ವಿಷಯಕ್ಕೆ ಹೋಗಿ

06/11/2020. ಹಾಸನ :ದಿನ ಸುದ್ದಿ ದರ್ಶನ.

ಶಿಷ್ಯವೇತನಕ್ಕೆ ಅರ್ಜಿ ಆಹ್ವಾನ

ಹಾಸನ,ನ.06

(ಕರ್ನಾಟಕ ವಾರ್ತೆ):- 

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ನೃತ್ಯ, ಸುಗಮ ಸಂಗೀತ, ಕಥಾಕೀರ್ತನ ಮತ್ತು ಗಮಕ ಈ ಆರು ಕಲಾಕ್ಷೇತ್ರದಲ್ಲಿ ಅಭ್ಯಾಸ ಮಾಡುತ್ತಿರುವ 13 ರಿಂದ 24 ವರ್ಷ ವಯೋಮಾನದ ಒಳಗಿರುವ ಅಭ್ಯರ್ಥಿಳಿಗೆ ಶಿಷ್ಯವೇತನಕ್ಕೆ ಅರ್ಜಿ ಅಹ್ವಾನಿಸಲಾಗಿದೆ.
 ಸಂದರ್ಶನಕ್ಕೆ ಆಯ್ಕೆಯಾದ ಅಭ್ಯರ್ಥಿಗಳಿಗೆ 10,000 ರೂಗಳ ಶಿಷ್ಯವೇತನ ನೀಡಲಾಗುವುದು, ಅರ್ಜಿಗಳನ್ನು ಅಕಾಡೆಮಿಯ ಕಚೇರಿ ವೇಳೆಯಲ್ಲಿ ಉಚಿತವಾಗಿ ಪಡೆಯಬಹುದಲ್ಲದೆ, ಅಕಾಡೆಮಿ ಅಂತರ್ಜಾಲ ತಾಣ

https://karnatakasangeethanrithyaacademy.com ಮೂಲಕ ಪಡೆದು ಸಲ್ಲಿಸಬಹುದಾಗಿದೆ.

 ಅರ್ಜಿಯ ಜೊತೆ ಇತ್ತೀಚಿನ ಪಠ್ಯಕ್ರಮವನ್ನು ಸಹ ನೀಡಲಾಗುತ್ತಿದ್ದು, ಅಂಚೆ ಮೂಲಕ ಅರ್ಜಿ ಮತ್ತು ಪಠ್ಯಕ್ರಮ ಪಡೆಯಲಿಚ್ಚಿಸುವವರು 10 ರೂಪಾಯಿಯ ಸ್ಟಾಂಪ್ ಹಚ್ಚಿದ ಸ್ವವಿಳಾಸವುಳ್ಳ ಲಕೋಟೆಯನ್ನು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕನ್ನಡ ಭವನ, 2ನೇ ಮಹಡಿ, ಜೆ.ಸಿ. ರಸ್ತೆ ಬೆಂಗಳೂರು-560002 ಗೆ ಕಳುಹಿಸಲು ಕೋರಿದೆ.
 ಅರ್ಜಿಯನ್ನು ಸಲ್ಲಿಸಲು ನ. 30 ಕೊನೆಯ ದಿನಾಂಕವಾಗಿದ್ದು, ನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಡಾ. ಎಂ.ಡಿ ಸುದರ್ಶನ್ ತಿಳಿಸಿದ್ದಾರೆ.
*******



