ವಿಷಯಕ್ಕೆ ಹೋಗಿ

jai jai swami vivekananda (ಜೈ ಜೈ ಸ್ವಾಮಿ ವಿವೇಕಾನಂದ).

ನೀನು ಇನ್ನೊಬ್ಬರಿಗೋಸ್ಕರ ಬದುಕಿದರೆ ಅದಕ್ಕೆ ಬದುಕು ಅಂತಾರೆ , ಇಲ್ಲಾಂದ್ರೆ ನೀನು ಬದುಕಿದ್ದೂ ಸತ್ತಂತೆಯೇ ' ಇದು ಮಹಾ ಚೇತನ ಸ್ವಾಮಿ ವಿವೇಕಾನಂದರ ಮಾತುಗಳು. ಇಡೀ ವಿಶ್ವಕ್ಕೆ ಅವರು ಸಾರಿದ ಇಂತಹ ನುಡಿಗಳು ಯುವಕರ ಎದೆಯಲ್ಲಿ ಬೆಚ್ಚಗೆ ಕೂತಿದ್ದಂತೂ ನಿಜ. ಎಲ್ಲರ ಪಾಲಿಗೆ ಅವರು ಒಂದು ಸ್ಪೂರ್ತಿಯ ಸೆಲೆ. ಅವರಾಡಿದ ನುಡಿಗಳನ್ನೇ ದಾರಿದೀಪವಾಗಿಸಿ , ಅವರು ಬದುಕಿ ನಡೆದು ತೋರಿಸಿದ ದಾರಿಯನ್ನೇ ಅನುಸರಿಸಿ , ಅವರನ್ನು ಬದುಕಿನ ದಿವ್ಯ ಚೇತನವನ್ನಾಗಿಸಿ ಆರಾಧಿಸಿಕೊಂಡು ಬಂದಂತಹ ಮಂಗಳೂರಿನ ಒಂದು ಯುವಕರ ತಂಡ 'ಜೈ ಜೈ ಸ್ವಾಮಿ ವಿವೇಕಾನಂದ ' ಎಂಬ ಸಾಹಿತ್ಯ ಸಂಗೀತ ದ್ರೃಶ್ಯ ಮುದ್ರಿಕೆಯನ್ನು  ಹೊರತಂದಿದ್ದಾರೆ. ಇದರ ಹಿರಿತನ ಏನೆಂದರೆ ಈ ಸಂಗೀತ ಮುದ್ರಿಕೆ 4 ಭಾಷೆಯಲ್ಲಿ( ಇಂಗ್ಲಿಷ್ ಹಿಂದಿ ಕನ್ನಡ ಮತ್ತು ತುಳು) ತಯಾರಾಗಿರುವುದು. ಬಹುಶ ಇದು ಆಲ್ಬಮ್ ನ ಇತಿಹಾಸದಲ್ಲಿಯೇ ಮೊದಲು ಎಂದರೆ ತಪ್ಪಾಗಲಾರದು. 
ಇಂತಹ ಒಂದು ಪ್ರಯತ್ನಕ್ಕೆ ಕೈ ಹಾಕಿದವರು 15 ಕ್ಕಿಂತಲೂ ಹೆಚ್ಚು ಕಿರುಚಿತ್ರಗಳನ್ನು ರಚಿಸಿ ನಿರ್ದೇಶಿಸಿ ಅಂತಾರಾಷ್ಟ್ರೀಯ ಪುರಸ್ಕಾರ ಪಡೆದು 'ಚೌಕಿ ರಂಗಿನ ಮನೆ' ಎಂಬ ಕಲಾತ್ಮಕ ಹಾಗು ಪ್ರಯೋಗಾತ್ಮಕ ಚಲನಚಿತ್ರ ವನ್ನು  ನಿರ್ದೇಶಿಸಿ , ನಿರ್ಮಿಸಿದ ಸಿ. ಜಯಪ್ರಕಾಶ್ ರವರು. 
ಜೈ ಜೈ ಸ್ವಾಮಿ ವಿವೇಕಾನಂದ ಜಯಪ್ರಕಾಶ್ ರವರ ಕನಸಿನ ಕೂಸು. ಇದಕ್ಕೆ ಎರಡು ವರ್ಷಗಳಿಂದಲೂ ತನ್ನನ್ನು ತಾನು ತೊಡಗಿಸಿಕೊಂಡು ಇದೀಗ ಆಗಸ್ಟ್ 15 /2020 ರಂದು ಬಿಡುಗಡೆಗೆ ಸಿದ್ಧಗೊಳಿಸಿದ್ದಾರೆ. 
