ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಡಿಸೆಂಬರ್, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಜ.5-ಹಾಸನ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ

ವಿಮರ್ಶಾ -vimarsha ಜ.5 ರಂದು ವಿವಿಧ ಹುದ್ದೆಗಳ ನೇಮಕಾತಿಗೆ:      ನೇರ ಸಂದರ್ಶನ  ಹಾಸನ . ( ಕರ್ನಾಟಕ ವಾರ್ತೆ):-   ಹಾಸನದ ಹೆಸರಾಂತ ಕಂಪನಿಗಳು ಖಾಲಿ ಇರುವ ವಿವಿಧ ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲು ಜ.5 ರಂದು ಬೆಳಿಗ್ಗೆ 10 ಗಂಟೆಯಿಂದ ಮದ್ಯಾಹ್ನ 1 ಗಂಟೆಯವರೆಗೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ನೇರ ಸಂದರ್ಶನ ಮೂಲಕ ಆಯ್ಕೆ ನಡೆಯಲಿದೆ.        8ನೇ ತರಗತಿ ಎಸ್.ಎಸ್.ಎಲ್.ಸಿ/ ಪಿ.ಯು.ಸಿ/ ಐ.ಟಿ.ಐ/ ಡಿಪ್ಲೋಮೋ, ಯಾವುದೇ ಪದವಿ/ ನಲ್ಲಿ ತೇರ್ಗಡೆ ಹೊಂದಿದ 18 ರಿಂದ 30 ವರ್ಷ ಒಳಪಟ್ಟ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳ್ಳುತ್ತಿದ್ದು, ಆಸಕ್ತ ನಿರುದ್ಯೋಗಿ ಯುವಕ/ ಯುವತಿಯರು  ತಮ್ಮ ಸ್ವವಿವರಗಳು ಆಧಾರ್ ಕಾರ್ಡ್ ಮತ್ತು ಶೈಕ್ಷಣಿಕ ದಾಖಲಾತಿಗಳ ಜೆರಾಕ್ಸ್ ಪ್ರತಿಗಳೊಂದಿಗೆ ಕಛೇರಿಗೆ ಹಾಜರಾಗಿ ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.               ಹೆಚ್ಚಿನ ಮಾಹಿತಿಗಾಗಿ ಉದ್ಯೋಗಾಧಿಕಾರಿ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಹಾಸನ ಇವರನ್ನು  ಖುದ್ದಾಗಿ ಅಥವಾ ದೂ.ಸ : 08172-296374 ಅಥವಾ  8722606874 / 8660141863 ಅನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ. ಕೋವಿಡ್ -19 ಇರುವ ಹಿನ್ನೆಲೆ ಹಾಜರಾಗುವ ಎಲ್ಲಾ ಅಭ್ಯರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಎಲ್ಲಾ ರೀತಿಯ ಮುಂಜಾಗ್ರತಾ  ಕ್ರಮಗಳನ್ನ  ಪಾಲಿ

ಗ್ರಾಮ ಪಂಚಾಯಿತಿ ಚುನಾವಣಿ ಮತ ಎಣಿಕೆ ಸಿದ್ಧತೆ : ಮದ್ಯ ಮಾರಾಟ ನಿಷೇಧ ಮತ್ತು ನಿಷೇಧ್ಜ್ಞಾನೆ ಜಾರಿ.