ನ.10 ರಂದು ತೆಂಗಿನ ನಾರಿನ ಭೂವಸ್ತ್ರದ ಬಳಕೆ ಕಾರ್ಯಾಗಾರ

ಹಾಸನ,ನ.06


(ಕರ್ನಾಟಕ ವಾರ್ತೆ):- 

ರಸ್ತೆ ನಿರ್ಮಾಣದಲ್ಲಿ, ಗಣಿಗಾರಿಕೆಯಲ್ಲಿ, ಇಳಿಜಾರು ಭೂಮಿಯಲ್ಲಿ ತೆಂಗಿನ ನಾರಿನ ಭೂವಸ್ತ್ರವನ್ನು ಹೊದಿಸುವುದರಿಂದ ಭೂಮಿಯ ಸವೆತವನ್ನು ತಡೆಗಟ್ಟಬಹುದಾಗಿದೆ. ಇದರಿಂದ ರಸ್ತೆಯು ಗಟ್ಟಿಯಾಗುವುದಲ್ಲದೆ ರಸ್ತೆಗೆ ಬಿರುಕು ಉಂಟಾಗುವುದಿಲ್ಲ, ಗುಣಮಟ್ಟದ ದೀರ್ಘಕಾಲ ಬಾಳಿಕೆಯನ್ನು ಸಾಧಿಸಬಹುದಾಗಿದೆ. ಇದಲ್ಲದೆ, ಕೃಷಿ ಹೊಂಡ, ರಾಷ್ಟ್ರೀಯ ಹೆದ್ದಾರಿ, ಗ್ರಾಮೀಣ ರಸ್ತೆ, ನೀರಾವರಿ ಕಾಲುವೆಗಳು, ಕಟ್ಟಡ ಮೇಲ್ಚಾವಣಿ, ಸೇತುವೆ ಇತರೆ ಕಾಮಗಾರಿಗಳಲ್ಲಿ ಸಹ ತೆಂಗಿನ ನಾರಿನ ಭೂವಸ್ತ್ರವನ್ನು ಉಪಯೋಗಿಸಬಹುದಾಗಿದೆ.

ತೆಂಗಿನ ನಾರಿನ ಭೂವಸ್ತ್ರವನ್ನು ಉಪಯೋಗಿಸುವ ಬಗ್ಗೆ ನ.10 ರಂದು ಮಧ್ಯಾಹ್ನ 3 ಗಂಟೆಗೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್ ಸಭಾಂಗಣ, ಡೈರಿ ವೃತ್ತ, ಹಾಸನ ಇಲ್ಲಿ, ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ. ಆಸಕ್ತರು ಸದರಿ ಕಾರ್ಯಗಾರದಲ್ಲಿ ಭಾಗವಹಿಸಿ ಮಾಹಿತಿ ಪಡೆಯಬಹುದಾಗಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
***********


ಹಾಸನ ಜಿಲ್ಲೆಯ ಕೋವಿಡ್ -19 ವರದಿ. 

ಜಿಲ್ಲೆಯಲ್ಲಿಂದು ಹೊಸದಾಗಿ 91 ಕೋವಿಡ್ ಪ್ರಕರಣಗಳು ಪತ್ತೆ

ಹಾಸನ,ನ.06

(ಕರ್ನಾಟಕ ವಾರ್ತೆ):-


 ಜಿಲ್ಲೆಯಲ್ಲಿಂದು ಹೊಸದಾಗಿ 91 ಪ್ರಕರಣಗಳು ಪತ್ತೆಯಾಗಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 25,704ಕ್ಕೆ ಏರಿಕೆಯಾಗಿದೆ. 
 ಜಿಲ್ಲಾಸ್ಪತ್ರೆಯಲ್ಲಿ 1,042 ಮಂದಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, ಈವರೆಗೆ 24,228 ಮಂದಿ ಗುಣಮುಖರಾಗಿದ್ದಾರೆ. ತೀವ್ರ ನಿಗಾ ಘಟಕದಲ್ಲಿ 34 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. 
ಇಂದು ಪತ್ತೆಯಾದ 91 ಕೊರೋನ ಸೋಂಕು ಪ್ರಕರಣಗಳಲ್ಲಿ 30 ಮಂದಿ  ಚನ್ನರಾಯಪಟ್ಟಣ ತಾಲ್ಲೂಕಿನವರು, ಆಲೂರು ತಾಲ್ಲೂಕಿನ 2 ಮಂದಿ, 26 ಮಂದಿ ಹಾಸನ ತಾಲ್ಲೂಕು, 4 ಜನ ಹೊಳೆನರಸೀಪುರ ತಾಲ್ಲೂಕು, 8 ಮಂದಿ ಅರಕಲಗೂಡು ತಾಲ್ಲೂಕು, ಬೇಲೂರು ತಾಲ್ಲೂಕಿನ 13 ಮಂದಿ, ಸಕಲೇಶಪುರ ತಾಲ್ಲೂಕಿನ 4 ಮಂದಿ, ಅರಸೀಕೆರೆ ತಾಲ್ಲೂಕಿನ 4 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಸತೀಶ್ ಅವರು ತಿಳಿಸಿದ್ದಾರೆ.
*********