ಇದರ ಮೂಲ ಇಂಗ್ಲಿಷ್ ಸಾಹಿತ್ಯವನ್ನು ಸ್ವತಃ ಜಯಪ್ರಕಾಶ್ರವರೇ ಬರೆದು, ನಿರ್ದೇಶನ ಮಾಡಿದ್ದಾರೆ. ಹಿಂದಿಯ ಸಾಹಿತ್ಯ ಮೆಲ್ವಿನ್ ಅಂತೋನಿ ಡಿಸೋಜಾ ರವರದ್ದಾದರೆ ತುಳು ಹಾಗು ಕನ್ನಡ ಸಾಹಿತ್ಯ ವಿಜೇಶ್ ಮಂಗಳಾದೇವಿ ಬರೆದ್ದಿದ್ದಾರೆ.  
ಕನ್ನಡ ಚಿತ್ರರಂಗದಲ್ಲಿಯೇ ಒಂದು ಮೈಲಿಗಲ್ಲು ಎಂದೆನಿಸಿದ K G F ಚಿತ್ರದ ' ಕನ್ನಡದ ಜೋಕೆ ' ಹಾಗೂ ಅದರ 4 ಭಾಷೆಗಳ ಹಾಡನ್ನು ಹಾಡಿದ ಗಾಯಕಿ 'ಐರಾ ಉಡುಪಿ ' ಯವರು ನಮ್ಮ ಈ ಆಲ್ಬಮ್ ನಲ್ಲಿ ಮತ್ತೊಮ್ಮೆ 4 ಭಾಷೆಯ ಹಾಡಿಗೂ ದನಿಯಾಗಿದ್ದಾರೆ. ಅವರ ಅದ್ಭುತ ಕಂಠ ಸಿರಿಯ ಜೊತೆಗೆ ಈ ಆಲ್ಬಮ್ ನಲ್ಲಿ ನಟಿಸಿರುವುದು ಕೂಡ ಇದರ ಮೆರಗನ್ನು ಹೆಚ್ಚಿಸಿದೆ. 
ಈ ಆಲ್ಬಮ್ ಗೆ ಅದ್ಭುತ ಸಂಗೀತ ನೀಡಿದ್ದಾರೆ ಸಂದೇಶ್ ಬಾಬು ರವರು. ಭಿತ್ತಿಚಿತ್ರದ ವಿನ್ಯಾಸ ಮತ್ತು ಸಂಕಲನ ಸುಹಾಸ್ ಎನ್ ರವರದ್ದು. ಛಾಯಾಗ್ರಹಣ ಮಾಡಿದ್ದಾರೆ ದೇರಳಕಟ್ಟೆ ಸುರೇಶ್ ರವರು.  
ಸೋಲ್ಸ್ ರಿದಮ್ಸ್  ಎಂಬ ಯೂ  ಟ್ಯೂಬ್ ವಾಹಿನಿಯಲ್ಲಿ 15/08/2020  ರಂದು ಬಿಡುಗಡೆಯಾಗಲಿದೆ. 
ಕೆಚ್ಚೆದೆಗೆ ಕಿಚ್ಚಿಡುವಂತಹ, ಮಲಗಿದ್ದವರನ್ನು ಬಡಿದೆಬ್ಬಿಸುವಂತಹ ವಿವೇಕಾನಂದರ ಅದ್ಭುತ ನುಡಿಗಳು ಹಾಡಿನ ರೂಪವಾಗಿ ಭಿನ್ನವಾಗಿ , ಸ್ಪೂರ್ತಿಯಾಗಿ ಸಂಗೀತ ಪ್ರಿಯರಿಗೆ ಹಬ್ಬದೂಟವಾಗುವುದಂತೂ ನಿಜ.  
ಒಳ್ಳೆಯ ಪ್ರಯತ್ನಕ್ಕೆ ಬೆನ್ನುತಟ್ಟುವ ನಿಮ್ಮ ಪರಿ ನಿರಂತರವಿರಲಿ , ಸಹಕಾರ ಎಂದಿನಂತರಲಿ.
ಇಂತೀ ನಿಮ್ಮ 
ದೇರಳಕಟ್ಟೆ ಸುರೇಶ್ 
( ಚೌಕಿ ಚಿತ್ರದ ಛಾಯಾಗ್ರಾಹಕ )
ಈ ಕೆಳಕಂಡ ಯೂ ಟ್ಯೂಬ್ ಕೊಂಡಿಯನ್ನು ಸಂಪರ್ಕಿಸಿ.
#ಜೈಜೈಸ್ವಾಮಿವಿವೇಕಾನಂದ
#ಸೋಲ್ಸ್ ರಿದಮ್ಸ್ 