ಗ್ರಾ.ಪಂ ಚುನಾವಣೆ ಮತ ಎಣಿಕೆಗೆ ಸಿದ್ದತೆ :-  ಮದ್ಯ ಮಾರಾಟ ನಿಷೇಧ ಹಾಗೂ ನಿಷೇಧ್ಜ್ಞಾನೆ ಜಾರಿ (ಕರ್ನಾಟಕ ವಾರ್ತೆ) :  ಗ್ರಾಮ ಪಂಚಾಯಿತಿ ಚುನಾವಣೆಯ ಮತ ಎಣಿಕೆ ಕಾರ್ಯ ಡಿ.30 ರಂದು ನಡೆಯಲಿದ್ದು ಆಯಾ ತಾಲ್ಲೂಕಿನಲ್ಲಿ ಮತ ಎಣಿಕೆ ಕೇಂದ್ರಗಳನ್ನು ಈಗಾಗಲೇ ಗುರುತಿಸಿ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ ಚುನಾವಣೆ ನಡೆದ ಕ್ಷೇತ್ರಗಳಿಗೆ  ಅನುಗಣವಾಗಿ ಟೇಬಲ್‍ಗಳನ್ನು ಅಳವಡಿಸಿಕೊಂಡು ಎಣಿಕೆ ಕಾರ್ಯ ನಡೆಸಲಾಗುವುದು ಮತ ಎಣಿಕೆ ಕೇಂದ್ರಗಳ ವಿವರ :- ಹಾಸನ-ಸರ್ಕಾರಿ ಕಲಾ ಕಾಲೇಜು ಒಟ್ಟು 65 ಟೇಬಲ್‍ಗಳು 195 ಸಿಬ್ಬಂದಿಗಳು, ಅರಸೀಕೆರೆ-ಸೆಂಟ್ ಮೇರಿಸ್ ಪ್ರೌಢ ಶಾಲೆಯಲ್ಲಿ ಒಟ್ಟು 88 ಟೇಬಲ್‍ಗಳು 264 ಸಿಬ್ಬಂದಿಗಳು, ಚನ್ನರಾಯಪಟ್ಟಣ - ನವೋದಯ ಪದವಿ ಪೂರ್ವ ಕಾಲೇಜಿನಲ್ಲಿ  ಒಟ್ಟು 88 ಟೇಬಲ್‍ಗಳು 264 ಸಿಬ್ಬಂದಿಗಳು, ಹೊಳೆನರಸೀಪುರ - ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಒಟ್ಟು 50 ಟೇಬಲ್‍ಗಳು 150 ಸಿಬ್ಬಂದಿಗಳು,  ಆಲೂರು-ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಒಟ್ಟು 30 ಟೇಬಲ್‍ಗಳು 90 ಸಿಬ್ಬಂದಿಗಳು, ಅರಕಲಗೂಡು-ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಒಟ್ಟು 93 ಟೇಬಲ್‍ಗಳು 279 ಸಿಬ್ಬಂದಿಗಳು, ಬೇಲೂರು-ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಒಟ್ಟು 74 ಟೇಬಲ್‍ಗಳು 222 ಸಿಬ್ಬಂದಿಗಳು, ಸಕಲೇಶಪುರ-ಸಂತ ಜೋಸೆಫ್ ಶಾಲೆಯಲ್ಲಿ ಒಟ್ಟು 33 ಟೇಬಲ್ 99 ಸಿಬ್ಬಂದಿಗಳು. ಒಟ್ಟು 08 ತಾಲ್ಲೂಕುಗಳಲ್ಲಿ 521

ವಿಮರ್ಶಾ-vimarsha

ವಿಮರ್ಶಾ -ಸುದ್ದಿ ನೋಟ

ವಿಮರ್ಶಾ -vimarsha ವಿಮರ್ಶಾ -ಸುದ್ದಿ ನೋಟ 17/12/2020 👇👇👇👇👇👇👇👇👇👇👇👇   https://www.facebook.com/100028372331773/posts/373926456896429/?app=fbl #ವಿಮರ್ಶಾ -vimarsha  ಪ್ರಧಾನ ಸಂಪಾದಕರು :- ಹರೀಶ್ ಹೆಚ್ ಆರ್  ಕೋಟೆ  ಸುದ್ದಿ ಸಂಪಾದಕರು:- ನಾಗೇಂದ್ರ.ಹೆಚ್. ಎನ್. 

