ಯಕ್ತಿಯ ಹೆಸರು ಪುಲಿಗೇರಯ್ಯ ವಯಸ್ಸು 70 ವರ್ಷಗಳಾಗಿದ್ದು ಅರಸೀಕೆರೆ ತಾಲ್ಲೂಕಿನ ಜಾವಗಲ್ ಹೋಬಳಿಯ ಕೊಳಗುಂದ ಗ್ರಾಮದವರಾಗಿದ್ದಾರೆ  ಕೋಲುಮುಖ ಎಣ್ಣೆಗೆಂಪು ಬಣ್ಣ, 5.5 ಅಡಿ ಎತ್ತರ ಕಾಣೆಯಾದ ಸಮಯದಲ್ಲಿ ಬಿಳಿ ಪಂಚೆ ಬಿಳಿ  ಶರ್ಟ್ ಧರಿಸಿರುತ್ತಾರೆ. ಕನ್ನಡ ಭಾಷೆ ಮಾತನಾಡುತ್ತಾರೆ  ಈ ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಜಾವಗಲ್ ಪೊಲೀಸ್ ಠಾಣೆ 08174-271221, ಸಿಪಿಐ  ಅರಸೀಕೆರೆ 08174 232702,  ಎಸ್ ಡಿ ಪಿ ಓ ಹಾಗೂ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಕಚೇರಿ ದೂರವಾಣಿ ಸಂಖ್ಯೆ 08172-268410 ಮಾಹಿತಿಯನ್ನು ನೀಡಬಹುದಾಗಿದೆ.
****************************

           ಪ್ರಧಾನ ಸಂಪಾದಕರು :-
         ಹರೀಶ್ ಹೆಚ್ ಆರ್ ಕೋಟೆ 

            ಸುದ್ದಿ ಸಂಪಾದಕರು:-
          ನಾಗೇಂದ್ರ.ಹೆಚ್ .ಎನ್ 


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹಾಸನ ಜಿಲ್ಲೆಯಲ್ಲಿ ಸ್ವಯಂ ಉದ್ಯೋಗಾವಕಾಶಗಳು.

ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯಲ್ಲಿ ನೆಲೆಸಿರುವ ಗೃಹಿಣಿಯರು, ನಿವೃತ್ತ ಅಧಿಕಾರಿಗಳು /ನೌಕರರು ಮತ್ತು ನಿರುದ್ಯೋಗಿಗಳಿಗೆ ಆರ್ಥಿಕ ವಲಯದಲ್ಲಿ ಹೂಡಿಕೆ ಇಲ್ಲದೆ ವೃತ್ತಿ ಅವಕಾಶಗಳು / ವ್ಯಾಪಾರ ಅವಕಾಶಗಳು  ಪುರುಷ ಮತ್ತು  ಮಹಿಳೆಯರಿಗೆ   ವಯಸ್ಸಿನ ಮಿತಿ: - 25 ರಿಂದ 65 ವರ್ಷಗಳು.  ದಯವಿಟ್ಟು ನಿಮ್ಮ ವಿವರಗಳನ್ನು ಕೆಳಗಿನ ಇಮೇಲ್ ಐಡಿಗೆ ಕಳುಹಿಸಿ.  freelanceadvertisingthassan@gmail.com  ಅಥವಾ  ಸಂಪರ್ಕಿಸಿ  ವಾಟ್ಸಾಪ್ ಸಂದೇಶಗಳು ಮಾತ್ರ  7090899728  Career opportunities /business opportunities with out an investments in financial sector for housewives ,retired officials /employees and unemployed persons residing in Hassan district, Karnataka state India For both male and female. Age limit:- 25 to 65 years. Please send your details to below email id. freelanceadvertisingathassan@gmail.com Or  Contact  WhatsApp messages only 070908 99728

ಉತ್ತಮ ಫಲಿತಾಂಶ , ಹಣ ಉಳಿತಾಯ.