https://youtu.be/J-587oCRt9M

ಜೈ ಜೈ ಸ್ವಾಮಿ ವಿವೇಕಾನಂದ ಮ್ಯೂಸಿಕ್ ಆಲ್ಬಮ್ನ ಮೋಷನ್ ಪೋಸ್ಟರ್ ಬಿಡುಗಡೆಗೊಂಡಿದೆ. 
ವೀಕ್ಷಿಸಿ ಮತ್ತು ಚಂದದಾರಾಗಿರಿ ಹಾಗೂ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
'
If you live for someone else, live for it,' he said. It is true that the words he uttered to the whole world were warm in the chest of the youth. He is an inspirational celebrity for everyone. A group of youngsters from Mangalore have come up with a lyrical video called 'Jai Jai Swami Vivekananda', following the words he gave them, following the way they lived and worshiped him as the divine spirit of life. The album is in 4 languages. Perhaps this is the first time in the history of the album that it can go reach many souls.
He has directed and produced more than 15 short films, an internationally acclaimed and choreographic and experimental film 'Chowki Ranginamane'. By Jayaprakash.
Jai Jai Swami Vivekananda Jayaprakash's dream come true. He has been involved with it for over two years and is now set to be for release on  15/08/2020
Its original English lyrics were written and directed by Jayaprakash himself. Melvin Anthony D'Souza is the author of Hindi lyrics.
Singer 'Ira Udupi', who sang the song 'Kannada Joke' and its 4 languages ​​in KGF, is a milestone in Kannada cinema. The album's performance, along with her spectacular voice, have also enhanced it.
Sandesh Babu has composed the music for this album. Poster design and editing by Suhas N Photography is by Deralakatte Suresh.
Soul's Rhythm will be released on YouTube channel August 15th/2020
Vivekananda's brilliant words, such as brave and insulting those who slept, and making them awake are also thrills to  music lovers.
Continue your co operation for good endeavors, always co operate.

This is yours
Suresh deralakatte
(Photographer of Chowki ranginamane )

#jaijaiswamivivekananda
#soulsrhythms
Releasing in 4 Language English hindi kannada and tulu
Exclusive in #Soul'sRhythm YouTube channel.
On August 15 at 9am.

https://youtu.be/J-587oCRt9M










ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹಾಸನ ಜಿಲ್ಲೆಯಲ್ಲಿ ಸ್ವಯಂ ಉದ್ಯೋಗಾವಕಾಶಗಳು.

ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯಲ್ಲಿ ನೆಲೆಸಿರುವ ಗೃಹಿಣಿಯರು, ನಿವೃತ್ತ ಅಧಿಕಾರಿಗಳು /ನೌಕರರು ಮತ್ತು ನಿರುದ್ಯೋಗಿಗಳಿಗೆ ಆರ್ಥಿಕ ವಲಯದಲ್ಲಿ ಹೂಡಿಕೆ ಇಲ್ಲದೆ ವೃತ್ತಿ ಅವಕಾಶಗಳು / ವ್ಯಾಪಾರ ಅವಕಾಶಗಳು  ಪುರುಷ ಮತ್ತು  ಮಹಿಳೆಯರಿಗೆ   ವಯಸ್ಸಿನ ಮಿತಿ: - 25 ರಿಂದ 65 ವರ್ಷಗಳು.  ದಯವಿಟ್ಟು ನಿಮ್ಮ ವಿವರಗಳನ್ನು ಕೆಳಗಿನ ಇಮೇಲ್ ಐಡಿಗೆ ಕಳುಹಿಸಿ.  freelanceadvertisingthassan@gmail.com  ಅಥವಾ  ಸಂಪರ್ಕಿಸಿ  ವಾಟ್ಸಾಪ್ ಸಂದೇಶಗಳು ಮಾತ್ರ  7090899728  Career opportunities /business opportunities with out an investments in financial sector for housewives ,retired officials /employees and unemployed persons residing in Hassan district, Karnataka state India For both male and female. Age limit:- 25 to 65 years. Please send your details to below email id. freelanceadvertisingathassan@gmail.com Or  Contact  WhatsApp messages only 070908 99728

ಉತ್ತಮ ಫಲಿತಾಂಶ , ಹಣ ಉಳಿತಾಯ.

ನಾನು ನೆಟ್‌ಸರ್ಫ್ ಡೈರೆಕ್ಟ್‌ನೊಂದಿಗೆ ಕೆಲಸ ಮಾಡುತ್ತಿದ್ದೇನೆ. ನಾನು ನೆಟ್ಸರ್ಫ್ ಉತ್ಪನ್ನಗಳನ್ನು ನಿಯಮಿತವಾಗಿ ಬಳಸುತ್ತಿದ್ದೇನೆ. ನಾನು ನಿಮಗೆ ಈ ಉತ್ಪನ್ನಗಳನ್ನು ಬಲವಾಗಿ ಶಿಫಾರಸು ಮಾಡುತ್ತೇವೆ. 'NETSURF DIRECT' 5 ವಿವಿಧ ವಿಭಾಗಗಳಲ್ಲಿ 90 ಕ್ಕೂ ಹೆಚ್ಚು ಗಿಡಮೂಲಿಕೆ ಉತ್ಪನ್ನಗಳನ್ನು ನೀಡುತ್ತದೆ ಅಂದರೆ ಆರೋಗ್ಯ ರಕ್ಷಣೆ, ವೈಯಕ್ತಿಕ ಆರೈಕೆ, ಬಣ್ಣ ಸೌಂದರ್ಯವರ್ಧಕಗಳು, ಗೃಹ ಆರೈಕೆ ಮತ್ತು ಕೃಷಿ. ಈ ಉತ್ಪನ್ನಗಳನ್ನು ಭಾರತದಾದ್ಯಂತ 2.5 ಮಿಲಿಯನ್‌ಗಿಂತಲೂ ಹೆಚ್ಚು ಗ್ರಾಹಕರು ನಂಬಿದ್ದಾರೆ. ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೆಟ್‌ಸರ್ಫ್ ವರ್ಲ್ಡ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ ಮತ್ತು ಎಲ್ಲಾ ನೆಟ್‌ಸರ್ಫ್ ಉತ್ಪನ್ನಗಳ ಮೇಲೆ ಅತ್ಯಾಕರ್ಷಕ ಕೊಡುಗೆಗಳನ್ನು ಪಡೆದುಕೊಳ್ಳಿ. ಒಮ್ಮೆ ನೀವು ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿದ ನಂತರ, ನನ್ನ ಮೊಬೈಲ್ ಸಂಖ್ಯೆಯನ್ನು (8453502625) "ಉಲ್ಲೇಖಿಸಿದವರು" ನಲ್ಲಿ ನಮೂದಿಸಿ ಮತ್ತು ನಿಮ್ಮ 1ನೇ ಖರೀದಿಯಿಂದ ಪುನಃ ಪಡೆದುಕೊಳ್ಳಬಹುದಾದ ರೂ.100 ವೋಚರ್ ಅನ್ನು ಪಡೆಯಿರಿ. Andriod ಬಳಕೆದಾರರು: https://bit.ly/3SxEkfB ಆಪಲ್ ಬಳಕೆದಾರರು: https://apple.co/3Ace2JT   I am working with Netsurf Direct. I am using Netsurf products regularly. I strongly recommend these products to you .   'NETSURF DIRECT...

ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ (92) ವಿಧಿವಶ. ನಾಳೆ ಅಂತ್ಯಕ್ರಿಯೆ

ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಇನ್ನಿಲ್ಲ:- ತಡ ರಾತ್ರಿ ನಿಧನರಾಗಿರುವ ಎಸ್.ಎಂ ಕೃಷ್ಣ ಅನಾರೋಗ್ಯದಿಂದ ಬಳಲುತ್ತಿದ್ದ ಎಸ್.ಎಂ ಕೃಷ್ಣ ಇತ್ತೀಚೆಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ  ಎಸ್.ಎಂ.ಕೃಷ್ಣ (92) ಇಂದು ವಿಧಿವಶರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಎಸ್.ಎಂ.ಕೃಷ್ಣ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಅವರು ಚಿಕಿತ್ಸೆ ಫಲಕಾರಿಯಾಗದೆ    ಕೊನೆಯುಸಿರೆಳೆದಿದ್ದಾರೆ. ಎಸ್​ಎಂ ಕೃಷ್ಣ ಅವರು ಪೂರ್ತಿ ಹೆಸರು ಸೋಮನಹಳ್ಳಿ ಮಲ್ಲಯ್ಯ ಕೃಷ್ಣ. ಮಂಡ್ಯದ ಸೋಮನಹಳ್ಳಿಯಲ್ಲಿ 1932ರಲ್ಲಿ ಜನಿಸಿದ್ದ ಅವರು, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದುಕೊಂಡಿದ್ದರು. ಎಸ್‌ಎಂ ಕೃಷ್ಣ ಅವರು 1999 ರಿಂದ 2004ರವರೆಗೆ ಕರ್ನಾಟಕದ 16ನೇ ಮುಖ್ಯಮಂತ್ರಿಗಳಾಗಿದ್ದರು. ನಂತರ 2004 ರಿಂದ 2008ರವರೆಗೆ ಮಹಾರಾಷ್ಟ್ರದ ರಾಜ್ಯಪಾಲರಾಗಿ, ಕೇಂದ್ರ ವಿದೇಶಾಂಗ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು. ಸ್ಪೀಕರ್ ಆಗಿಯೂ ಸೇವೆ ಸಲ್ಲಿಕೆ ಡಿಸೆಂಬರ್ 1989ರಿಂದ ಜನವರಿ 1993ರವರೆಗೆ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಆಗಿಯೂ ಸೇವೆ ಸಲ್ಲಿಸಿದ್ದರು. 1971 ರಿಂದ 2014ರವರೆಗೆ ವಿವಿಧ ಕಾಲಘಟ್ಟದಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರು ಆಗಿದ್ದರು. ನಾಳೆ ಎಸ್​​ಎಂ ಕೃಷ್ಣ ಅವರ ಅಂತ್ಯಕ್ರಿಯೆ; ಬೆಂಗಳೂರಲ್ಲಿ ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ.. ಫೋಟೋ ಕೃಪೆ :-ವಿಕಿಪೀ...