ಕಸಾಪ ಎಂಕ ನಾಣಿ ಸೀನರ ಹಿಡಿತದಲ್ಲಿ ನಲುಗಿದೆ-ಕೋಟೆ ಕಾಲಂ

ವಿಮರ್ಶಾ -vimarsha ಕೋಟೆ ಕಾಲಂ ಕಸಾಪ ಎಂಕ ನಾಣಿ ಸೀನರ ಹಿಡಿತದಲ್ಲಿ ನಲುಗಿದೆ. ಜಿಲ್ಲಾಕನ್ನಡಸಾಹಿತ್ಯ ಪರಿಷತ್ತು ಎಂಕ ನಾಣಿ ಸೀನರ ಹಿಡಿತದಲ್ಲಿ ನಲುಗಿದೆ ಸಾಹಿತಿಗಳು ವಿಚಾರವಂತರು ಜನಸಾಮಾನ್ಯರು ಅಲ್ಲಿಗೆ ಕಾಲಿಡದಂತಹ ಪರಿಸ್ಥಿತಿ ನಿರ್ಮಾಣ ವಾಗಿದೆ ಪ್ರತಿಯೊಂದರಲ್ಲಿಯೂ ಹಣ ಮಾಡುವುದನ್ನೆ ರೂಡಿಸಿಕೊಂಡಿದ್ದಾರೆ ಅಧ್ಯಕ್ಷರು ಭ್ರಷ್ಟಾಚಾರದ ಪರಮಾವಧಿ ತಲುಪಿದ್ದಾರೆ  ಈ ವಿಚಾರವನ್ನು ಹೇಳಿದವರು ಯಾರೋ ಹಾದಿಬೀದಿಯಲ್ಲಿ ಹೋಗುವವರಲ್ಲಾ ಈಗಿನ ಜಿಲ್ಲಾ ಕಸಾಪ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡರ ಒಡನಾಡಿ ತಾಲೂಕು ಕಸಾಪ ಮಾಜಿ ಅಧ್ಯಕ್ಷ ಗಂಜಲಗೂಡು ಗೋಪಾಲೇಗೌಡ ಪತ್ರಿಕಾಗೋಷ್ಠಿಯಲ್ಲಿ ಆಡಿದ ಮಾತುಗಳು  ಮೊದಲೇ ಹೊತ್ತಿಉರಿಯುತ್ತಿರುವ ಜಿಲ್ಲಾ ಕಸಾಪ ಚುನಾವಣಾ ಕಣಕ್ಕೆ ಗೋಪಾಲೇಗೌಡರ ಎಂಟ್ರಿ ಹಾಗೂ ಪತ್ರಿಕಾಗೋಷ್ಠಿಯಲ್ಲಿ ಬಿಚ್ಚಿಟ್ಟ ವಿಚಾರಗಳನ್ನು ಗಮನಿಸಿದಾಗ ಪರಿಷತ್ತಿಗೆ ಫಿನಾಯಿಲ್ ಹಾಕಿ ತೊಳೆಯಬೇಕಾದುದು ಅನಿವಾರ್ಯ ಎನಿಸುತ್ತದೆ ಕಸಾಪ ಜಿಲ್ಲಾಧ್ಯಕ್ಷರ ಮೇಲೆ ನೇರವಾಗಿ ಆರೋಪಿಸಿದ ಗೋಪಾಲೇಗೌಡ ಪರಿಷತ್ತಿನಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಬಗ್ಗೆ ದುನಿಯಾ ಎಂಬ ಶೀರ್ಷಿಕೆ ಅಡಿಯಲ್ಲಿ ಲೇಖನ ಬರೆದಾಗ ಮಂಜೇಗೌಡರು ನನ್ನ ಮೇಲೆ ಹಲ್ಲೆಮಾಡಿ ಕೊಲೆಯತ್ನ ನಡೆಸಿದ್ದು ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ ಎಂದು ಆಪಾದಿಸಿದ್ದು ಮಾತ್ರ ಎಲ್ಲರೂ ಆಶ್ಚರ್ಯ ಚಕಿತರನ್ನಾಗುವಂತೆ ಮಾಡಿತು ಈ ಅವ್ಯವಹಾರಗಳ ಬಗ್ಗೆ ಪ್ರಶ್ನಿಸಿದ್ದಕ್ಕೆ ನನ್ನನ್ನು ತಾಲ

jobs oppurtunities -ಉದ್ಯೋಗಾವಕಾಶಗಳು.

ವಿಮರ್ಶಾ -vimarsha  ಹೆಚ್ಚಿನ ವಿವರಗಳಿಗೆ ಈ ಕೆಳಕಂಡ ಕೊಂಡಿಯನ್ನು ಸಂಪರ್ಕಿಸಿ.  For more details please click below link. 👇👇👇👇👇👇👇👇 https://youtu.be/MbCoA_xDKUo      ಪ್ರಧಾನ ಸಂಪಾದಕರು :-         ಹರೀಶ್ ಹೆಚ್ ಆರ್                 ಕೋಟೆ              ಸುದ್ದಿ ಸಂಪಾದಕರು :-       ನಾಗೇಂದ್ರ.ಹೆಚ್. ಎನ್ 

