ವಿಷಯಕ್ಕೆ ಹೋಗಿ

ಕೊರೊನಾ ವಿವಾಹ -ಕೋಟೆ ಕಾಲಂ



ಕೋಟೆ ಕಾಲಂ
ಕೊರೊನಾ ವಿವಾಹ 

ಇದೊಂತರಾ ಹೊಸತರಾ..ಯಾಕಂದ್ರೆ ಬಾಯಿಬಾಯಿ ಬಡಕೊಂಡ್ರು ಪ್ರಚಾರಕ್ಕಾಗಿ ನೀರಿನಂತೆ ಹಣ ಖರ್ಚುಮಾಡಿದರೂ ಕೇಳದ ಜನರು ತಾವಾಗಿಯೇ ಸರಳ ವಿವಾಹಕ್ಕೆ ಮುಂದಾಗಿದ್ದಾರೆ ಇದಕ್ಕೆ ಕಾರಣವಾಗಿದ್ದು ಮಾತ್ರ ಕಣ್ಣಿಗೆ ಕಾಣದ ವೈರಸ್
ಶ್ರೀಮಂತ ರೆನಿಸಿಕೊಂಡವರು ಮಕ್ಕಳ ಮದುವೆಯನ್ನು ಅದ್ದೂರಿಯಾಗಿ ಮಾಡಿ ತಮ್ಮ ಲೆವೆಲ್ ಹೆಚ್ಚಿಸಿಕೊಳ್ಳುವ ಆಸೆಯಲ್ಲಿದ್ದವರಿಗೆ ನಿರಾಸೆಯಾದರೆ
ಮದುವೆಗಾಗಿ ಸಾಲಾಸೋಲಾಮಾಡಿ ಕಮಗಾಲಾಗುವ ಅಕ್ಕ ದಲ್ಲಿದ್ದ ಮಧ್ಯಮ ವರ್ಗದ ವರು ಹಾಗು ಅರ್ಥಿಕವಾಗಿ ಸಮಕಷ್ಟದಲ್ಲಿರುವವರು ನಿಟ್ಟುಸಿರು ಬಿಟ್ಟಿದ್ದಾರೆ
ವಾಸ್ತವದಲ್ಲಿ ಕಳೆದ ಒಂದು ದಶಕದಿಂದ ಮದುವೆ ಎಂಬುದು ಅತ್ಯಂತ ದುಬಾರಿಯಾಗಿ ಪರಿಣಮಿಸಿತ್ತು
ಅದಕ್ಕೆ ಸಾಕ್ಷಿಎಂಬಂತೆ ತಾಲುಕು ಮಟ್ಟ ದಲ್ಲಿಯೂ ಸಹ ಲಕ್ಷರೂಪಾಯಿ ಬಾಡಿಗೆಯ ಕಲ್ಯಾಣ ಮಂಟಪ ಗಳು ಸಾಮಾನ್ಯ ಎಂಬಂತಾಗಿತ್ತು
ಪ್ರತಿ ವರ್ಷ ಹೊಸ ಐಷಾರಾಮಿ ಕಲ್ಯಾಣ ಮಂಟಪಗಳು ಎಲ್ಲೆಡೆ ತಲೆ ಎತ್ತುವುದು ಸಾಮಾನ್ಯವಾಗಿತ್ತು
ಇದರ ಜೊತೆಗೆ ಪ್ರೀ ವೆಡ್ಡಿಂಗ್ ಶೂಟ್ ಹನಿಮೂನ್ ಪ್ಯಾಕೇಜ್ಗಳು ಬೇರೆ ಹೆಣ್ಣುಹೆತ್ತವರನ್ನು ಐರಾಣಾಗಿಸುತ್ತಿದ್ದವು
ಇನ್ನು ಬೀಗರ ಔತಣಕ್ಕೆ ಕ್ವಂಟಾಲು ಲೆಕ್ಕದಲ್ಲಿ ಕೋಳಿ ಕುರಿ ಬಲಿಯಾಗುತ್ತಿದ್ದವು ಅದನ್ನು ಪ್ರತಿಷ್ಠೆಯಾಗಿ ಪರಿಗಣಿಸುವುದಲ್ಲದೇ ತುಂಡಿನ ಜೊತೆಗೆ ಸಾಲಾಸೋಲಾ ಮಾಡಿ ಹೆಂಡದ ಹೊಳೆ ಹರಿಸುವುದು ಅಲಿಖಿತವಾಗಿ ನಡೆದುಕೊಂಡು ಬಂದಿತ್ತು
ಈಗ ಅದೆಲ್ಲದಕ್ಕೂ ಕಡಿವಾಣ ಬಿದ್ದಿದೆ ಸಾಮೂಹಿಕ ಗುಂಡುತುಂಡಿನ ಸಮಾರಾಧನೆ ಕನಸಾಗಿದೆ ಮದುವೆ ಮಾಡಿದವರಿಗೆ ಲಕ್ಷಾಂತರ ರುಪಾಯಿ ಉಳಿತಾಯವಾಗಿದೆ
ಇನ್ನು ಮದುವೆ ಮನೆ ಗಳಲ್ಲಿ ಬೆರಳೆಣಿಕೆ ಜನ ಉಂಡು ಕೊಂಡು ಹೋಗುವವರಿಲ್ಲಾ ಮದುವೆ ಮುಗಿದ ಬಳಿಕ ಹೆಣ್ಣಿನ ಅಪ್ಪಾ ಬಾಕಿ ಕೊಡಲು ಪರದಾಡುವಂತಿಲ್ಲಾ
ಯಾರು ಬಂದರೂ ಬರದಿದ್ದರು ಮದುವೆಯಂತು ಆಗುತ್ತದೆ
ಸರಳವೋ ವಿರಳವೋ ಹುಡುಗ ಹುಡುಗಿ ಗಂಡಹೆಂಡತಿ ಆಗುತ್ತಾರೆ ಮಕ್ಕಳು ಆಗುತ್ತವೆ ಬದುಕಿನ ಬಂಡಿಯೂ ಸಾಗುತ್ತದೆ
ಕೊರೊನಾ ಭಯದಿಂದ ನಡರಯುತ್ತಿರುವ ಈ ರೀತಿಯ ವಿವಾಹಗಳು ಮುಂದೆಯೂ ಮುಂದುವರೆದರೆ ಎಷ್ಟೋ ಸಮಸ್ಯೆಗಳು ತಾವಾಗಿಯೇ ಬಗೆಹರಿಯುತ್ತವೆ ವಿವಾಹ ಎಂಬುದು ನಿಜವಾದ ಅರ್ಥ ಪಡೆದುಕೊಳ್ಳುತ್ತದೆ