ಮಕ್ಕಳಿಗೆ ಕೋವಿಡ್-19 ಕುರಿತು ಅರಿವು ಕಾರ್ಯಕ್ರಮ

ಹಾಸನ.ನ.6

(ಕರ್ನಾಟಕ ವಾರ್ತೆ):-

 ಅರಕಲಗೂಡು ತಾಲ್ಲೂಕಿನ ಬಸವಾಪಟ್ಟಣ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಮತ್ತು ಆಶಾ ಕಾರ್ಯಕರ್ತೆಯರು ವಿವಿಧ ಹಳ್ಳಿಗಳ ಮಕ್ಕಳಿಗೆ ಕೋವಿಡ್-19 ತಡೆಗಟ್ಟಲು ಅನುಸರಿಸಬೇಕಾದ ಸ್ವಚ್ಚತಾ ಕ್ರಮಗಳ ಬಗ್ಗೆ ಪ್ರಾತ್ಯೇಕ್ಷಿಕೆ ಮೂಲಕ ಅರಿವು ಮೂಡಿಸಿದರು.
***********

ಕೋವಿಡ್-19 ತಡೆಗಟ್ಟುವ ಕುರಿತು ಅರಿವು ಕಾರ್ಯಕ್ರಮ

ಹಾಸನ.ನ.6

(ಕರ್ನಾಟಕ ವಾರ್ತೆ):- 

ಅರಕಲಗೂಡು ತಾಲ್ಲೂಕಿನ ಹುಲಿಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಮತ್ತು ಆಶಾ ಕಾರ್ಯಕರ್ತೆಯರು ಬೆಟ್ಟದಹಳ್ಳಿಯಲ್ಲಿನ ಮಕ್ಕಳಿಗೆ ಕೋವಿಡ್-19 ತಡೆಗಟ್ಟಲು ಅನುಸರಿಸಬೇಕಾದ ಸ್ವಚ್ಚತಾ ಕ್ರಮಗಳ ಬಗ್ಗೆ ಪ್ರಾತ್ಯೇಕ್ಷಿಕೆ ಮೂಲಕ ಅರಿವು ಮೂಡಿಸಿದರು.
***********


ನ.12 ರಂದು ಜಿಲ್ಲಾ ಮಟ್ಟದ ರಫ್ತು ಉತ್ತೇಜನ ಸಮಿತಿ ಸಭೆ

ಹಾಸನ.ನ.6

(ಕರ್ನಾಟಕ ವಾರ್ತೆ):- ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ನ.12 ರಂದು ಬೆಳಿಗ್ಗೆ 11.30 ಗಂಟೆಗೆ ಜಿಲ್ಲಾಧಿಕಾರಿಗಳ  ಕಾರ್ಯಾಲಯದ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ರಫ್ತು ಉತ್ತೇಜನ ಸಮಿತಿ ಸಭೆಯನ್ನು ಏರ್ಪಡಿಸಲಾಗಿದೆ. 
ಜಿಲ್ಲಾ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಫ್ತುದಾರರಿಗೆ ಸಂಬಂಧಿಸಿದಂತೆ ಯಾವುದಾದರೂ ಸಮಸ್ಯೆಗಳಿದ್ದಲ್ಲಿ, ಲಿಖಿತವಾಗಿ ಈ ಕಾರ್ಯಾಲಯಕ್ಕೆ ನ.10ರ ಒಳಗಾಗಿ ಸಲ್ಲಿಸಬಹುದಾಗಿದೆ.  
ಹೆಚ್ಚಿನ ಮಾಹಿತಿಗಾಗಿ ಈ ಕಚೇರಿ ದೂರವಾಣಿ ಸಂಖ್ಯೆ: 08172-296217ಗೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
***********