ಗ್ರಾಮ ಪಂಚಾಯಿತಿ ಕದನ -ಕೋಟೆ ಕಾಲಂ

ಕೋಟೆ ಕಾಲಂ:- ಗ್ರಾಮ ಪಂಚಾಯತಿ ಕದನ. -ಹರೀಶ್ ಹೆಚ್ ಆರ್   ಕೋಟೆ.  ನೋಡು ಸಂಸಾರದಲ್ಲಿ ರಾಜಕೀಯ ನಿನ್ನ ಮನೆ ಯಲ್ಲಿ ನೀನೆ ಪರಕೀಯ..... ಸಿ.ಅಶ್ವತ್ ಅವರ ಕಂಚಿನ ಕಂಠದಲ್ಲಿ ಬರುತ್ತಿದ್ದ ಹಾಡು ಕೇಳಿದವನಿಗೆ ಒಂದು ಕ್ಷಣ ಗ್ರಾಮಪಂಚಾಯತಿ ಚುನಾವಣೆ ದ್ರಶ್ಯಾವಳಿಗಳು ಕಣ್ಣ ಮುಂದೆಯೇ ಹಾದು ಹೋದವು ಡಿಸೆಂಬರ್ ತಿಂಗಳಿನಲ್ಲಿ ಎರಡು ಹಂತದಲ್ಲಿ ನಡೆಯಲಿರುವ ಗ್ರಾಮ ಪಂಚಾಯತಿ ಚುನಾವಣೆ ಮುಗಿಯುವಷ್ಟರಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ಅದೆಷ್ಟು ಕುರುಕ್ಷೇತ್ರ ರಾಮಾಯಣ ನಡೆಯುತ್ತವೆಯೋ ಅದೆಷ್ಟು ತಲೆಗಳು ಉರುಳುತ್ತವೋ ದ್ವೇಶದ ದಳ್ಳುರಿಗೆ ಅದೆಷ್ಟು ಮನೆಗಳು ಆಹುತಿಯಾಗುತ್ತವೋ ಬಲ್ಲವರ್ಯಾರು ಪ್ರಶಾಂತತೆ ಹಾಗೂ ಲವಲವಿಕೆಯಿಂದ ಕೂಡಿದ ಗ್ರಾಮಾಂತರ ಪ್ರದೇಶದ ಜನರ ಮನಸ್ಸು ಬುದ್ದಿಗೆ ಲಕ್ವಾಹೊಡೆಯುವುದೇ ಗ್ರಾಮಪಂಚಾಯತಿ ಚುನಾವಣೆಗಳಲ್ಲಿ ಈ ಸಂದರ್ಭದಲ್ಲಿ ಅಣ್ಣತಮ್ಮಂದಿರೇ ಶತ್ರುಳಾಗುತ್ತಾರೆ ಕಷ್ಟಕ್ಕಾಗುವ ಬಂಧುವೇ ಕತ್ತಿಮಸೆಯುತ್ತಾನೆ ಹೆಂಡತಿ ಮಕ್ಕಳೆ ಮನೆ ಯಜಮಾನನ ಮಾತನ್ನು ಕಾಲ ಕಸವಾಗಿ ಕಾಣುತ್ತಾರೆ ದಾಯಾದಿ ದ್ವೇಷತಾರಕಕ್ಕೇರುತ್ತದೆ ಊರೇ ಇಬ್ಬಾಗವಾದರೆ ಜಾತಿ ಉಪ ಜಾತಿಯ ಪ್ರಜ್ಞೆ ಹೆಚ್ಚಾಗಿ ಯಾರನ್ನೂ ಯಾರೂ ನಂಬದಂತಾಗುತ್ತದೆ, ಕಳೆದ ಚುನಾವಣೆಯ ಸಂದರ್ಭದಲ್ಲಿ ಒಡೆದ ಮನಸ್ಸುಗಳೆ ಇನ್ನೂ ಒಂದಾಗಿಲ್ಲಾ ಅಷ್ಟರಲ್ಲಿ ಮತ್ತೆ ಚುನಾವಣೆ ಬಂದಿದ್ದು ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚಿನ ಬಿರುಸು ಕಂಡು ಬರಲಿದೆ ಈ ಬಾರೀ ಕರೋನಾ ಪಿಡುಗಿನಿಂದ ತತ್ತರಿಸಿ ಊರಿಗೆ ವಾ