ವಿಮರ್ಶಾ -vimarsha 

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Vimarsha.info

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಆರೋಗ್ಯ ಮತ್ತು ಸಂತ್ರೃಪ್ತ ಜೀವನ

ಬಂಧುಗಳೇ, ಪ್ರತಿಯೊಂದು ಜನರು ನೆಮ್ಮದಿಯಿಂದ ಬದುಕಲು ಇಷ್ಟಪಡುತ್ತಾರೆ, ಆದರೂ ಹಲವಾರು ಸಮಸ್ಯೆಗಳಿಂದ ಬಳಲುತ್ತಿದ್ದಾರೆ, ಅದರಲ್ಲಿ  ಮುಖ್ಯ ಸಮಸ್ಯೆಗಳು ಅಂದರೆ ಆರೋಗ್ಯ ಮತ್ತು ಹಣಕಾಸು ಮತ್ತು  ಉದ್ಯೋಗ ಭದ್ರತೆ. ನಮ್ಮಲ್ಲಿ ಮೇಲ್ಕಂಡ  ಸಮಸ್ಯೆಗಳಿಗೆ ಸಮಂಜಸವಾದ ಪರಿಹಾರವಿದೆ , ನೀವು ಆತಂಕ ಪಡುವ ಅಗತ್ಯವಿಲ್ಲ, ಬನ್ನಿ ನಮ್ಮೂಡನೆ ಸೇರಿರಿ, ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳರಿ.   ನಾವು ಸಂವಹನ ಮಾಡಲು ಅಂತರ್ಜಾಲ ಮತ್ತು ನೇರ ಭೇಟಿ ಕಾರ್ಯಕ್ರಮ ಮೂಲಕ  ಕೆಲವೊಂದು ಮಾರ್ಗದರ್ಶನಗಳನ್ನು ನೀಡುತ್ತೇವೆ, ಅದಕ್ಕಾಗಿ ನೀವು ನಿಮ್ಮ ವಾಟ್ಸಾಪ್ ಸಂಖ್ಯೆಯನ್ನು ನಮಗೆ ಕಳುಹಿಸಿದರೆ, ಮಾರ್ಗದರ್ಶನ ಅವಕಾಶ ನಿಮಗೆ ಲಭಿಸುತ್ತದೆ.