ಜಿಲ್ಲೆಯಲ್ಲಿನ ಮಳೆ ವರದಿ
ಹಾಸನ,ನ.06

(ಕರ್ನಾಟಕ ವಾರ್ತೆ):- 


ಜಿಲ್ಲೆಯಲ್ಲಿ ನ.5 ರಂದು ದಾಖಲೆಯ ಮಳೆಯಾಗಿರುವ ವರದಿ ಅನ್ವಯ ಸಕಲೇಶಪುರ ತಾಲ್ಲೂಕಿನ ಹೆತ್ತೂರು 8.2 ಮಿ.ಮೀ., ಮಿ.ಮೀ., ಮಿ.ಮೀ., ಹೊಸೂರು 37.8 ಮಿ.ಮೀ., ಯಸಳೂರು 12.2 ಮಿ.ಮೀ., ಶುಕ್ರವಾರಸಂತೆ 5 ಮಿ.ಮೀ. ಮಳೆಯಾಗಿದೆ. ಚನ್ನರಾಯಪಟ್ಟಣ ತಾಲ್ಲೂಕಿನ ನುಗ್ಗೇಹಳ್ಳಿ 4.8 ಮಿ.ಮೀ. ಮಳೆಯಾಗಿದೆ.
ಆಲೂರು ತಾಲ್ಲೂಕಿನ ಕುಂದೂರು 2.8 ಮಿ.ಮೀ. ಮಳೆಯಾಗಿದೆ. ಹೊಳೆನರಸೀಪುರ ತಾಲ್ಲೂಕಿನ ಹಳ್ಳಿ ಮೈಸೂರು 1 ಮಿ.ಮೀ. ಮಳೆಯಾಗಿದೆ. ಅರಕಲಗೂಡು ತಾಲ್ಲೂಕಿನ ಕಸಬ 4.1 ಮಿ.ಮೀ., ಕೊಣನೂರು 46 ಮಿ.ಮೀ., ದೊಡ್ಡಮಗ್ಗೆ 9.2 ಮಿ.ಮೀ., ಮಲ್ಲಿಪಟ್ಟಣ 10 ಮಿ.ಮೀ., ದೊಡ್ಡಬೆಮ್ಮತ್ತಿ 26.2 ಮಿ.ಮೀ., ಬಸವಾಪಟ್ಟಣ 47.8 ಮಿ.ಮೀ., ರಾಮನಾಥಪುರ 18.3 ಮಿ.ಮೀ. ಮಳೆಯಾಗಿದೆ.
**********

ಪತ್ರಿಕೋದ್ಯಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ

ಹಾಸನ.ನ.6

(ಕರ್ನಾಟಕ ವಾರ್ತೆ):- 

ತುಮಕೂರಿನ ಪ್ರತಿಷ್ಠಿತ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಅಂಗ ಸಂಸ್ಥೆಯಾದ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ 2020-21ನೇ ಸಾಲಿನಲ್ಲಿ ಸ್ನಾತಕೋತ್ತರ ಪದವಿ ಎಂ.ಎಸ್. ಕಮ್ಯುನಿಕೇಷನ್ ಮತ್ತು ಎಂ.ಎಸ್ಸಿ. ಎಲೆಕ್ಟ್ರಾನಿಕ್ ಮೀಡಿಯಾ ಕೋರ್ಸ್‍ಗಳಲ್ಲಿ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಮೇಲ್ಕಂಡ ಎರಡು ಕೋರ್ಸ್‍ಗಳಿಗೆ ತಲಾ ಒಂದು ಸೀಟು ಲಭ್ಯವಿದೆ. ಯಾವುದೇ ಪದವಿಯಲ್ಲಿ ಕನಿಷ್ಠ ಶೇ.45 ರಷ್ಟು ಅಂಕ (ಪರಿಶಿಷ್ಟ ಜಾತಿ-ಪಂಗಡದ ವಿದ್ಯಾರ್ಥಿಗಳಿಗೆ ಶೇ. 40 ರಷ್ಟು ಅಂಕ) ಪಡೆದವರು ಅರ್ಜಿ ಸಲ್ಲಿಸಬಹುದು. 
ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಸ್ವಯಂಘೋಷಿತ ದೃಢೀಕರಣ ಪ್ರಮಾಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಪದವಿ ಅಂಕಪಟ್ಟಿ ಸಲ್ಲಿಸಬೇಕು. ಈ ಎರಡು ಕೋರ್ಸ್‍ಗಳಿಗೆ ಉಚಿತ ಸೀಟನ್ನು ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ಹಳೇ ವಿದ್ಯಾರ್ಥಿಗಳ ಸಂಘದ ವಿದ್ಯಾರ್ಥಿಗಳಿಂದ ಧನಸಹಾಯ ನೀಡಲಾಗುತ್ತಿದೆ. ವಿಶ್ವ ವಿದ್ಯಾನಿಲಯ ನಿಗದಿ ಪಡಿಸಿರುವ ಸಂಪೂರ್ಣ ಶುಲ್ಕವನ್ನು ಭರಿಸಲಾಗುತ್ತಿದೆ.
ಆಸಕ್ತರು ಸ್ವಯಂ ಕೈಬರಹದ ಅರ್ಜಿಗಳನ್ನು ಈ ಕೆಳಕಂಡ ವಿಳಾಸಕ್ಕೆ ಅಂಚೆ ಅಥವಾ ಇ-ಮೇಲ್ ಮೂಲಕ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ನ.20 ಕೊನೆಯ ದಿನವಾಗಿದೆ. ಸಂದರ್ಶನದ ದಿನಾಂಕವನ್ನು ಅಭ್ಯರ್ಥಿಗಳಿಗೆ ತಿಳಿಸಲಾಗುವುದು ಎಂದು ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶರು ತಿಳಿಸಿದ್ದಾರೆ.
 ಹೆಚ್ಚಿನ ಮಾಹಿತಿಗಾಗಿ ಇ-ಮೇಲ್ ವಿಳಾಸ: muddesh08@gmail.com, udnagendra@gmail.com, jyothireddy06@gmail.com.ಹಾಗೂ ದೂರವಾಣಿ ಸಂಖ್ಯೆ: 9740693477, 9448808358, 9916181497ಗೆ ಸಂಪರ್ಕಿಸಬಹುದಾಗಿದೆ.
***************