ನಾನು ನೆಟ್‌ಸರ್ಫ್ ಡೈರೆಕ್ಟ್‌ನೊಂದಿಗೆ ಕೆಲಸ ಮಾಡುತ್ತಿದ್ದೇನೆ. ನಾನು ನೆಟ್ಸರ್ಫ್ ಉತ್ಪನ್ನಗಳನ್ನು ನಿಯಮಿತವಾಗಿ ಬಳಸುತ್ತಿದ್ದೇನೆ. ನಾನು ನಿಮಗೆ ಈ ಉತ್ಪನ್ನಗಳನ್ನು ಬಲವಾಗಿ ಶಿಫಾರಸು ಮಾಡುತ್ತೇವೆ. 'NETSURF DIRECT' 5 ವಿವಿಧ ವಿಭಾಗಗಳಲ್ಲಿ 90 ಕ್ಕೂ ಹೆಚ್ಚು ಗಿಡಮೂಲಿಕೆ ಉತ್ಪನ್ನಗಳನ್ನು ನೀಡುತ್ತದೆ ಅಂದರೆ ಆರೋಗ್ಯ ರಕ್ಷಣೆ, ವೈಯಕ್ತಿಕ ಆರೈಕೆ, ಬಣ್ಣ ಸೌಂದರ್ಯವರ್ಧಕಗಳು, ಗೃಹ ಆರೈಕೆ ಮತ್ತು ಕೃಷಿ. ಈ ಉತ್ಪನ್ನಗಳನ್ನು ಭಾರತದಾದ್ಯಂತ 2.5 ಮಿಲಿಯನ್‌ಗಿಂತಲೂ ಹೆಚ್ಚು ಗ್ರಾಹಕರು ನಂಬಿದ್ದಾರೆ. ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೆಟ್‌ಸರ್ಫ್ ವರ್ಲ್ಡ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ ಮತ್ತು ಎಲ್ಲಾ ನೆಟ್‌ಸರ್ಫ್ ಉತ್ಪನ್ನಗಳ ಮೇಲೆ ಅತ್ಯಾಕರ್ಷಕ ಕೊಡುಗೆಗಳನ್ನು ಪಡೆದುಕೊಳ್ಳಿ. ಒಮ್ಮೆ ನೀವು ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿದ ನಂತರ, ನನ್ನ ಮೊಬೈಲ್ ಸಂಖ್ಯೆಯನ್ನು (8453502625) "ಉಲ್ಲೇಖಿಸಿದವರು" ನಲ್ಲಿ ನಮೂದಿಸಿ ಮತ್ತು ನಿಮ್ಮ 1ನೇ ಖರೀದಿಯಿಂದ ಪುನಃ ಪಡೆದುಕೊಳ್ಳಬಹುದಾದ ರೂ.100 ವೋಚರ್ ಅನ್ನು ಪಡೆಯಿರಿ. Andriod ಬಳಕೆದಾರರು: https://bit.ly/3SxEkfB ಆಪಲ್ ಬಳಕೆದಾರರು: https://apple.co/3Ace2JT   I am working with Netsurf Direct. I am using Netsurf products regularly. I strongly recommend these products to you .   'NETSURF DIRECT...

ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ (92) ವಿಧಿವಶ. ನಾಳೆ ಅಂತ್ಯಕ್ರಿಯೆ

ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಇನ್ನಿಲ್ಲ:- ತಡ ರಾತ್ರಿ ನಿಧನರಾಗಿರುವ ಎಸ್.ಎಂ ಕೃಷ್ಣ ಅನಾರೋಗ್ಯದಿಂದ ಬಳಲುತ್ತಿದ್ದ ಎಸ್.ಎಂ ಕೃಷ್ಣ ಇತ್ತೀಚೆಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ  ಎಸ್.ಎಂ.ಕೃಷ್ಣ (92) ಇಂದು ವಿಧಿವಶರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಎಸ್.ಎಂ.ಕೃಷ್ಣ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಅವರು ಚಿಕಿತ್ಸೆ ಫಲಕಾರಿಯಾಗದೆ    ಕೊನೆಯುಸಿರೆಳೆದಿದ್ದಾರೆ. ಎಸ್​ಎಂ ಕೃಷ್ಣ ಅವರು ಪೂರ್ತಿ ಹೆಸರು ಸೋಮನಹಳ್ಳಿ ಮಲ್ಲಯ್ಯ ಕೃಷ್ಣ. ಮಂಡ್ಯದ ಸೋಮನಹಳ್ಳಿಯಲ್ಲಿ 1932ರಲ್ಲಿ ಜನಿಸಿದ್ದ ಅವರು, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದುಕೊಂಡಿದ್ದರು. ಎಸ್‌ಎಂ ಕೃಷ್ಣ ಅವರು 1999 ರಿಂದ 2004ರವರೆಗೆ ಕರ್ನಾಟಕದ 16ನೇ ಮುಖ್ಯಮಂತ್ರಿಗಳಾಗಿದ್ದರು. ನಂತರ 2004 ರಿಂದ 2008ರವರೆಗೆ ಮಹಾರಾಷ್ಟ್ರದ ರಾಜ್ಯಪಾಲರಾಗಿ, ಕೇಂದ್ರ ವಿದೇಶಾಂಗ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು. ಸ್ಪೀಕರ್ ಆಗಿಯೂ ಸೇವೆ ಸಲ್ಲಿಕೆ ಡಿಸೆಂಬರ್ 1989ರಿಂದ ಜನವರಿ 1993ರವರೆಗೆ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಆಗಿಯೂ ಸೇವೆ ಸಲ್ಲಿಸಿದ್ದರು. 1971 ರಿಂದ 2014ರವರೆಗೆ ವಿವಿಧ ಕಾಲಘಟ್ಟದಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರು ಆಗಿದ್ದರು. ನಾಳೆ ಎಸ್​​ಎಂ ಕೃಷ್ಣ ಅವರ ಅಂತ್ಯಕ್ರಿಯೆ; ಬೆಂಗಳೂರಲ್ಲಿ ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ.. ಫೋಟೋ ಕೃಪೆ :-ವಿಕಿಪೀ...