ಸಂಬಂಧಗಳ ಅನುಬಂಧ-ಕೋಟೆ ಕಾಲಂ

ಸಂಬಂಧಗಳ ಅನುಬಂಧ ಮಕ್ಕಳು ಯಾರಾದ್ರು ನೆಂಟರು ಅದರಲ್ಲಿಯೂ ಹತ್ತಿರದವರು ಅತ್ತೆ ಮಾವ ಚಿಕ್ಕಪ್ಪ ಚಿಕ್ಕಮ್ಮ ಅವರ ಮಕ್ಕಳು ಅಜ್ಜಿ ತಾತ ಹೀಗೆ ಹತ್ತಿರದವರು ಹಬ್ಬ ಹುಣ್ಣಿಮೆ ಇಲ್ಲವೆ ರಜೆ ಸಮಯದಲ್ಲಿ ನಾಕು ದಿನ ಇದ್ದು ಹೊರಟಾಗಿನ ಪ್ರಸಂಗ ಪ್ರಹಸನ ನೆನಪಿಸಿಕೊಂಡರೆ ಸಾಕು ಮನುಷ್ಯ ಸಂಬಂಧ ಅಗ ಮತ್ತು ಈಗ ಎಂಬ ವ್ಯತ್ಯಾಸ ಅರ್ಥ ವಾಗುತ್ತದೆ ನೆಂಟರ ಬ್ಯಾಗ್ ಭರ್ತಿಮಾಡುತ್ತಿದ್ದುದರಿಂದ ಹಿಡಿದು ಅವರನ್ನು ಬಸ್ಸಿನಲ್ಲಿ ಕಿಟಕಿ ಪಕ್ಕದ ಸೀಟ್ ಹಿಡಿದು ಅವರ ಲಗೆಜ್ ಅನ್ನು ಜೋಪಾನವಾಗಿ ಜೋಡಿಸಿ ಬರ್ತೀಯಾ ಕಾಗದ ಬರಿ ಅನ್ನೋವರೆಗೂ ನಡೆಯುತ್ತಿದ್ದ ಸೀನ್ಗಳೇ ಅದ್ಬುತ ಇನ್ನು ಮಕ್ಕಳು ಕರೆದುಕೊಂಡು ಹೋಗುವುದಿಲ್ಲ ಎಂದು ಖಚಿತವಾದರು ಕಡೆಯದಾಗಿ ನಾನು ಬತ್ತೀನಿ ಎಂದು ಅಳುತ್ತಿದ್ದುದು ಅಳುವಿನ ನಡುವೆಯೆ ಚಡ್ಡಿ ಜೇಬು ತಡವಿ ನೆಂಟರು ಕೊಟ್ಟ ಚಿಲ್ಲರೆ ನಾಣ್ಯ ಸ್ಪರ್ಷಿಸಿ ಖುಷಿಪಡುತ್ತಿದ್ದುದು ಮರೆಯಲಸಾಧ್ಯ ಇನ್ನು ಹೆಣ್ಣುಮಕ್ಕಳಿಗೆ ಕುಂಕುಮ ಕೊಡುತ್ತಿದ್ದುದನ್ನೇ ಒಂದು ಕತೆಯಾಗಿಸಬಹುದು ಸಣ್ಣ ವಿಚಾರ ಎನಿಸಿದರೂ ಇವುಗಳಲ್ಲಿ ಅಡಗಿರುವ ಪ್ರೀತಿ ಅಗಾಧ ಇದೆಲ್ಲದರಿಂದ ಇಂದಿನ ಮಕ್ಕಳು ವಂಚಿತರಾದರಲ್ಲಾ ಎಂದು ಒಮ್ಮೊಮ್ಮೆ ನೋವಾಗುತ್ತದೆ ಇನ್ನು ಮದುವೆಗಳಂತೂ ಒಂದು ವಾರ ಠಿಕಾಣಿ ಹೊಡೆಯುವ ಕಾರ್ಯಕ್ರಮ ಮನೆಬಾಗಿಲಿನಲ್ಲಿ ಧಾರೆ ಎರೆಯುತ್ತಿದ್ದ ಮದುವೆಗಳ ಸಂಭ್ರಮ ಒಂದುರೀತಿಯಾದರೆ ಇದ್ದ ಒಂದೆರೆಡು ಛತ್ರಗಳಲ್ಲಿ ನಡೆಯುತ್ತಿದ್ದ ಮದುವೆಗಳ ಸಂಭ್ರಮ ಮತ್ತೊಂದು ರೀತಿಯದ್ದು ಅಲ...