ಕನ್ನಡ ಪುಸ್ತಕ ಪ್ರಾಧಿಕಾರದ ಎಲ್ಲಾ ಪುಸ್ತಕಗಳಿಗೆ ಶೇ.50 ರಷ್ಟು ರಿಯಾಯಿತಿ

ಹಾಸನ,ನ.06

(ಕರ್ನಾಟಕ ವಾರ್ತೆ):- 

ಕನ್ನಡರಾಜ್ಯೋತ್ಸವದ ಅಂಗವಾಗಿ 2020ರ ನವೆಂಬರ್ ತಿಂಗಳು ಪೂರ್ತಿ ಕನ್ನಡ ಪುಸ್ತಕ ಪ್ರಾಧಿಕಾರದ ಎಲ್ಲಾ ಪುಸ್ತಕಗಳನ್ನು ಶೇಕಡ 50 ರಷ್ಟು ರಿಯಾಯಿತಿ ದರಗಳಲ್ಲಿ  ಮಾರಾಟ ಮಾಡಲಾಗುವುದು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ  ಪ್ರಕಟಣೆ ತಿಳಿಸಿದೆ. 

ಬೆಂಗಳೂರಿನ ಕನ್ನಡ ಭವನದ ಸಿರಿಗನ್ನಡ ಪುಸ್ತಕ ಮಳಿಗೆಯಲ್ಲಿ ಹಾಗೂ ಎಲ್ಲಾ ಜಿಲ್ಲೆಗಳ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದಿಂದ ತೆರೆಯಲಾದ ಎಲ್ಲಾ ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಗಳಲ್ಲಿ  ಈ ರಿಯಾಯಿತಿ ಸೌಲಭ್ಯ ದೊರೆಯಲಿದೆ. ಅಲ್ಲದೆ ಕನ್ನಡ ಪುಸ್ತಕ ಪ್ರಾಧಿಕಾರದ ಆನ್‍ಲೈನ್ ನಲ್ಲಿ ಕೂಡ ಈ ಶೇ.50 ರಷ್ಟು ರಿಯಾಯಿತಿ ಲಭ್ಯವಿದೆ.

ಇದಲ್ಲದೆ ಕನ್ನಡ ಪುಸ್ತಕ ಪ್ರಾಧಿಕಾರದ ಪುಸ್ತಕಗಳನ್ನು ಅಂತರ್ಜಾಲದಲ್ಲಿಯೂ ಕೂಡ ಶೇ.50 ರಷ್ಟು ರಿಯಾಯಿತಿಯಲ್ಲಿ ಅಂದರೆ www.kannadapustakapradhikara.com ನಲ್ಲಿ ನಮ್ಮ ಪುಸ್ತಕಗಳು ವಿಭಾಗದಲ್ಲಿ ಆಯ್ಕೆ ಮಾಡಿ, ಆನ್‍ಲೈನ್ ಮೂಲಕ ಹಣ ಪಾವತಿಸಿ ಪುಸ್ತಕಗಳನ್ನು ಅಂಚೆ ಮೂಲಕ ಪಡೆಯಬಹುದಾಗಿದೆ.

