ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ಶ್ರೀ ನಿತಿನ್ ಗಡ್ಕರಿ ಅವರು ಇಂದು ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರೊಂದಿಗೆ ಸಭೆ ನಡೆಸಿದರು. ವೃತ್ತಿಪರ ಏಜೆನ್ಸಿಗಳು ಸೂಚಿಸಿದ ವಿಚಾರಗಳ ಬಗ್ಗೆ ಅವರು ಚಿಂತನ ಮಂಥನ ನಡೆಸಿದರು.
ಶ್ರೀ ನಿತಿನ್ ಗಡ್ಕರಿ ಅವರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸಂಬಂಧಿಸಿದ ಬೇಡಿಕೆಗಳು/ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಪ್ರಸ್ತಾವನೆಗಳನ್ನು ಸಲ್ಲಿಸುವಂತೆ ರಾಜ್ಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು ಮತ್ತು ರಾಜ್ಯಕ್ಕೆ ಎಂಒಆರ್ ಟಿಎಚ್ ನ ಸಂಪೂರ್ಣ ಬೆಂಬಲದ ಭರವಸೆ ನೀಡಿದರು.

ಸಂಚಾರದ ತೊಂದರೆಗಳನ್ನು ಪರಿಹರಿಸಲು ಬಸ್-ನಿಲ್ದಾಣಗಳು, ಅಂತರ್-ಮಾದರಿ ನಿಲ್ದಾಣಗಳು ಮತ್ತು ಪಾರ್ಕಿಂಗ್ ಪ್ಲಾಜಾಗಳನ್ನು ರಚಿಸುವ ಆಯ್ಕೆಗಳನ್ನು ಅನ್ವೇಷಿಸುವ ಬಗ್ಗೆಯೂ ಸಚಿವರು ಸಲಹೆ ನೀಡಿದರು.
ಈ ಸಭೆಯಲ್ಲಿ ಕೇಂದ್ರದ ರಾಜ್ಯ ಸಾರಿಗೆ ಸಚಿವ ವಿ.ಕೆ.ಸಿಂಗ್, ರಾಜ್ಯ ಸಾರಿಗೆ ಸಚಿವ ಶ್ರೀ ಬಿ.ಶ್ರೀರಾಮುಲು, ರಾಜ್ಯ ಲೋಕೋಪಯೋಗಿ ಸಚಿವ ಶ್ರೀ ಸಿ.ಸಿ.ಪಾಟೀಲ್, ರಾಜ್ಯ ಸಂಸದರಾದ ಪಿ.ಸಿ.ಮೋಹನ್ ಮತ್ತು ತೇಜಸ್ವಿ ಸೂರ್ಯ ಮತ್ತು ಕೇಂದ್ರ ಮತ್ತು ರಾಜ್ಯ ಅಧಿಕಾರಿಗಳು ಉಪಸ್ಥಿತರಿದ್ದರು.
*****
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Vimarsha.info