ಸ್ವತಃ ಅಖಾಡಕ್ಕಿಳಿದ ಪೋಲೀಸ್ ವರಿಷ್ಠಾಧಿಕಾರಿ.

ಸುದ್ದಿ ಸಂಪಾದಕರು : ಹರೀಶ್ ಹೆಚ್ ಆರ್ (ಕೋಟೆ) ನಮ್ಮದು ಒಂದೇ ಇಲಾಖೆ,ಕೇವಲ  ಕೆಳ ಹಂತದ ಅಧಿಕಾರಿಗಳು ಮಾತ್ರ ಕೆಲಸಕ್ಕೆ ಸೀಮಿತವಲ್ಲ,ಅವರ ಕಷ್ಟ ಮೇಲಾಧಿಕಾರಿಗಳಿಗೆ ಗೋತ್ತಾಗುವುದು ಯಾವಾಗ?  ಅವರ ಕಷ್ಟ, ಒತ್ತಡಗಳು ನಮಗೂ ಗೊತ್ತಾಗಬೇಕು ಅಲ್ವ!! ಇದನೆಲ್ಲ ಅರಿತ ಐಪಿಎಸ್  ಅಧಿಕಾರಿ ಸ್ವತಃ ಅಖಾಡಕ್ಕೆ ಇಳಿದಿದ್ದಾರೆ...ಸತತ ಕಿರಿಯ ಸಿಬ್ಬಂದಿಗಳ ಜೊತೆ  ಕಾರ್ಯೋನ್ಮುಖರಾಗಿ ಮಾದರಿಯಾಗಿದ್ದಾರೆ...ಅದರ ಒಂದು ಕಂಪ್ಲೀಟ್ ಸ್ಟೋರಿ ಇಲ್ಲಿದೆ... ಎಸ್ಪಿ ಹೀಗೆ  ಸ್ವತಃ ಲಾಠಿ ಹಿಡಿದು ಫೀಲ್ಡ್ಗೆ ಇಳಿದಿರುವ ಐಪಿಎಸ್ ಅಧಿಕಾರಿ ಬೇರೆ ಯಾರು ಅಲ್ಲ, ಹಾಸನ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಶ್ರೀನಿವಾಸ್ ಗೌಡ...ಹಾಸನಕ್ಕೆ ಬಂದು ಇನ್ನು ಒಂದು ವರ್ಷ ಆಗಿಲ್ಲ, ಖಡಕ್ ಆಫೀಸರ್ ಅನ್ನೋ ಹಣೆ ಪಟ್ಟಿ ಜನರ ಬಾಯಲಿ ಗುಣಗತೊಡಗಿದೆ..ಇನ್ನು ಎಸ್ಪಿ ಸಾಹೇಬರು ಬರುತ್ತಿದ್ದಾರೆ, ಅಂದ್ರೆ ಇಲಾಖೆ ಅಲ್ಲದೆ  ಆ ಸ್ಥಳದಲ್ಲಿರುವ ಜನರು ಕೂಡ ಅವರ ಕೆಲಸಕ್ಕೆ ಮನಸೋತಿದ್ದಾರೆ.. ಹಾಸನ ಜಿಲ್ಲೆ ಚನ್ನರಾಯಪಟ್ಟಣದಲ್ಲಿ ಅತಿ ಹೆಚ್ಚು ಕೊರೊನಾ ಸೋಂಕಿತರು ಒಂದು ಕಡೆ,ಇನ್ನೂಂದು ಕಡೆ ಕ್ರೈಮ್ ಕೂಡ ಜಾಸ್ತಿ ಇರುತ್ತೆ..ಇಲ್ಲಿ ಹೇಳೂರು ಇಲ್ಲ ಕೇಳೋರು ಇಲ್ಲ!!! ಇಂತ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಟ್ರಾಫಿಕ್ ಇನ್ಸಪೆಕ್ಟರ್ ಬಾಲು,ಹಾಗೂ ನಗರ ಠಾಣೆ ಪಿ ಎಸ್ ಐ ಇವರಿಬ್ಬರು ನಗರಕ್ಕೆ ಬಂದ ಮೇಲೆ ಸಾಕಷ್ಟು ಕೆಲಸ ಮಾಡಿದ್ದಾರೆ....