ಕನ್ನಡ ಪುಸ್ತಕ ಪ್ರಾಧಿಕಾರವು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ಎಲ್ಲಾ ಪ್ರಕಾರದ ಸಾಹಿತ್ಯ ಕೃತಿಗಳನ್ನು ಈವರೆಗೆ ಪ್ರಕಟಿಸುತ್ತಾ ಬಂದಿದೆ. ಇವುಗಳಲ್ಲಿ ವ್ಯಕ್ತಿ ಚಿತ್ರಗಳು, ನಾಟಕಗಳು, ಅಲೆಮಾರಿ ಸಮುದಾಯ, ವೈದ್ಯಕೀಯ, ಪ್ರಾಚೀನ ಕನ್ನಡ ಸಾಹಿತ್ಯ, ಜಾನಪದ, ಪರಿಸರ, ಕೃಷಿ ಹೀಗೆ ಹಲವು ಹತ್ತು ಪ್ರಕಾರಗಳಲ್ಲಿ ಸಾಹಿತ್ಯ ಕೃತಿಗಳನ್ನು ಸುಮಾರು 360 ಶೀರ್ಷಿಕೆಗಳನ್ನು ಮುದ್ರಿಸಿ ಪ್ರಕಟಿಸಿದೆ. ಅತ್ಯಂತ ಮೌಲಿಕವಾದ, ಪ್ರಾಜ್ಞರಿಂದ ರಚಿತವಾದ ಈ ಕೃತಿಗಳನ್ನು ಜನಸಾಮಾನ್ಯರಿಗೆ ಸುಲಭ ಬೆಲೆಯಲ್ಲಿ ತಲುಪಿಸಬೇಕೆಂಬ ಉದ್ದೇಶ ಕನ್ನಡ ಪುಸ್ತಕ ಪ್ರಾಧಿಕಾರದ್ದಾಗಿದೆ.
*********




ನ.11 ರಂದು ಮಾಸಿಕ ಪ್ರಗತಿ ಪರಿಶೀಲನಾ ಸಭೆ

ಹಾಸನ,ನ.06

(ಕರ್ನಾಟಕ ವಾರ್ತೆ):-


 ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ವೇತಾ ದೇವರಾಜ್ ಅವರ ಅಧ್ಯಕ್ಷತೆಯಲ್ಲಿ 2020-21ನೇ ಸಾಲಿನ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ(20 ಅಂಶಗಳನ್ನು ಒಳಗೊಂಡಂತೆ) ಅಕ್ಟೋಬರ್ 2020ರ ಮಾಹೆಯ ಅಂತ್ಯಕ್ಕೆ ಮಾಸಿಕ ಪ್ರಗತಿ ಪರಿಶೀಲನಾ ಸಭೆಯನ್ನು ನ.11 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯತ್ ಹೊಯ್ಸಳ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಮಟ್ಟದ ಮಾಸಿಕ ಕೆ.ಡಿ.ಪಿ. ಪ್ರಗತಿ ಪರಿಶೀಲನಾ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಮುಖ್ಯ ಯೋಜನಾಧಿಕಾರಿಯವರು ತಿಳಿಸಿದ್ದಾರೆ.




**********


ಖಾಲಿ ಇರುವ ಸೀಟುಗಳಿಗೆ ಅರ್ಜಿ ಆಹ್ವಾನ

ಹಾಸನ,ನ.06

(ಕರ್ನಾಟಕ ವಾರ್ತೆ):- 


ನಗರದ ಶ್ರೀಮತಿ ಎಲ್.ವಿ. ಪಾಲಿಟೆಕ್ನಿಕ್‍ನಲ್ಲಿ 2020-21ನೇ ಸಾಲಿನ ಪ್ರಥಮ ವರ್ಷದ ಡಿಪ್ಲೊಮಾ ಕೋರ್ಸ್‍ಗಳಲ್ಲಿ ಖಾಲಿ ಉಳಿದಿರುವ ಸೀಟುಗಳಿಗೆ ಎಸ್.ಎಸ್.ಎಲ್.ಸಿ./ ತತ್ಸಮಾನ ಪರೀಕ್ಷೆಯಲ್ಲಿ ಶೇ. 35 ರಷ್ಟು ಅಂಕಗಳಿಸಿದ ಅಭ್ಯರ್ಥಿಗಳಿಂದ ಆಫ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
 ಆಸಕ್ತ ಅಭ್ಯರ್ಥಿಗಳು  ನ.14 ರೋಳಗೆ ಅರ್ಜಿ ಸಲ್ಲಿಸಿ ಪ್ರವೇಶಾತಿ ಪಡೆಯಬಹುದಾಗಿದೆ. ಶೇ.40 ರಷ್ಟು ಮತ್ತು ಅದಕ್ಕಿಂತ ಹೆಚ್ಚು ಅಂಗವಿಕಲತೆ ಹೊಂದಿರುವ ವಿಶೇಷ ಚೇತನ ಅಭ್ಯರ್ಥಿಗಳಿಗೆ 25 ಸೀಟುಗಳ ನೇರ ಪ್ರವೇಶವಿರುತ್ತದೆ ಮತ್ತು ಉಚಿತ ಶಿಕ್ಷಣ ನೀಡಲಾಗುತ್ತದೆ.
 ಹೆಚ್ಚಿನ ಮಾಹಿತಿಗಾಗಿ ಶ್ರೀಮತಿ ಎಲ್.ವಿ. ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾದ ವಸಂತ್ ಕುಮಾರ್ ಡಿ.ಹೆಚ್. ಅವರನ್ನು ಕಚೇರಿ ಸಮಯದಲ್ಲಿ ಭೇಟಿ ಮಾಡಬಹುದಾಗಿದೆ.
*********

#ಹಾಸನ 

#ವಿಮರ್ಶಾ -vimarsha 

#today's news

#hassan


#ದಿನ ಸುದ್ದಿ ದರ್ಶನ 

*ಹರೀಶ್ ಹೆಚ್ ಆರ್ 
ಕೋಟೆ *


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹಾಸನ ಜಿಲ್ಲೆಯಲ್ಲಿ ಸ್ವಯಂ ಉದ್ಯೋಗಾವಕಾಶಗಳು.

ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯಲ್ಲಿ ನೆಲೆಸಿರುವ ಗೃಹಿಣಿಯರು, ನಿವೃತ್ತ ಅಧಿಕಾರಿಗಳು /ನೌಕರರು ಮತ್ತು ನಿರುದ್ಯೋಗಿಗಳಿಗೆ ಆರ್ಥಿಕ ವಲಯದಲ್ಲಿ ಹೂಡಿಕೆ ಇಲ್ಲದೆ ವೃತ್ತಿ ಅವಕಾಶಗಳು / ವ್ಯಾಪಾರ ಅವಕಾಶಗಳು  ಪುರುಷ ಮತ್ತು  ಮಹಿಳೆಯರಿಗೆ   ವಯಸ್ಸಿನ ಮಿತಿ: - 25 ರಿಂದ 65 ವರ್ಷಗಳು.  ದಯವಿಟ್ಟು ನಿಮ್ಮ ವಿವರಗಳನ್ನು ಕೆಳಗಿನ ಇಮೇಲ್ ಐಡಿಗೆ ಕಳುಹಿಸಿ.  freelanceadvertisingthassan@gmail.com  ಅಥವಾ  ಸಂಪರ್ಕಿಸಿ  ವಾಟ್ಸಾಪ್ ಸಂದೇಶಗಳು ಮಾತ್ರ  7090899728  Career opportunities /business opportunities with out an investments in financial sector for housewives ,retired officials /employees and unemployed persons residing in Hassan district, Karnataka state India For both male and female. Age limit:- 25 to 65 years. Please send your details to below email id. freelanceadvertisingathassan@gmail.com Or  Contact  WhatsApp messages only 070908 99728

ಉತ್ತಮ ಫಲಿತಾಂಶ , ಹಣ ಉಳಿತಾಯ.

ನಾನು ನೆಟ್‌ಸರ್ಫ್ ಡೈರೆಕ್ಟ್‌ನೊಂದಿಗೆ ಕೆಲಸ ಮಾಡುತ್ತಿದ್ದೇನೆ. ನಾನು ನೆಟ್ಸರ್ಫ್ ಉತ್ಪನ್ನಗಳನ್ನು ನಿಯಮಿತವಾಗಿ ಬಳಸುತ್ತಿದ್ದೇನೆ. ನಾನು ನಿಮಗೆ ಈ ಉತ್ಪನ್ನಗಳನ್ನು ಬಲವಾಗಿ ಶಿಫಾರಸು ಮಾಡುತ್ತೇವೆ. 'NETSURF DIRECT' 5 ವಿವಿಧ ವಿಭಾಗಗಳಲ್ಲಿ 90 ಕ್ಕೂ ಹೆಚ್ಚು ಗಿಡಮೂಲಿಕೆ ಉತ್ಪನ್ನಗಳನ್ನು ನೀಡುತ್ತದೆ ಅಂದರೆ ಆರೋಗ್ಯ ರಕ್ಷಣೆ, ವೈಯಕ್ತಿಕ ಆರೈಕೆ, ಬಣ್ಣ ಸೌಂದರ್ಯವರ್ಧಕಗಳು, ಗೃಹ ಆರೈಕೆ ಮತ್ತು ಕೃಷಿ. ಈ ಉತ್ಪನ್ನಗಳನ್ನು ಭಾರತದಾದ್ಯಂತ 2.5 ಮಿಲಿಯನ್‌ಗಿಂತಲೂ ಹೆಚ್ಚು ಗ್ರಾಹಕರು ನಂಬಿದ್ದಾರೆ. ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೆಟ್‌ಸರ್ಫ್ ವರ್ಲ್ಡ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ ಮತ್ತು ಎಲ್ಲಾ ನೆಟ್‌ಸರ್ಫ್ ಉತ್ಪನ್ನಗಳ ಮೇಲೆ ಅತ್ಯಾಕರ್ಷಕ ಕೊಡುಗೆಗಳನ್ನು ಪಡೆದುಕೊಳ್ಳಿ. ಒಮ್ಮೆ ನೀವು ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿದ ನಂತರ, ನನ್ನ ಮೊಬೈಲ್ ಸಂಖ್ಯೆಯನ್ನು (8453502625) "ಉಲ್ಲೇಖಿಸಿದವರು" ನಲ್ಲಿ ನಮೂದಿಸಿ ಮತ್ತು ನಿಮ್ಮ 1ನೇ ಖರೀದಿಯಿಂದ ಪುನಃ ಪಡೆದುಕೊಳ್ಳಬಹುದಾದ ರೂ.100 ವೋಚರ್ ಅನ್ನು ಪಡೆಯಿರಿ. Andriod ಬಳಕೆದಾರರು: https://bit.ly/3SxEkfB ಆಪಲ್ ಬಳಕೆದಾರರು: https://apple.co/3Ace2JT   I am working with Netsurf Direct. I am using Netsurf products regularly. I strongly recommend these products to you .   'NETSURF DIRECT...

ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ (92) ವಿಧಿವಶ. ನಾಳೆ ಅಂತ್ಯಕ್ರಿಯೆ

ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಇನ್ನಿಲ್ಲ:- ತಡ ರಾತ್ರಿ ನಿಧನರಾಗಿರುವ ಎಸ್.ಎಂ ಕೃಷ್ಣ ಅನಾರೋಗ್ಯದಿಂದ ಬಳಲುತ್ತಿದ್ದ ಎಸ್.ಎಂ ಕೃಷ್ಣ ಇತ್ತೀಚೆಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ  ಎಸ್.ಎಂ.ಕೃಷ್ಣ (92) ಇಂದು ವಿಧಿವಶರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಎಸ್.ಎಂ.ಕೃಷ್ಣ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಅವರು ಚಿಕಿತ್ಸೆ ಫಲಕಾರಿಯಾಗದೆ    ಕೊನೆಯುಸಿರೆಳೆದಿದ್ದಾರೆ. ಎಸ್​ಎಂ ಕೃಷ್ಣ ಅವರು ಪೂರ್ತಿ ಹೆಸರು ಸೋಮನಹಳ್ಳಿ ಮಲ್ಲಯ್ಯ ಕೃಷ್ಣ. ಮಂಡ್ಯದ ಸೋಮನಹಳ್ಳಿಯಲ್ಲಿ 1932ರಲ್ಲಿ ಜನಿಸಿದ್ದ ಅವರು, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದುಕೊಂಡಿದ್ದರು. ಎಸ್‌ಎಂ ಕೃಷ್ಣ ಅವರು 1999 ರಿಂದ 2004ರವರೆಗೆ ಕರ್ನಾಟಕದ 16ನೇ ಮುಖ್ಯಮಂತ್ರಿಗಳಾಗಿದ್ದರು. ನಂತರ 2004 ರಿಂದ 2008ರವರೆಗೆ ಮಹಾರಾಷ್ಟ್ರದ ರಾಜ್ಯಪಾಲರಾಗಿ, ಕೇಂದ್ರ ವಿದೇಶಾಂಗ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು. ಸ್ಪೀಕರ್ ಆಗಿಯೂ ಸೇವೆ ಸಲ್ಲಿಕೆ ಡಿಸೆಂಬರ್ 1989ರಿಂದ ಜನವರಿ 1993ರವರೆಗೆ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಆಗಿಯೂ ಸೇವೆ ಸಲ್ಲಿಸಿದ್ದರು. 1971 ರಿಂದ 2014ರವರೆಗೆ ವಿವಿಧ ಕಾಲಘಟ್ಟದಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರು ಆಗಿದ್ದರು. ನಾಳೆ ಎಸ್​​ಎಂ ಕೃಷ್ಣ ಅವರ ಅಂತ್ಯಕ್ರಿಯೆ; ಬೆಂಗಳೂರಲ್ಲಿ ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ.. ಫೋಟೋ ಕೃಪೆ :-ವಿಕಿಪೀ...